»   » ದಾಖಲೆಗಳನ್ನೆಲ್ಲ ಬೆಚ್ಚಿಬೀಳಿಸಿದ ರಾಜರತ್ನ 'ರಾಜಕುಮಾರ'

ದಾಖಲೆಗಳನ್ನೆಲ್ಲ ಬೆಚ್ಚಿಬೀಳಿಸಿದ ರಾಜರತ್ನ 'ರಾಜಕುಮಾರ'

Posted By:
Subscribe to Filmibeat Kannada

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬಿಡುಗಡೆಗೆ ಕೇವಲ ಎರಡೇ ದಿನ ಮಾತ್ರ ಬಾಕಿಯಿದೆ. ಈಗಾಗಲೇ ಎಲ್ಲೆಡೆ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಿದ್ದು, ಆಲ್ ಮೋಸ್ಟ್ ಮೊದಲ ದಿನದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ರಾಜಕುಮಾರನ ಕ್ರೇಜ್ ಹೆಚ್ಚಿದ್ದು, ಎಲ್ಲ ಹಳೆ ದಾಖಲೆಗಳನ್ನ ಧೂಳಿಪಟ ಮಾಡಿದೆ. ಹಾಗಾದ್ರೆ, ಇದುವರೆಗೂ ರಾಜಕುಮಾರ ಚಿತ್ರ ಮಾಡಿರುವ ದಾಖಲೆಗಳ ಸುತ್ತಾ ಒಂದು ನೋಟ ನೋಡಿ ಬರೋಣ ಬನ್ನಿ.....[ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!]

ಟ್ರೈಲರ್ ಮಾಡಿದ ದಾಖಲೆ

'ರಾಜಕುಮಾರ' ಟ್ರೈಲರ್ ಬಿಡುಗಡೆಯಾದ 13 ದಿನಗಳಲ್ಲಿ 1.5 ಮಿಲಿಯನ್ ವೀಕ್ಷಕರು ನೋಡಿರುವುದು ವಿಶೇಷ ದಾಖಲೆಯೇ ಸರಿ. ಯ್ಯೂಟ್ಯೂಬ್ ನಲ್ಲಿ ಈ ಜಬರ್ ದಸ್ತ್ ಟ್ರೈಲರ್ 23 ಸಾವಿರ ಲೈಕ್ಸ್ ಪಡೆದಿತ್ತು. ಮಾರ್ಚ್ 6 ರಂದು ಟ್ರೈಲರ್ ಬಿಡುಗಡೆಯಾಗಿತ್ತು.[ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ]

ಮೇಕಿಂಗ್ ವಿಡಿಯೋ ರೆಕಾರ್ಡ್!

'ರಾಜಕುಮಾರ' ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದ ಚಿತ್ರತಂಡ ಅತ್ಯಾದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರದ ಮೇಕಿಂಗ್ ವಿಡಿಯೋವನ್ನ 'ಬೊಂಬೆ ಹೇಳುತೈತೆ' ಹಾಡಿನ ಜೊತೆ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇವಲ 8 ದಿನದಲ್ಲಿ 1 ಮಿಲಿಯನ್ ಜನರು ಈ ಮೇಕಿಂಗ್ ವಿಡಿಯೋವನ್ನ ವೀಕ್ಷಣೆ ಮಾಡಿದ್ದರು. 12 ಸಾವಿರ ಲೈಕ್ಸ್ ಪಡೆದಿತ್ತು.[ತೆರೆ ಹಿಂದಿನ 'ರಾಜಕುಮಾರ'ನಲ್ಲಿ ಕಾಣುತ್ತಾರೆ 'ಡಾ.ರಾಜ್ ಕುಮಾರ್'!]

'ಅಪ್ಪು ಡ್ಯಾನ್ಸ್' ಕಮಾಲ್

ಇನ್ನೂ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದ್ದ ಅಪ್ಪು ಡ್ಯಾನ್ಸ್ ವಿಡಿಯೋ, ಯ್ಯೂಟ್ಯೂಬ್ ನಲ್ಲಿದ್ದ ಹಳೇ ದಾಖಲೆಗಳನ್ನೆಲ್ಲ ಬ್ರೇಕ್ ಮಾಡಿದೆ. ಬಿಡುಗಡೆಯಾದ 2 ದಿನದಲ್ಲೇ ಸುಮಾರು 8.25 ಜನರು ನೋಡಿದ್ದು, 22 ಸಾವಿರ ಲೈಕ್ಸ್ ಪಡೆದುಕೊಂಡಿತ್ತು.['ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!]

'ಯಾರಿವನು ಕನ್ನಡದವನು' ಹಾಡು

'ರಾಜಕುಮಾರ' ಚಿತ್ರದ 'ಯಾರಿವನು ಕನ್ನಡದವನು' ಹಾಡಿಗೆ ಒಳ್ಳೆ ರೆಸ್ ಪಾನ್ಸ್ ಸಿಕ್ಕಿತ್ತು. ಆಡಿಯೋ ಬಿಡುಗಡೆಗೂ ಮುಂಚೆ ಈ ಹಾಡನ್ನ ಬಿಡುಗಡೆ ಮಾಡಲಾಗಿತ್ತು. 23 ದಿನಗಳಲ್ಲಿ 1.3 ಮಿಲಿಯನ್ ಜನರು ನೋಡಿದ್ದು, 22 ಸಾವಿರ ಲೈಕ್ಸ್ ಗಿಟ್ಟಿಸಿಕೊಂಡಿತ್ತು.[ಎಕ್ಸ್ ಕ್ಲೂಸಿವ್: 'ರಾಜಕುಮಾರ' ಚಿತ್ರದ 'ರಾಜರ ರಾಜ' ಹಾಡು ರಿಲೀಸ್]

'ರಾಜಕುಮಾರ' ಟೀಸರ್-2

ಚಿತ್ರದ ಎರಡನೇ ಟ್ರೈಲರ್ ಗೂ ಸೂಪರ್ ರೆಸ್ ಪಾನ್ಸ್ ಸಿಕ್ಕಿತ್ತು. 2ನೇ ಟ್ರೈಲರ್ ಬಿಡುಗಡೆಯಾದ 7 ದಿನದಲ್ಲಿ 5.5 ಲಕ್ಷ ಜನರು ವೀಕ್ಷಿಸಿದ್ದರು. ಈಗಲೂ ಅದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

'ರಾಜಕುಮಾರ' ಟೀಸರ್-1

'ರಾಜಕುಮಾರ' ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದ್ದ 7 ದಿನಗಳಲ್ಲಿ 8.3 ಲಕ್ಷ ಜನರು ನೋಡಿದ್ದರು.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]

ಈ ವಾರ ಬಿಡುಗಡೆ

ಅಂದ್ಹಾಗೆ, 'ರಾಜಕುಮಾರ' ಮಾರ್ಚ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪುನೀತ್ ಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಕುಮಾರ್, ಪ್ರಕಾಶ್ ರೈ, ಚಿಕ್ಕಣ್ಣ, ಸಾಧುಕೋಕಿಲಾ, ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.[ಸ್ವಲ್ಪ ಲೇಟಾದ್ರು 'ರಾಜಕುಮಾರ' ಟಿಕೆಟ್ ನಿಮಗೆ ಸಿಗಲ್ಲ! ಈಗಲೇ ಬುಕ್ ಮಾಡಿ]

English summary
Kannada Actor Puneeth Rajkumar starrer Kannada Movie 'Raajakumara' have done lot of Records in Youtube. Here is the full Details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada