»   » ಸ್ವಲ್ಪ ಲೇಟಾದ್ರು 'ರಾಜಕುಮಾರ' ಟಿಕೆಟ್ ನಿಮಗೆ ಸಿಗಲ್ಲ! ಈಗಲೇ ಬುಕ್ ಮಾಡಿ

ಸ್ವಲ್ಪ ಲೇಟಾದ್ರು 'ರಾಜಕುಮಾರ' ಟಿಕೆಟ್ ನಿಮಗೆ ಸಿಗಲ್ಲ! ಈಗಲೇ ಬುಕ್ ಮಾಡಿ

Posted By:
Subscribe to Filmibeat Kannada

'ರಾಜಕುಮಾರ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ನೋಡಬೇಕು ಅಂತ ತುದಿಗಾಲಿನಲ್ಲಿ ನಿಂತಿರುವವರು, ಈಗಲೇ ಟಿಕೆಟ್ ಬುಕ್ ಮಾಡಿದರೆ ಒಳಿತು. ''ಹೇಗಿದ್ದರೂ... 'ರಾಜಕುಮಾರ' ಬಿಡುಗಡೆ ಆಗುವುದು ಇನ್ನೂ ಮೂರು ದಿನ ಟೈಮ್ ಇದೆ'' ಅಂತ ನೀವೇನಾದರೂ ಉದಾಸೀನ ಮಾಡಿದ್ರೆ... ಲಾಸ್ ಆಗೊದು ನಿಮಗೆ.!['ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!]

ಹೌದು, 'ರಾಜಕುಮಾರ' ಹವಾ ಹೇಗಿದೆ ಅಂತ ನಿಮಗೂ ಗೊತ್ತು. ಮಾರ್ಚ್ 24 ರಂದು (ಶುಕ್ರವಾರ) ಬಿಡುಗಡೆ ಆಗುವ 'ರಾಜಕುಮಾರ' ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಓಪನ್ ಆಗಿದೆ. ಈಗ ತಾನೆ ಬುಕ್ಕಿಂಗ್ ಓಪನ್ ಆಗಿದೆ ಅಂತ ತಡ ಮಾಡ್ಬೇಡಿ. ಯಾಕಂದ್ರೆ, ಆಲ್ ರೆಡಿ ಶೋಗಳು ಸೋಲ್ಡ್ ಔಟ್ ಆಗುತ್ತಿದೆ. ಮುಂದೆ ಓದಿ.....

'ಬುಕ್ ಮೈ ಶೋ'ನಲ್ಲಿ ಬುಕ್ ಮಾಡಿ

'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ರಾಜಕುಮಾರ' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಈಗಾಗಲೇ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಗಳು ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗ್ತಿದೆ.[ಅಪ್ಪು ಹುಟ್ಟುಹಬ್ಬಕ್ಕೆ ಇದಕ್ಕಿಂತ ಉಡುಗೊರೆ ಬೇಕಾ?]

ಯಾವ ಯಾವ ಥಿಯೇಟರ್ ಗಳಲ್ಲಿ ಬುಕ್ ಮಾಡಬಹುದು.?

ಪದ್ಮನಾಭನಗರದ ಶ್ರೀನಿವಾಸ, ವೀರಭದ್ರಶ್ವೇರ, ರಾಧಕೃಷ್ಣ, ವೈಷ್ಣವಿ, ತಿರುಮಲ, ಅಶೋಕ ಥಿಯೇಟರ್ ಸೇರಿದಂತೆ ಎಲ್ಲ ಮಾಲ್ ಗಳಲ್ಲಿಯೂ ಟಿಕೆಟ್ ಗಳಿಗೆ ಸದ್ಯ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.[ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..]

ಲೇಟ್ ಆದ್ರೆ 'ಸೋಲ್ಡ್ ಔಟ್' ಆಗಬಹುದು.!

'ರಾಜಕುಮಾರ' ಚಿತ್ರವನ್ನ ಕಣ್ತುಂಬಿಕೊಳ್ಳಲು ಅಪ್ಪು ಅಭಿಮಾನಿಗಳು ಮುಗಿಬೀಳುತ್ತಿರುವ ಕಾರಣ ಈಗಾಗಲೇ ಕೆಲ ಥಿಯೇಟರ್ ಗಳು 'ಆಲ್ಮೋಸ್ಟ್ ಫುಲ್' ಆಗಿವೆ. ಇನ್ನು ಬುಕ್ಕಿಂಗ್ ಕೂಡ ಜೋರಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಟಿಕೆಟ್ ಗಳು ಸೋಲ್ಡ್ ಔಟ್ ಆಗಬಹುದು.

ತಡ ಮಾಡಿದ್ರೆ, ನಿಮಗೆ ಲಾಸ್!

'ರಾಜಕುಮಾರ' ಟೈಟಲ್ ಗೆ ತಕ್ಕಂತೆ ಟ್ರೈಲರ್, ಹಾಡುಗಳಿಂದ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ. ಪುನೀತ್ ಜೊತೆ ಪ್ರಿಯಾ ಆನಂದ್ ಜೋಡಿಯಾಗಿದ್ದು, ಪ್ರಕಾಶ್ ರೈ, ಶರತ್ ಕುಮಾರ್, ಚಕ್ಕಣ್ಣ, ಸಾಧುಕೋಕಿಲಾ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿದೆ. ಸಂತೋಷ್ ಆನಂದ್ ರಾಮ್ ಕೃಷ್ಣ ಆಕ್ಷನ್ ಕಟ್ ಹೇಳಿರುವ 'ರಾಜಕುಮಾರ' ಚಿತ್ರವನ್ನ ಮೊದಲ ದಿನವೇ ನೋಡಲು ಇಚ್ಛೆ ಇದ್ದರೆ ಈಗಲೇ ಟಿಕೆಟ್ ಬುಕ್ ಮಾಡಿ...

English summary
Kannada Actor Puneeth Rajkumar starrer Kannada Movie 'Raajakumara' bookings open in Book My Show. Book your Tickets now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada