ಹೊಸ ವರ್ಷಕ್ಕೆ ಹೊಸ ಲುಕ್ ನೊಂದಿಗೆ ಬಂದ ಪವರ್ ಸ್ಟಾರ್ ಪುನೀತ್
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ವರ್ಷಕ್ಕೆ ಹೊಸ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೌದು, ಪುನೀತ್ ಅಭಿನಯದ ಬಹುನಿರೀಕ್ಷೆಯ ಯುವರತ್ನ ಚಿತ್ರದ ಹೊಸ ಲುಕ್ ರಿಲೀಸ್ ಆಗಿದೆ. ಹೊಸ ಲುಕ್ ನಲ್ಲಿ ಪವರ್ ಸ್ಟಾರ್ ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಮಿಂಚಿರುವುದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿ ಬಂದಿರುವ 'ಯುವರತ್ನ' ಕನ್ನಡ ಚಿತ್ರಾಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೆ ಟೀಸರ್ ರಿಲೀಸ್ ಆಗಿದ್ದು ಪುನೀತ್ ರಾಜ್ ಕುಮಾರ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಹೊಸ ಲುಕ್ ನಲ್ಲಿ ಅಪ್ಪು ಅಸ್ಥಿಪಂಜರದ ಜೊತೆ ಎಂಟ್ರಿ ಕೊಟ್ಟಿದ್ದಾರೆ.
ಬೆನ್ನಿಗೆ ಅಸ್ಥಿಪಂಜರ ಕಟ್ಟಿಕೊಂಡು ಎಂಟ್ರಿ ಕೊಟ್ಟಿರುವ ಪುನೀತ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಯುವರತ್ನ ಶಿಕ್ಷಣ ಮಾಫಿಯ ಬಗ್ಗೆ ಇರುವ ಸಿನಿಮಾ. ಚಿತ್ರದಲ್ಲಿ ದೊಡ್ಡ ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹಂಬಾಳೆ ಫಿಲ್ಮ್ ಬಂಡವಾಳ ಹೂಡಿದ್ದಾರೆ.

ಪುನೀತ್ ಗೆ ನಾಯಕಿಯಾಗಿ ಸಯೇಷಾ ಸೈಗಲ್ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಸೋನು ಗೌಡ, ಕಾನ್ಸ್ಟೇಬಲ್ ಸರೋಜ, ಧನಂಜಯ್ ಸೇರಿದಂತೆ ಕಲಾವಿದರ ದಂಡೆ ಚಿತ್ರದಲ್ಲಿದೆ. ಹೊಸ ವರ್ಷಕ್ಕೆ ಹೊಸ ಲುಕ್ ರಿವೀಲ್ ಮಾಡುವುದಾಗಿ ಹೇಳಿದ್ದ ಚಿತ್ರತಂಡ ಈಗ ಭರ್ಜರಿ ಲುಕ್ ನೀಡಿ ಅಭಿಮಾನಿಗಳನ್ನು ಮನ ತಣಿಸಿದೆ. ಸಿನಿಮಾ ಸಧ್ಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











