For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ವಿಶೇಷ ದಿನ: ಯಾಕೆ?

  |

  ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ವಿಶೇಷವಾದ ದಿನ. ಅಂತಹ ವಿಶೇಷ ಏನಿದೆ ಅಂತ ಯೋಚಿಸುತ್ತಿದ್ದೀರಾ? ಇಂದು ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಪೃಥ್ವಿ ಸಿನಿಮಾ ರಿಲೀಸ್ ಆಗಿ 10 ವರ್ಷಗಳು ಕಳೆದಿವೆ.

  ಈ ವರ್ಷ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶಿವಣ್ಣ ಏನು ಮಾಡುತ್ತಿದ್ದಾರೆ | Shivarajkumar | Raj kumar Birthday

  ಹೌದು, ಕನ್ನಡ ಚಿತ್ರಪ್ರಿಯರ ಮನ ಸೆಳೆದಿದ್ದ ಪೃಥ್ವಿ ಸಿನಿಮಾಗೆ 10 ವರ್ಷದ ಸಂಭ್ರಮ. ದಶಕದ ಹಿಂದೆ ಅಂದರೆ 2010 ಏಪ್ರಿಲ್ 23ರಂದು ಪೃಥ್ವಿ ಸಿನಿಮಾ ರಾಜ್ಯದಾದ್ಯಂತ ತೆರೆಗೆ ಬಂದಿತ್ತು.

  ಚಿತ್ರದಲ್ಲಿ ಪುನೀತ್ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಅಬ್ಬರಿಸಿದ್ದರು. ಖಡಕ್ ಆಫೀಸರ್ ಆಗಿ ಮಿಂಚಿದ್ದ ಅಪ್ಪು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಪೃಥ್ವಿ ನಿರ್ದೇಶಕ ಜಾಕೋಬ್ ವರ್ಗೀಸ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಬಳ್ಳಾರಿಯಲ್ಲಿ ನಡೆಯುವ ಗಣಿಗಾರಿಕೆ ಬಗ್ಗೆ ನೈಜವಾಗಿ ಕಟ್ಟಿಕೊಟ್ಟಿದರು ನಿರ್ದೇಶಕರು.

  ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಕಾಣಿಸಿಕೊಂಡಿದ್ದರು. ಮಿಲನ ಚಿತ್ರದ ನಂತರ ಪುನೀತ್ ಮತ್ತು ಪಾರ್ವತಿ ಇಬ್ಬರು ಪೃಥ್ವಿ ಚಿತ್ರದ ಮೂಲಕ ಎರಡನೆ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 10 ವರ್ಷದ ಸಂಭ್ರಮದಲ್ಲಿರುವ ಪೃಥ್ವಿ ಚಿತ್ರಕ್ಕೆ ಅಭಿಮಾನಿಗಳು ವಿಶ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

  English summary
  Power star Puneeth Rajkumar starrer Pruthvi movie completed 10 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X