'ಪವರ್ ಆಫ್ ಯೂತ್ ಚಾಲೆಂಜ್' ಆರಂಭಿಸಿದ ಯುವರತ್ನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯುವರತ್ನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ.

ಕನ್ನಡ ಮತ್ತು ತೆಲುಗು ವರ್ಷನ್‌ನಲ್ಲಿ 'ಪವರ್ ಆಫ್ ಯೂತ್' ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ 3.4 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.

ಇದೀಗ, ಈ ಹಾಡನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಚಿತ್ರತಂಡ ಪ್ಲಾನ್ ಮಾಡಿದೆ. 'ಪವರ್ ಆಫ್ ಯೂತ್' ಎಂಬ ಚಾಲೆಂಜ್ ಆರಂಭಿಸಿರುವ ಚಿತ್ರತಂಡ ಅಭಿಮಾನಿಗಳನ್ನು ಡ್ಯಾನ್ಸ್ ವಿಡಿಯೋ ಮಾಡಿ ಕಳುಹಿಸಿ ಎಂದು ಕರೆ ನೀಡಿದೆ.

Puneeth rajkumar starts Power of Youth Dance Challenge

ನೀವು ಮಾಡಬೇಕಾಗಿರುವುದು ಇಷ್ಟೇ....

ಪವರ್ ಆಫ್ ಯೂತ್ ಹಾಡಿನಲ್ಲಿ ಬರುವ ಸರಳವಾದ ಸ್ಟೆಪ್ಸ್ ಹಾಕಿ ವಿಡಿಯೋ ಮಾಡಿ #PowerOfYouth ಎಂಬ ಹ್ಯಾಷ್‌ಟ್ಯಾಗ್ ಹಾಕಿ ಅಪ್‌ಲೌಡ್ ಮಾಡಬೇಕು. ಅಂತಿಮವಾಗಿ ದಿ ಬೆಸ್ಟ್ ಎನಿಸುವ ವಿಡಿಯೋಗೆ ಪುನೀತ್ ರಾಜ್ ಕುಮಾರ್ ಹಾಗೂ ಯುವರತ್ನ ಚಿತ್ರತಂಡದಿಂದ ಸ್ಪೆಷಲ್ ಹಾಗೂ ಸರ್ಪ್ರೈಸ್ ಉಡುಗೊರೆ ಇದೆ.

ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಇನ್ನುಳಿದಂತೆ ಸಂತೋಷ್ ಆನಂದ್ ರಾಮ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಎಸ್ ಎಸ್ ತಮನ್ ಅವರ ಸಂಗೀತವಿದದೆ. ನಕಾಶ್ ಅಜೀಜ್ ಹಾಡಿದ್ದಾರೆ. ಮೊದಲನೇ ಹಾಡು ಹಿಟ್ ಆದ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಲು ವೇದಿಕೆ ಸಜ್ಜಾಗುತ್ತಿದೆ.

ಎರಡನೇ ಹಾಡನ್ನು ಸ್ವತಃ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಇನ್ನು ಚಿತ್ರದಲ್ಲಿ ಪುನೀತ್‌ಗೆ ಜೋಡಿಯಾಗಿ ಸಯೇಶಾ ಕಾಣಿಸಿಕೊಂಡಿದ್ದಾರೆ. ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್, ದಿಗಂತ್, ವಸಿಷ್ಠ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Kannada actor Puneeth rajkumar starts 'Power of Youth Dance Challenge'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X