For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಕಡೆಗೆ ಅಪ್ಪು ಯಾತ್ರೆ: ಯಾವ ಊರಿಗೆ ಯಾವಾಗ ಬರ್ತಾರೆ ಪವರ್ ಸ್ಟಾರ್

  |

  ಮೈಸೂರಿನಲ್ಲಿ ನಡೆಯಬೇಕಿದ್ದ ಯುವ ಸಂಭ್ರಮ ರದ್ದುಗೊಳಿಸಿದ ನಂತರ ರಾಜ್ಯಾದ್ಯಂತ ಅಭಿಮಾನಿಗಳನ್ನು ಭೇಟಿ ಮಾಡಲು ನಾನೇ ಬರುತ್ತೇನೆ ಎಂದು ಪವರ್ ಸ್ಟಾರ್ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಮಾರ್ಚ್ 21ರಿಂದ ಯುವಸಂಭ್ರಮ ಯಾತ್ರೆ ಶುರು ಮಾಡುತ್ತಿದ್ದಾರೆ.

  ಯಾವ ಊರಿಗೆ ಯಾವಾಗ ಬರ್ತಾರೆ ಗೊತ್ತಾ ಪವರ್ ಸ್ಟಾರ್? | Yuvarathna | Puneeth Rajkumar | Filmibeat Kannada

  ಯುವರತ್ನ ಸಿನಿಮಾದ ಬಿಡುಗಡೆ ಹಿನ್ನೆಲೆ ಪವರ್ ಸ್ಟಾರ್ ಭರ್ಜರಿಯಾಗಿ ಪ್ರಚಾರ ಆರಂಭಿಸುತ್ತಿದ್ದಾರೆ. ಪುನೀತ್, ಧನಂಜಯ್ ಸೇರಿದಂತೆ ಯುವರತ್ನ ಚಿತ್ರತಂಡ ಮೂರು ದಿನಗಳ ಕಾಲ ಕೆಲವು ಪ್ರಮುಖ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಈ ಕುರಿತು ಹೊಂಬಾಳೆ ಫಿಲಂಸ್ ವಿವರ ಹಂಚಿಕೊಂಡಿದೆ.

  ಪುನೀತ್ ರಾಜ್ ಕುಮಾರ್ ಟ್ವೀಟ್ ಖಂಡಿಸಿದ ನೆಟ್ಟಿಗರು: ಅಡ್ಮಿನ್ ವಿರುದ್ಧ ಆಕ್ರೋಶಪುನೀತ್ ರಾಜ್ ಕುಮಾರ್ ಟ್ವೀಟ್ ಖಂಡಿಸಿದ ನೆಟ್ಟಿಗರು: ಅಡ್ಮಿನ್ ವಿರುದ್ಧ ಆಕ್ರೋಶ

  ಮಾರ್ಚ್ 21 ರಂದು ಗುಲ್ಬರ್ಗ, ಬೆಳಗಾವಿ ಹಾಗೂ ಹುಬ್ಬಳ್ಳಿಗೆ ಪವರ್ ಸ್ಟಾರ್ ಭೇಟಿ ನೀಡಲಿದ್ದಾರೆ.

  - ಗುಲ್ಬರ್ಗ, ಬೆಳಗ್ಗೆ 10.30- ಏಶಿಯನ್ ಮಾಲ್ ಪಕ್ಕ

  - ಬೆಳಗಾವಿ, ಮಧ್ಯಾಹ್ನ 1 ಗಂಟೆಗೆ- ಐನಾಕ್ಸ್ ಚಂದನ್ ಪಾರ್ಕಿಂಗ್

  - ಹುಬ್ಬಳ್ಳಿ, ಸಂಜೆ 4.30ಕ್ಕೆ- ಅರ್ಬನ್ ಓಯಾಸಿಸ್ ಮಾಲ್ ಹತ್ತಿರ

  ಮಾರ್ಚ್ 22 ರಂದು ಬಳ್ಳಾರಿ, ಚಿತ್ರದುರ್ಗ, ತುಮಕೂರಿಗೆ ಪುನೀತ್ ಭೇಟಿ ನೀಡಲಿದ್ದಾರೆ.

  - ಬಳ್ಳಾರಿ, ಬೆಳಗ್ಗೆ 9.30ಕ್ಕೆ ದುರ್ಗಾಂಬ ದೇವಸ್ಥಾನ

  - ಚಿತ್ರದುರ್ಗ, ಮಧ್ಯಾಹ್ನ 1ಕ್ಕೆ- ಹಳೇ ಮಾಧ್ಯಮಿಕ ಶಾಲಾ ಆವರಣ

  - ತುಮಕೂರು, ಸಂಜೆ 4.30ಕ್ಕೆ- ಎಸ್ ಐ ಟಿ ಇಂಜಿನಿಯರಿಂಗ್ ಕಾಲೇಜು ಮೈದಾನ

  ಮಾರ್ಚ್ 23 ರಂದು ಮೈಸೂರು ಹಾಗೂ ಮಂಡ್ಯಕ್ಕೆ ಪವರ್ ಸ್ಟಾರ್ ಆಗಮಿಸಲಿದ್ದಾರೆ.

  - ಮೈಸೂರು, ಬೆಳಗ್ಗೆ 10 ಗಂಟೆಗೆ- ಓಪನ್ ಏರ್ ಥಿಯೇಟರ್ ಮಾನಸ ಗಂಗೋತ್ರಿ ಕ್ಯಾಂಪಸ್

  - ಮಂಡ್ಯ, ಮಧ್ಯಾಹ್ನ 1.30ಕ್ಕೆ- ಸಿಲ್ವರ್ ಜ್ಯುಬ್ಲಿ ಮೈದಾನ

  ಇದು ಮೊದಲ ಹಂತದ ಮಾಹಿತಿ. ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ಪುನೀತ್ ಭೇಟಿ ನೀಡಲಿದ್ದಾರೆ. ಯುವಸಂಭ್ರಮ ಯಾತ್ರೆಯಲ್ಲಿ ಅಪ್ಪು ಜೊತೆ ಯುವರತ್ನ ತಂಡ ಭಾಗಿಯಾಗಲಿದೆ.

  ಏಪ್ರಿಲ್ 1 ರಂದು ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಇದು. ಪುನೀತ್, ಸಯೇಶಾ, ಧನಂಜಯ್, ಶರತ್ ಕುಮಾರ್, ಸೋನು ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Kannada Actor Puneeth Rajkumar and his Yuvaratna team starts 'Yuva Sambhrama' From March 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X