'ಯುವರತ್ನ' ಸಿನಿಮಾದ ಫೋಟೋಗಳು ಲೀಕ್: ಸಂತೋಷ್ ಆನಂದ್ ರಾಮ್ ಹೇಳಿದ್ದೇನು?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಬಹುನಿರೀಕ್ಷೆಯ ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಿಂದ ಸುಮಾರು ತಿಂಗಳುಗಳ ಕಾಲ ಮನೆಯಲ್ಲಿಯೆ ಇದ್ದ ಅಪ್ಪು ಇತ್ತೀಚಿಗಷ್ಟೆ ಚಿತ್ರದ ಕೆಲಸಕ್ಕೆ ಮರಳಿದ್ದಾರೆ. ಸದ್ಯ ಪುನೀತ್ ಅಭಿನಯದ ಯುವರತ್ನ ಚಿತ್ರದ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ.

ಆದರೆ ಯಾರೋ ಕಿಡಿಗೇಡಿಗಳು ಯುವರತ್ನ ಸಿನಿಮಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ. ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಯಾರು ಫೋಟೋಗಳನ್ನು ಹಂಚಿಕೊಳ್ಳದ್ದಂತೆ ಕೇಳಿಕೊಂಡಿದ್ದಾರೆ.

"ಎಲ್ಲ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ನನ್ನ ವಿನಂತಿ ಯುವರತ್ನ ಚಿತ್ರದ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ ಪ್ರತಿ ಅಭಿಮಾನಿಗೂ ನನ್ನ ಕೋರಿಕೆ ದಯವಿಟ್ಟು ನೀವು ಫೋಟೋಗಳನ್ನು ಶೇರ್ ಮಾಡುವುದು ಬಿಡಿ, ಡಿಲೀಟ್ ಮಾಡಿ. ಅದು ನೀವು ಅಪ್ಪು ಸರ್ ಹಾಗು ಯುವರತ್ನ ಸಿನಿಮಾಗೂ ಸೂಚಿಸುವ ಗೌರವ ಎಂದು ಭಾವಿಸಿದ್ದೇನೇ." ಎಂದು ಟ್ವೀಟ್ ಮಾಡಿದ್ದಾರೆ.

 Puneeth Rajkumar Starrer Yuvaratna Movie Photos Leaked

ಜೊತೆಗೆ #beARealpowerstarFan ಎಂದು ಅಭಿಯಾನ ಪ್ರಾರಂಭಿಸಿದ್ದಾರೆ. ಇತ್ತೀಚಿಗಷ್ಟೆ ಚಿತ್ರದಿಂದ ಪವರ್ ಫುಲ್ ಫೋಟೋವೊಂದನ್ನು ರಿಲೀಸ್ ಮಾಡಿತ್ತು ಸಿನಿಮಾತಂಡ. ಚಿತ್ರದ ಪವರ್ ಆಫ್ ಯೂತ್ ಹಾಡಿನ ಅಪ್ಪು ಸ್ಟೈಲಿಶ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಕಷ್ಟು ತಿಂಗಳಿಂದ ಅಭಿಮಾನಿಗಳು ಚಿತ್ರದ ಬಗ್ಗೆ ಅಪ್ ಡೇಟ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಆದರೀಗ ಕಿಡಿಗೇಡಿಗಳು ಫೋಟೋವನ್ನು ಲೀಕ್ ಮಾಡಿದ್ದಾರೆ.

More from Filmibeat

English summary
Puneeth Rajkumar starrer Yuvaratna movie photos leaked. Santhosh Ananddram request to fans not shared leaked photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X