»   » ಹೊಸ 'ಆಡಿಯೋ ಕಂಪನಿ' ಸ್ಥಾಪಿಸಿದ ಪುನೀತ್ ರಾಜ್ ಕುಮಾರ್

ಹೊಸ 'ಆಡಿಯೋ ಕಂಪನಿ' ಸ್ಥಾಪಿಸಿದ ಪುನೀತ್ ರಾಜ್ ಕುಮಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತಾಯಿಯ ಹೆಸರಿನಲ್ಲಿ 'PRK' ನಿರ್ಮಾಣ ಸಂಸ್ಥೆಯನ್ನ ಹುಟ್ಟುಹಾಕುವುದರ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ.

ಈ ಬ್ಯಾನರ್ ನಲ್ಲಿ ಈಗಾಗಲೇ ಎರಡು ಹೊಸಬರ ಸಿನಿಮಾ ನಿರ್ಮಾಣವಾಗುತ್ತಿದ್ದು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಹೀಗಿರುವಾಗ, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ನೀಡಲು ಪುನೀತ್ ನಿರ್ಧರಿಸಿದ್ದಾರೆ.

ಹೌದು, ನಟ ಮತ್ತು ನಿರ್ಮಾಪಕ ಪುನೀತ್ ರಾಜ್ ಕುಮಾರ್ ಈಗ ಹೊಸ ಆಡಿಯೋ ಕಂಪನಿಯನ್ನ ಪರಿಚಯಿಸುತ್ತಿದ್ದಾರೆ. ಹಾಗಿದ್ರೆ, ಪುನೀತ್ ಅವರ ಹೊಸ ಆಡಿಯೋ ಕಂಪನಿ ಯಾವುದು? ಮುಂದೆ ಓದಿ.....

ಅಪ್ಪನ ಹೆಸರಿನಲ್ಲಿ ಆಡಿಯೋ ಕಂಪನಿ

ಪುನೀತ್ ರಾಜ್ ಕುಮಾರ್ ಅವರು ಹೊಸ ಆಡಿಯೋ ಕಂಪನಿಯನ್ನ ಸ್ಥಾಪಿಸುತ್ತಿದ್ದು, ಅದಕ್ಕೆ ಡಾ.ರಾಜ್ ಕುಮಾರ್ ಅವರ ಹೆಸರಿಟ್ಟಿದ್ದಾರಂತೆ.

ಪುನೀತ್ ಮತ್ತು ರಕ್ಷಿತ್ ದೊಡ್ಡತನದಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತ

'ರಾಜ್ ಕುಮಾರ್ ಮ್ಯೂಸಿಕ್' ಸಂಸ್ಥೆ

ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದ ಪುನೀತ್ ಈಗ ತಮ್ಮ ಹೊಸ ಆಡಿಯೋ ಕಂಪನಿಗೆ 'ರಾಜ್ ಕುಮಾರ್ ಮ್ಯೂಸಿಕ್' ಎಂದು ಹೆಸರಿಟ್ಟಿದ್ದಾರಂತೆ.

'ಅಂಜನಿಪುತ್ರ' ಚಿತ್ರದಿಂದಲೇ ಆರಂಭ

ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರದ ಮೂಲಕ 'ರಾಜ್ ಕುಮಾರ್ ಮ್ಯೂಸಿಕ್' ಕಂಪನಿ ಸ್ಯಾಂಡಲ್ ವುಡ್ ನಲ್ಲಿ ಆರಂಭವಾಗಲಿದೆ ಎನ್ನಲಾಗಿದೆ.

ನಟ-ನಿರ್ಮಾಪಕ ಈಗ 'ಆಡಿಯೋ ಮಾಲೀಕ'

ಬರಿ ನಟನಾಗಿ ಅಭಿಮಾನಿಗಳನ್ನ ರಂಜಿಸುತ್ತಿದ್ದ ಪುನೀತ್ ರಾಜ್ ಕುಮಾರ್ ಈಗ, ನಿರ್ಮಾಪಕನಾಗಿ ಒಳ್ಳೆಯ ಸದಭಿರುಚಿಯ ಸಿನಿಮಾಗಳ ಮೂಲಕ ಕನ್ನಡ ಕಲಾರಸಿಕರನ್ನ ರಂಜಿಸಲಿದ್ದಾರೆ. ಇದರ ಜೊತೆ ಸಂಗೀತ ಲೋಕದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ.

ಅಪ್ಪು ನಿರ್ಮಾಣದ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ ಶಿವಣ್ಣ

ಅಪ್ಪ-ಅಮ್ಮನ ಹೆಸರಿನಲ್ಲಿ ಚಿತ್ರರಂಗಕ್ಕೆ ಮತ್ತಷ್ಟು ಕೊಡುಗೆ

ಪುನೀತ್ ರಾಜ್ ಕುಮಾರ್ ಅವರ ತಂದೆ ಡಾ ರಾಜ್ ಕುಮಾರ್ ಹಾಗೂ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಬಹುಪಾಲು ಜೀವನವನ್ನ ಕನ್ನಡ ಚಿತ್ರರಂಗಕ್ಕೆ ಮೀಸಲಿಟ್ಟಿದ್ದರು. ಈಗ ಅವರಿಬ್ಬರ ಅನುಪಸ್ಥಿತಿಯಲ್ಲೂ ಅವರ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ ಅವರ ಪ್ರೀತಿಯ ಮಗ.

ಸ್ಟಾರ್ ನಟರ ಈ ಒಳ್ಳೆಯ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ!

English summary
Kannada Actor, Power Star Puneeth Rajkumar Started His New Music Company in the Name of Dr Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X