»   » 'ರಾಜಕುಮಾರ'ನಿಗೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್

'ರಾಜಕುಮಾರ'ನಿಗೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.['ರಾಜಕುಮಾರ' ನೋಡುವುದಕ್ಕೂ ಮುಂಚೆ ಈ ಸಂಗತಿಗಳನ್ನ ತಿಳಿದುಕೊಳ್ಳಿ! ]

ದೇಶಾದ್ಯಂತ ಸುಮಾರು 400ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಎಂಟ್ರಿ ಕೊಟ್ಟಿರುವ 'ರಾಜಕುಮಾರ'ನನ್ನ ತಡರಾತ್ರಿಯೇ ಅಭಿಮಾನಿಗಳು ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ರಾಜ್ಯದ ಹಲವು ಕಡೆ ಮಿಡ್ ನೈಟ್ ನಲ್ಲಿ ಮೊದಲ ಶೋ ಶುರು ಮಾಡಿದ್ರೆ, ಮತ್ತೆ ಕೆಲವು ಕಡೆ ಹೋಳಿಗೆ ಕೊಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಮಧ್ಯರಾತ್ರಿ ಎಂಟ್ರಿ ಕೊಟ್ಟ 'ರಾಜಕುಮಾರ'

ಬಳ್ಳಾರಿಯಲ್ಲಿ 'ರಾಜಕುಮಾರ' ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದೆ. ಮಧ್ಯರಾತ್ರಿ 12 ಗಂಟೆಗೆ ಮೊದಲ ಶೋ ಪ್ರದರ್ಶನಗೊಂಡಿದ್ದು, ಪುನೀತ್ 'ರಾಜಕುಮಾರ'ನ್ನ ನೋಡಿ ಕಣ್ತುಂಬಿಕೊಂಡಿದ್ದಾರೆ.[ಕರ್ನಾಟಕದ ಗಡಿಯಾಚೆ 'ರಾಜಕುಮಾರ'ನ ರಾಜ್ಯಭಾರ ]

'ದಾವಣೆಗೆರೆ'ಯಲ್ಲಿ ಅದ್ದೂರಿ ರಿಲೀಸ್!

ದಾವಣಗೆರೆಯಲ್ಲಿ 'ರಾಜಕುಮಾರ' ಬೆಳಿಗ್ಗೆನೇ ಚಿತ್ರಮಂದಿರಕ್ಕೆ ಲಗ್ಗೆಯಿಟ್ಟಿದ್ದು, ಪುನೀತ್ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.['ರಾಜಕುಮಾರ' vs 'ರಾಯುಡು': ಇದು ರಾಷ್ಟ್ರಮಟ್ಟದ ಸ್ಟಾರ್ ವಾರ್]

ಲಕ್ಷ್ಮಿಯಲ್ಲಿ 6 ಗಂಟೆಗೆ ರಿಲೀಸ್

ತಾವರೆಕೆರೆಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಳ್ಳಂಬೆಳಿಗ್ಗೆ 6 ಗಂಟೆಗೆ 'ರಾಜಕುಮಾರ' ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳು ನೋಡಿ ಖುಷಿಯಾಗಿದ್ದಾರೆ. ಪಟಾಕಿ ಸಿಡಿಸಿ ತಮ್ಮ ಪವರ್ ಸ್ಟಾರ್ ಸಿನಿಮಾವನ್ನ ಸ್ವಾಗತಿಸಿದ್ದಾರೆ.['ರಾಜಕುಮಾರ' ಸಿನಿಮಾ ನೋಡೋರಿಗೆ ಶಿವಣ್ಣನಿಂದ ಬೊಂಬಾಟ್ ಸರ್ಪ್ರೈಸ್! ]

ನರ್ತಕಿಯಲ್ಲಿ 7 ಗಂಟೆ ಶೋ

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ 'ನರ್ತಕಿ' ಚಿತ್ರಮಂದಿರದಲ್ಲಿ ಬೆಳಿಗ್ಗೆ 7 ಗಂಟೆಗೆ 'ರಾಜಕುಮಾರ' ಚಿತ್ರದ ಮೊದಲ ಶೋ ಪ್ರದರ್ಶನಗೊಂಡಿದೆ. ರಾಜಕುಮಾರ ಚಿತ್ರಕ್ಕೆ ನರ್ತಕಿ ಮುಖ್ಯ ಚಿತ್ರಮಂದಿರ.

ಅಪ್ಪು ಅಭಿಮಾನಿಗಳಿಂದ ಹೋಳಿಗೆ ಊಟ

ಇನ್ನು ನರ್ತಿಕಿ ಚಿತ್ರಕ್ಕೆ 'ರಾಜಕುಮಾರ' ಸಿನಿಮಾ ನೋಡಲು ಬಂದ ಅಭಿಮಾನಿಗಳಿಗಾಗಿ ಅಪ್ಪು ಅಭಿಮಾನಿಗಳಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

'ಶಿವಮೊಗ್ಗ'ದಲ್ಲಿ 'ರಾಜ'ನ ಹವಾ

ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಮದ್ಯರಾತ್ರಿ ಮೊದಲ ಶೋ ಆರಂಭವಾಗಿದ್ದು, ರಾಜಕುಮಾರನನ್ನ ನೋಡಲು ಅಭಿಮಾನಿಗಳ ಕಾದುಕುಂತಿದ್ದರು.

English summary
Kannada Actor Puneeth Rajkumar Starrer Raajakumara Movie Released Today (March 24th) All Over Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada