'ಯುವರತ್ನ' ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರ ಸೆಟ್ಟೇರಿ ವರ್ಷವೆ ಆಗಿದೆ. ಚಿತ್ರದಿಂದ ಅಭಿಮಾನಿಗಳಿಗೆ ಪವರ್ ಸ್ಟಾರ್ ಒಂದು ಲುಕ್ ಬಿಟ್ಟರೆ ಬೇರೆನು ಸಿಕ್ಕಿಲ್ಲ.
ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು 'ಯುವರತ್ನ' ಚಿತ್ರದ ಟೀಸರ್ ಯಾವಾಗ ಎಂದು ಚಿತ್ರತಂಡವನ್ನು ಕಾಡುತ್ತಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಧ್ಯದಲ್ಲೇ ಟೀಸರ್ ರಿಲೀಸ್ ಮಾಡುತ್ತೇವೆ ಎಂದು ಹೇಳುತ್ತ ಅಭಿಮಾನಿಗಳನ್ನು ಸಮಾಧಾನ ಮಾಡುತ್ತಲೆ ಬಂದಿದ್ದರು.
ಆದ್ರೀಗ ಯುವರತ್ನ ಟೀಸರ್ ರಿಲೀಸ್ ಆಗುವ ಸಮಯ ಬಂದಿದೆ. ಇಂದು ಚಿತ್ರದ ಟೀಸರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿದೆ ಚಿತ್ರತಂಡ. ಈ ಮೂಲಕ ಅಭಿಮಾನಿಗಳ ಮನ ತಣಿಸುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಮೊನ್ನೆ ಮೊನ್ನೆಯಷ್ಟೆ ಪವರ್ ಸ್ಟಾರ್ ಟೀಸರ್ ಗಾಗಿ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ.

ಇನ್ನು ಯುವರತ್ನ ಚಿತ್ರದ ಚಿತ್ರೀಕರಣ ಸಹ ಈಗಾಗಲೆ ಸಾಕಷ್ಟು ಮುಗಿದಿದೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಚಿತ್ರದಲ್ಲಿ ಪವರ್ ಸ್ಟಾರ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಯುವರತ್ನ ಚಿತ್ರದಲ್ಲಿ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಭಾರಿ ನಿರೀಕ್ಷೆ ಮೂಡಿಸಿರುವ ಯುವರತ್ನ ಟೀಸರ್ ದಸರ ಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಪುನೀತ್ ಗೆ ಜೋಡಿಯಾಗಿ ಸಾಯೇಷಾ ಸೈಗಲ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











