ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಮೊದಲ ಹಾಡು ರಿಲೀಸ್ ಡೇಟ್ ಫಿಕ್ಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ 'ಯುವರತ್ನ' ಸಿನಿಮಾದ ಚಿತ್ರೀಕರಣ ಮುಗಿದಿದ್ದು, ರಿಲೀಸ್ ಗೆ ರೆಡಿಯಾಗಿದೆ. ಲಾಕ್ ಡೌನ್ ಬಳಿಕ ಇತ್ತೀಚಿಗಷ್ಟೆ ಕೊನೆಯ ಹಂತದ ಚಿತ್ರೀಕರಣ ಮುಗಿಸಿರುವ 'ಯುವರತ್ನ' ತಂಡ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಇತ್ತೀಚಿಗಷ್ಟೆ ಚಿತ್ರದ ಮೊದಲ ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿ ಹೇಳಿ ಅಭಿಮಾನಿಗಳ ನಿದ್ದೆಗೆಡಿಸಿರುವ ಸಿನಿಮಾತಂಡ ಇದೀಗ ಹಾಡಿನ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಬಹುನಿರೀಕ್ಷೆಯ 'ಯುವರತ್ನ' ಸಿನಿಮಾದ ಹಾಡು ಡಿಸೆಂಬರ್ 2ರಂದು ರಿಲೀಸ್ ಆಗುತ್ತಿದೆ.
ಈ ಬಗ್ಗೆ ಹೊಂಬಾಳೆ ಫಿಲ್ಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಡಿಸಿದ್ದಾರೆ. 'ಯುವರತ್ನನ ಆರ್ಭಟ ಆರಂಭವಾಯ್ತು' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಡಿನ ರಿಲೀಸ್ ಡೇಟ್ ಬಹಿರಂಗ ಪಡಿಸಿದ್ದಾರೆ. ಯುವರತ್ನ ಸಿನಿಮಾದ ಹಾಡಿಗೆ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ರಿಲೀಸ್ ಆಗುತ್ತಿರುವ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದಾರೆ.

ಇತ್ತೀಚಿಗಷ್ಟೆ ಅಂದರೆ ಲಾಕ್ ಡೌನ್ ಬಳಿಕ ಯುವರತ್ನ ಸಿನಿಮಾದ ಹೈ ವೋಲ್ಟೇಜ್ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ಪುನೀತ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ರಿಲೀಸ್ ಆಗುತ್ತಿರುವ ಹಾಡು ಇದೆನಾ ಎನ್ನುವುದು ಅಭಿಮಾನಿಗಳ ಕುತೂಹಲ. ಅದೇನೆ ಇರಲಿ ಯುವರತ್ನ ಸಿನಿಮಾದಿಂದ ಬರ್ತಿರುವ ಹಾಡನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











