Rajakumara Movie: ಅಪ್ಪು 'ರಾಜಕುಮಾರ' ಆದ ದಿನ ಇದು, ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ!

ನಟ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾವನ್ನು ನೀವು ನೋಡಿದ್ದರೆ, ಸಿನಿಮಾದಲ್ಲಿ ಅಪ್ಪು ನಿರ್ವಹಿಸಿದ್ದ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. 'ರಾಜಕುಮಾರ' ಚಿತ್ರ ಟೈಟಲ್ ಮೂಲಕವೇ ಗಮನ ಸೆಳೆದ ಚಿತ್ರ. ರಾಜ್‌ಕುಮಾರ್ ಕನ್ನಡದ ಮೇರು ನಟ. ಅವರ ಹೆಸರಿನಲ್ಲೇ ಅಪ್ಪು ಸಿನಿಮಾ ಮಾಡಿದರು. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್, ತಂದೆ ರಾಜ್‌ಕುಮಾರ್ ಪ್ರತಿ ಬಿಂಬದಂತೆ ಕಾಣಿಸಿಕೊಂಡರು.

ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಲ್ಲಿ ಕಾಣಿಸಿಕೊಳ್ಳುತ್ತಾ ಇದ್ದ ಅಪ್ಪು, ರಾಜಕುಮಾರ ಸಿನಿಮಾದಲ್ಲಿ ಮಾತ್ರ ತುಂಬಾನೆ ವಿಭಿನ್ನವಾಗಿ ಕಾಣಿಸಿಕೊಂಡರು. ತ್ಯಾಗಮಯಿ ಪಾತ್ರದಲ್ಲಿ ಅಪ್ಪು ಜನರ ಮೆಚ್ಚುಗೆಗೆ ಪಾತ್ರವಾದರು. ಈ ಚಿತ್ರ 100 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ಹೊಸದೊಂದು ದಾಖಲೆ ಮಾಡಿತು.

'ರಾಜಕುಮಾರ' ಚಿತ್ರ ತೆರೆಗೆ ಬಂದು 5ವರ್ಷ ಆಗಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಟ್ವಿಟ್ ಮಾಡಿದ್ದಾರೆ. ಸಿನಿಮಾ ಮತ್ತು ಪುನೀತ್ ರಾಜ್‌ಕುಮಾರ್ ಬಗ್ಗೆ ಬರೆದುಕೊಂಡಿದ್ದಾರೆ. ಈ ಚಿತ್ರ ಸಿಕ್ಕಿದ್ದು ಭಗವಂತ ಮತ್ತು ಅಪ್ಪು ಕೃಪೆ ಎಂದು ನಿರ್ದೇಶಕ ಭಾವುಕ ಟ್ವೀಟ್ ಮಾಡಿದ್ದಾರೆ.

ಸಂತೋಷ್ ಆನಂದ್ ರಾಮ್ ಟ್ವೀಟ್‌ನಲ್ಲಿ ಏನಿದೆ?

ಹಳೇ ನೆನಪುಗಳನ್ನು ಹಂಚಿಕೊಂಡ ಸಂತೋಷ್‌ ಆನಂದ್ ರಾಮ್ "ಇಂದು ರಾಜಕುಮಾರನಿಗೆ 5ನೇ ವರ್ಷದ ಸಂಭ್ರಮ, ನಮ್ಮ ಪೂರ್ತಿ ತಂಡಕ್ಕೆ ದೊಡ್ಡ ತಿರುವು ಕೊಟ್ಟ, ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ ಚಿತ್ರ ಈ ಸಿನಿಮಾ ಮಾಡಲು ಅವಕಾಶ ಕೊಟ್ಟ ದೇವರಿಗೆ ಬೆನ್ನು ತಟ್ಟಿದ ಅಭಿಮಾನಿ ದೇವರುಗಳಿಗೆ ಹಾಗು ಅಭಿಮಾನಿಗಳ ದೇವರಾಗಿರುವ ಅಪ್ಪು ಅಣ್ಣನಿಗೆ ನನ್ನ ತುಂಬು ಹೃದಯದ ನಮಸ್ಕಾರ". ಎಂದು ಬರೆದುಕೊಂಡು ಕೆಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಆರಂಭದ ದಿನಗಳಲ್ಲಿ ಕ್ಲಿಕ್ಕಿಸಿದ ಫೊಟೋಗಳು ಇವು.

100 ದಿನ ಪೂರೈಸಿ ದಾಖಲೆ ಮಾಡಿದ ರಾಜಕುಮಾರ!

100 ದಿನ ಪೂರೈಸಿ ದಾಖಲೆ ಮಾಡಿದ ರಾಜಕುಮಾರ!

ರಾಜಕುಮಾರ್ ಸಿನಿಮಾ ಸಾಕಷ್ಟು ದಾಖಲೆಗಳನ್ನು ಬರೆದಿದೆ. ಈ ಚಿತ್ರದ 75 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೆಚ್ಚಿನ ಗಳಿಕೆ ಮಾಡಿದ ಚಿತ್ರವಾಗಿ ಹೊರ ಹೊಮ್ಮಿತು. ಇನ್ನು ಈ ಚಿತ್ರ ಚಿತ್ರಮಂದಿರಗಳಲ್ಲಿ 100 ದಿನವನ್ನು ಯಶಸ್ವಿಯಾಗಿ ಪೂರೈಸಿತು. ಯಾವುದೋ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಅಲ್ಲ. 45 ರಿಂದ 50 ಚಿತ್ರಮಂದಿರಗಳಲ್ಲಿ ರಾಜಕುಮಾರ ಚಿತ್ರ 100 ದಿನ ಪೂರೈಸಿ ದಾಖಲೆ ಮಾಡಿದೆ.

ಅಪ್ಪುಗೆ ಹೆಚ್ಚಾದ ಫ್ಯಾಮಿಲಿ ಆಡಿಯನ್ಸ್!

ಅಪ್ಪುಗೆ ಹೆಚ್ಚಾದ ಫ್ಯಾಮಿಲಿ ಆಡಿಯನ್ಸ್!

ಇನ್ನು ಈ ಚಿತ್ರದ ಕಥೆ ಫ್ಯಾಮಿಲಿ ಆಡಿಯನ್ಸ್‌ಗೆ ತುಂಬಾನೇ ಇಷ್ಟವಾದ ಕಥೆ. ಚಿತ್ರದ ಹಾಡುಗಳು ಕೂಡ ಜನ ಮನ ಗೆಲ್ಲುವಲ್ಲಿ ಸಫಲ ಆಗಿವೆ. ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು ಯುಟ್ಯೂಬ್‌ನಲ್ಲಿ ಅತಿ ಹೆಚ್ಚಿ ವೀಕ್ಷಣೆ ಪಡೆದ ಹಾಡಾಗಿ ಹೊರ ಹೊಮ್ಮಿದೆ. ಜೊತೆಗೆ ಕನ್ನಡದ ಮೊದಲ ಸಿನಿಮಾ ಮಲ್ಟಿ ಫ್ಲೆಕ್ಸ್‌ನಲ್ಲಿ ಅತಿ ಹೆಚ್ಚು ದಿನ ಪ್ರದರ್ಶನ ಕಂಡ ಸಿನಿಮಾ ಎನಿಸಿಕೊಂಡಿದೆ.

ಅಪ್ಪು ನೋಡಿ ಬದಲಾದ ಅಭಿಮಾನಿಗಳು!

ಅಪ್ಪು ನೋಡಿ ಬದಲಾದ ಅಭಿಮಾನಿಗಳು!

ಮೊದಲೆಲ್ಲಾ ರಾಜ್‌ಕುಮಾರ್ ಅವರ ಸಿನಮಾಗಳನ್ನು ನೋಡಿ ಜನ ಜೀವನದ ಪಾಠಗಳನ್ನು ಕಲಿಯುತ್ತಿದ್ದರು. ಎಷ್ಟೋ ಮಂದಿ ತಮ್ಮನ್ನೇ ತಾವು ಬದಲಾಯಿಸಿಕೊಳ್ಳುತ್ತಾ ಇದ್ದ ಉದಾಹರಣೆಗಳು ಇವೆ. ಅಂತಹ ಒಂದು ಪರಿಣಾಮ ಆಗಿದ್ದು ರಾಜಕುಮಾರ ಸಿನಿಮಾದ ಮೂಲಕ. ರಾಜಕುಮಾರ ಸಿನಿಮಾ ನೋಡಿದ ಸಾಕಷ್ಟು ಮಂದಿ ತಮ್ಮ ಪೋಷಕರನ್ನು ವೃದ್ಧಾಶ್ರಮದಿಂದ ಮನೆಗೆ ಕರೆದುಕೊಂಡು ಬಂದ ಉದಾಹರಣೆಗಳು ಇವೆ. ಈ ಮೂಲಕ ರಾಜಕುಮಾರ್ ಒಂದು ಸಿನಿಮಾ ಆಗಿ ಮಾತ್ರವಲ್ಲ ಉಳಿಯದೆ, ಪರಿವರ್ತನೆಗೆ ದಾರಿ ಆಗಿತ್ತು.

More from Filmibeat

English summary
Puneeth Rajkumar Starrer Rajakumara Movie Completes 5 Years; Know Facts about the Movie, More Details Is Here,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X