ಯುವರತ್ನ ಟ್ರೈಲರ್: ಅಪ್ಪು ಜಬರ್‌ದಸ್ತ್ ಡೈಲಾಗ್‌ಗೆ ಉಘೆ ಎಂದ ಫ್ಯಾನ್ಸ್

''ಇವರಿಗೆ ಕೊಟ್ಟಿರೋ ಸ್ಟಾರ್ ಡ್ಯೂಟಿಲಿ ಇರೋವರ್ಗು, ಇವರು ನಮಗೆ ಕೊಟ್ಟಿರೋ ಸ್ಟಾರ್ ನಾವು ಇರೋವರ್ಗು''......ಯುವರತ್ನ ಶೀರ್ಷಿಕೆಗೆ ತಕ್ಕಂತೆ ಪಕ್ಕಾ ಯೂತ್ ಕಮರ್ಷಿಯಲ್ ಸಿನಿಮಾ ಎನ್ನುವುದು ಟ್ರೈಲರ್‌ನಲ್ಲಿ ಸಾಬೀತಾಗಿದೆ.

Recommended Video

ಕೌಂಟರ್ ಕೊಟ್ರೆ ಎನ್ಕೌಂಟರ್ ಗ್ಯಾರೆಂಟಿ | Yuvarathnaa Trailer Release | PuneethRajkumar

ಯುವರತ್ನ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡಿರುವ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲು ಅಪ್ಪು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ಲೆಕ್ಚರ್: 'ನ್ಯೂ ಅಡ್ಮಿಶನ್ ಹ, ಬಾ ಮುಂದೆ ಕೂತ್ಕೋ'....

ಪುನೀತ್: ''ಫಸ್ಟ್ ಬೆಂಚಲ್ಲಿ ಕೂತ್ರೆ ಬರಿ ಬೋರ್ಡ್ ಕಾಣುತ್ತೆ.....

Puneeth Rajkumar Starrer yuvaratna trailer released

ಲಾಸ್ಟ್ ಬೆಂಚಲ್ಲಿ ಇಡಿ ವರ್ಲ್ಡ್ ಕಾಣುತ್ತೆ'' ಎನ್ನುವ ಡೈಲಾಗ್‌ ವೈರಲ್ ಆಗುತ್ತಿದೆ.

''ಓಂ ಪಿಕ್ಚರ್ ನೋಡಿದ್ದೀಯಾ...?'' ಎಂದು ವಿಲನ್ ಕೇಳಿದ್ರೆ ''ನಾವೇ ಪ್ರೊಡ್ಯೂಸ್ ಮಾಡಿದ್ದು'' ಎಂದು ಅಪ್ಪು ಕೊಡುವ ಪಂಚ್ ವೈರಲ್ ಆಗಿದೆ.

ಹೀಗೆ, ಮಾಸ್ ಅಭಿಮಾನಿಗಳು ಇಷ್ಟ ಪಡುವ ಡೈಲಾಗ್‌ಗಳ ಮೂಲಕ ಯುವರತ್ನ ಟ್ರೈಲರ್ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪುನೀತ್ ಈ ಸಿನಿಮಾದಲ್ಲಿ ಸ್ಟೂಡೆಂಟಾ ಅಥವಾ ಎಜುಕೇಶನ್ ಅಧಿಕಾರಿನಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

ಇನ್ನು ಪುನೀತ್, ಸಯೇಶಾ, ಪ್ರಕಾಶ್ ರಾಜ್, ಸಾಯಿ ಕುಮಾರ್, ರಂಗಾಯಣ ರಘು, ದಿಗಂತ್, ಸೋನು ಗೌಡ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಅಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

ಎಸ್ ತಮನ್ ಸಂಗೀತ ನೀಡಿದ್ದು, ಈಗಾಗಲೇ ಹಾಡುಗಳು ಬಿಡುಗಡೆಯಾಗಿದೆ. ಏಪ್ರಿಲ್ 1 ರಂದು ಯುವರತ್ನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರಮಂದಿರಕ್ಕೆ ಬರಲಿದೆ.

More from Filmibeat

English summary
Powerstar Puneeth Rajkumar Starrer yuvaratna trailer released today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X