'ಯುವರತ್ನ'ನ ಅದ್ದೂರಿ ಹಬ್ಬದ ಬಗ್ಗೆ ಅಪ್ಪು ಹೇಳಿದ್ದೇನು?
Recommended Video
ಈ ಬಾರಿಯ ದಸರ ಪವರ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಯುವರತ್ನ ಚಿತ್ರದ ಟೀಸರ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಆಯುಧ ಪೂಜೆ ದಿನ ಯುವರತ್ನ ಚಿತ್ರದ ಟೀಸರ್ ತೆರೆಗೆ ಬರುತ್ತಿದೆ. ಅಭಿಮಾನಿಗಳು ಬಾರಿ ಕುತೂಹಲದಿಂದ ಕಾಯುತ್ತಿರುವ ಚಿತ್ರದ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.
ಯುವರತ್ನ ಚಿತ್ರದ ಟೀಸರ್ ಅನ್ನು ಗ್ರ್ಯಾಂಡ್ ಆಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಆಯುದ ಪೂಜೆ ದಿನ ಚಿತ್ರದ ಟೀಸರ್ ಮೆಜೆಸ್ಟಿಕ್ ಬಳಿ ಇರುವ ಸಂತೋಷ್ ಚಿತ್ರಮಂದಿರದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಸಂಜೆ 5.30ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.

ಇಡೀ ಚಿತ್ರತಂಡ ಸಂತೋಷ್ ಚಿತ್ರಮಂದಿರದಲ್ಲಿ ಹಾಜರಿರಲಿದೆ. ವಿಶೇಷ ಅಂದ್ರೆ ಸಂತೋಷ್ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪ್ರದರ್ಶನವಾಗುತ್ತಿದೆ. ಪೈಲ್ವಾನ್ ಸಿನಿಮಾ ಪ್ರದರ್ಶನಕ್ಕೂ ಮುಂಚೆ ಯುವರತ್ನ ಟೀಸರ್ ರಿಲೀಸ್ ಆಗಲಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ವಿದೇಶದಲ್ಲಿದ್ದಾರೆ. ಅಲ್ಲಿಂದನೆ ಚಿತ್ರದ ಟೀಸರ್ ರಿಲೀಸ್ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಯುವರತ್ನ, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.
ಶಿಕ್ಷಣ ಮಾಫಿಯಾ ಬಗ್ಗೆ ಇರುವ ಸಿನಿಮಾ ಇದಾಗಿದ್ದು. ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪುಗೆ ನಾಯಕಿಯಾಗಿ ಸಾಯೇಷಾ ಮಿಂಚಿದ್ದಾರೆ. ಇನ್ನೂ ಉಳಿದಂತೆ ಪ್ರಕಾಶ್ ರೈ, ಸೋನು ಗೌಡ, ಡಾಲಿ ಧನಂಜಯ್, ರಾಧಿಕಾ ಶರತ್ ಕುಮಾರ್, ಅರು ಗೌಡ, ವಸಿಷ್ಠ ಸೇರಿದಂತೆ ದೊಡ್ಡ ತಾರಾಬಳಗವೆ ಚಿತ್ರದಲ್ಲಿದೆ.


Click it and Unblock the Notifications











