ಕ್ರಿಸ್ ಮಸ್ ಗೆ 'ಯುವರತ್ನ'ನ ಪವರ್ ಫುಲ್ ಎಂಟ್ರಿ?
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ಯುವರತ್ನ' ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಚಿತ್ರದ ಮೂಲಕ ಅಪ್ಪು ಅನೇಕ ವರ್ಷಗಳ ಬಳಿಕ ವಿದ್ಯಾರ್ಥಿಯಾಗಿ ಕಲೇಜು ಮೆಟ್ಟಿಲು ಹತ್ತಿದ್ದಾರೆ.
'ಯುವರತ್ನ' ಚಿತ್ರದಲ್ಲಿ ಪುನೀತ್ ಯುವಕನಾಗಿ ಮತ್ತಷ್ಟು ಸ್ಟೈಲೀಶ್ ಲುಕ್ ನಲ್ಲಿ ಮಿಂಚಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗುತ್ತಿದಂತೆ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ. ಕಾಲೇಜಿನಲ್ಲಿ 'ಯುವರತ್ನ'ನಾಗಿ ಮಿಂಚುತ್ತಿರುವು ಅಪ್ಪು ಅವರನ್ನು ಯಾವಾಗ ತೆರೆಮೇಲೆ ನೋಡುತ್ತೀವಿ ಅಂತ ಕಾಯುತ್ತಿದ್ದ ಅಭಿಮಾನಿಗಳ ಕಾತುರತೆಗೆ ಅಂತೂ ತೆರೆಗೆಬಿದ್ದಿದೆ.
ಹೌದು, 'ಯುವರತ್ನ' ಸಿನಿಮಾ ವರ್ಷಾಂತ್ಯದಲ್ಲಿ ಅಂದ್ರೆ ಕ್ರಿಸ್ ಮಸ್ ನಲ್ಲಿ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆಯಂತೆ ಚಿತ್ರತಂಡ. ಈ ವರ್ಷದ ಪುನೀತ್ ಮೊದಲ ಸಿನಿಮಾ 'ನಟಸಾರ್ವಭೌಮ' ತೆರೆಕಂಡಿತ್ತು. ಫೆಬ್ರವರಿಯಲ್ಲಿ 'ನಟಸಾರ್ವಭೌಮ'ನಾಗಿ ಅಭಿಮಾನಿಗಳ ಮುಂದೆ ಬಂದಿದ್ದ ಪುನೀತ್ ವರ್ಷಾಂತ್ಯದಲ್ಲಿ 'ಯುವರತ್ನ'ನಾಗಿ ಅಬ್ಬರಿಸಲಿದ್ದಾರೆ.

'ಯುವರತ್ನ' ಕಾಲೇಜು ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈಗಾಗಲೆ ಅನೇಕ ಕಾಲೇಜುಗಳಲ್ಲಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಕಾಲೇಜು ದೃಶ್ಯಕ್ಕಾಗಿ ಸಾಕಷ್ಟು ಜನರನ್ನು ಆಡಿಷನ್ ಕೂಡ ಮಾಡಿ 400ಜನರನ್ನು ಆಯ್ಕೆ ಮಾಡಿಕೊಂಡಿದೆಯಂತೆ ಚಿತ್ರತಂಡ.
10 ಹಂತದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊೆಂಡಿದ್ದ ಚಿತ್ರತಂಡವೀಗ ಮೂರು ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆಯಂತೆ. ಮಂಗಳೂರು, ಬೆಂಗಳೂರು, ಧಾರವಾಡ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದ್ಯಂತೆ. ನಾಲ್ಕನೆ ಹಂತದ ಚಿತ್ರೀಕರಣವನ್ನು ಧಾರವಾಡದ ಕರ್ನಾಟಕ ಕಾಲೇಜ್ ನಲ್ಲಿ ಪ್ರಾರಂಭಿಸಲಿದೆಯಂತೆ ಚಿತ್ರತಂಡ.
ಈಗಾಗಲೆ ಭಾರಿ ನಿರೀಕ್ಷೆ ಮೂಡಿಸಿರುವ 'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈಗಾಗಲೆ 'ರಾಜಕುಮಾರ' ಅಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ಪುನೀತ್ ಮತ್ತು ಸಂತೋಷ್ ಕಾಂಬಿನೇಶನ್ ಎರಡನೆ ಭಾರಿ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಮಾಮೂಲಿಗಿಂತ ತುಸು ಹೆಚ್ಚೆ ಇದೆ.


Click it and Unblock the Notifications











