'ಪರಮಾತ್ಮ'ನನ್ನು ಸ್ಮರಿಸಿದ ಯೋಗರಾಜ್ ಭಟ್-ಜಯಣ್ಣ ಫಿಲಂಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದೀಪಾ ಸನ್ನಿಧಿ ನಟಿಸಿದ್ದ ಪರಮಾತ್ಮ ಸಿನಿಮಾ ತೆರೆಕಂಡು 9 ವರ್ಷ ಕಳೆದಿದೆ. ಈ ವಿಶೇಷ ದಿನದಂದು ನಿರ್ದೇಶಕ ಯೋಗರಾಜ್ ಭಟ್ ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
''ಈ ಕನ್ನಡ ಚಿತ್ರವನ್ನು ಸದಾ ನೆನಪಿಸಿಕೊಳ್ಳುವ ಪ್ರತಿಯೊಬ್ಬ ಪ್ರೇಕ್ಷಕನಿಗು ನಾನು ಮತ್ತು ನನ್ನ ತಂಡ ಈ ಜನ್ಮ ಋಣಿಗಳಾಗಿ ಇರುತ್ತೇವೆ. ಜೈ ಪರಮಾತ್ಮ'' ಎಂದು ನಿರ್ದೇಶಕ ಯೋಗರಾಜ್ ಭಟ್ ಧನ್ಯವಾದ ಅರ್ಪಿಸಿದ್ದಾರೆ.
ತಮ್ಮ ನಿರ್ಮಾಣ ಸಂಸ್ಥೆಯಡಿ ನಿರ್ಮಾಣವಾಗಿದ್ದ ಪರಮಾತ್ಮ ಸಿನಿಮಾ 9 ವರ್ಷ ಪೂರೈಸಿದ ಹಿನ್ನೆಲೆ ಜಯಣ ಫಿಲಂಸ್ ಸಂಸ್ಥೆ ಸಹ ಈ ಚಿತ್ರವನ್ನ ಸ್ಮರಿಸಿಕೊಂಡಿದೆ.

ಯೋಗರಾಜ್ ಭಟ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಬಂದ ಮೊದಲ ಚಿತ್ರ. ಪುನೀತ್ ರಾಜ್ ಕುಮಾರ್ ಮತ್ತು ದೀಪಾ ಸನ್ನಿಧಿ ಒಟ್ಟಿಗೆ ನಟಿಸಿದ್ದ ಪ್ರಥಮ ಚಿತ್ರ. ದೀಪಾ ಸನ್ನಿಧಿ ನಟಿಸಿದ ಎರಡನೇ ಸಿನಿಮಾ ಇದು.
ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡು ಸೂಪರ್ ಹಿಟ್ ಆಗಿದ್ದವು. ನಟಿ ಐಂದ್ರಿತಾ ರೇ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಕ್ಟೋಬರ್ 6, 2011 ರಂದು ಪರಮಾತ್ಮ ಸಿನಿಮಾ ತೆರೆಕಂಡಿತ್ತು.


Click it and Unblock the Notifications











