For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಕ್ಕೆ 'ಯುವರತ್ನ' ಅದ್ದೂರಿ ಎಂಟ್ರಿ; ಅಪ್ಪು ನೋಡಲು ಮುಗಿಬಿದ್ದ ಅಭಿಮಾನಿಗಳು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಇಂದು (ಏಪ್ರಿಲ್ 1) ಅದ್ದೂರಿಯಾಗಿ ತೆರೆಗೆ ಬಂದಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಯುವರತ್ನ ಬಿಡುಗಡೆಯಾಗಿದ್ದು, ಈಗಾಗಲೇ ಮೊದಲ ಶೋ ಪ್ರಾರಂಭವಾಗಿದೆ.

  ಅದ್ಧೂರಿ ಎಂಟ್ರಿ ಕೊಟ್ಟ ಯುವರತ್ನ:ಅಪ್ಪು ನೋಡೋಕೆ ಥಿಯೇಟರ್ನಲ್ಲಿ ಜನವೋ ಜನ | Yuvarathna | Puneeth Rajkumar

  ಯುವರತ್ನ ನೋಡಲು ಅಭಿಮಾನಿಗಳು ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಜಮಾಯಿಸಿದ್ದರು. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದನೇ ಶೋ ಪ್ರಾರಂಭವಾಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಯುವರತ್ನನನ್ನು ಸ್ವಾಗತಿಸಿದ್ದಾರೆ.

  ಬಾಳೆ ಎಲೆ ಮುಂದೆ ವಿಮರ್ಶಕ, ವೇದಾಂತಿ ಆದ ಪುನೀತ್‌ ರಾಜ್‌ಕುಮಾರ್ಬಾಳೆ ಎಲೆ ಮುಂದೆ ವಿಮರ್ಶಕ, ವೇದಾಂತಿ ಆದ ಪುನೀತ್‌ ರಾಜ್‌ಕುಮಾರ್

  ಕಳೆದ 2 ವರ್ಷಗಳಿಂದ ಅಪ್ಪು ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಯುವರತ್ನ ಮೂಲಕ ಭರ್ಜರಿ ಟ್ರೀಟ್ ನೀಡಿದ್ದಾರೆ. ರಾಬರ್ಟ್ ಸಿನಿಮಾ ಬಳಿಕ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಸಿನಿಮಾ ಯುವರತ್ನ. ಕರ್ನಾಟಕದಲ್ಲಿ ಸುಮಾರು 400ರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವರತ್ನ ಬಿಡುಗಡೆಯಾಗಿದೆ.

  ಇನ್ನು ಆಂಧ್ರ ಮತ್ತು ತೆಲಂಗಾಣದಲ್ಲೂ ಹೆಚ್ಚು ಅಂದರೆ 200ರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಯುವರತ್ನ ಅಬ್ಬರ ಶುರುವಾಗಿದೆ. ಕಳೆದ ಒಂದು ವಾರದಿಂದ ಎಲ್ಲಿ ನೋಡಿದ್ರು ಯುವರತ್ನ ಪೋಸ್ಟರ್ ಮತ್ತು ಬ್ಯಾನರ್ ಗಳೇ ಕಾಣಿಸುತ್ತಿವೆ. ಚಿತ್ರಮಂದಿರದ ತುಂಬೆಲ್ಲಾ ಪವರ್ ಸ್ಟಾರ್ ಕಟೌಟ್ ಗಳೇ ರಾರಾಜಿಸುತ್ತಿವೆ.

  ಅಂದಹಾಗೆ ಇವತ್ತಿನ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಅನೇಕರು ಟಿಕೆಟ್ ಸಿಗದೆ ಪದಾಡುತ್ತಿದ್ದಾರೆ. ಯುವರತ್ನ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ಧನಂಜಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ನಟಿ ಸಾಯೇಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಚಿತ್ರಕ್ಕೆ ಬಂಡವಾಳ ಹೂಡಿದೆ.

  English summary
  Puneeth Rajkumar starrer Yuvarathnaa movie grand release on April 1.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X