ಪುನೀತ್- ಸುದೀಪ್ ಅದ್ಬುತ ಕಟೌಟ್: ಪ್ರಚಾರದ ಗಿಮಿಕ್ ಎಂದು ಮೊಸರಲ್ಲಿ ಕಲ್ಲು ಹುಡುಕಿದರು!

ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗ ಎದುರು‌ ನೋಡುತ್ತಿರುವ ಬಹುನಿರೀಕ್ಷಿತ ಕನ್ನಡದ ಸಿನಿಮಾ 'ವಿಕ್ರಾಂತ್ ರೋಣ'. ಈಗಾಗಲೇ ಟ್ರೈಲರ್ ಹಾಗು ಹಾಡುಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣನನ್ನು ತ್ರಿಡಿಯಲ್ಲಿ ಕಣ್ತುಂಬಿಕೊಳ್ಳುವುದಷ್ಟೇ ಬಾಕಿ ಇದೆ.

ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲು ಅಭಿಮಾನಿಗಳು​ ಸಜ್ಜಾಗಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರದ ಅಬ್ಬರದ ಪ್ರಚಾರವನ್ನು ಸಿನಿಮಾತಂಡ ಮಾಡುತ್ತಿದೆ. ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ನಾಲ್ಕು ದಿನದಲ್ಲಿ ವಿಕ್ರಾಂತ್ ರೋಣ ತೆರೆಗೆ ಅಪ್ಪಳಿಸಲಿದ್ದಾನೆ.

ಈಗಾಗಲೇ ಬಹುತೇಕ ಚಿತ್ರಮಂದಿರಗಳು ಕಟೌಟ್ ಹಾಕಿಸಿಕೊಂಡು ಸಿಂಗಾರ ಮಾಡಿಕೊಳ್ಳುತ್ತಿವೆ. ಆದರೆ ಕಟೌಟ್‌ಗಳಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಮಾತ್ರ ಸುದೀಪ್- ಪುನೀತ್ ಇರುವ ಕಟೌಟ್, ಇದು ಸ್ನೇಹದ ಪ್ರತೀಕವಾಗಿ ತಯಾರಾಗುತ್ತಿದೆ.

ಅಪ್ಪು- ಕಿಚ್ಚನ ಅಂದದ ಕಟೌಟ್!

ಅಪ್ಪು- ಕಿಚ್ಚನ ಅಂದದ ಕಟೌಟ್!

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮನ್ನು ಪ್ರೀತಿಸುವವರ ಮನಸ್ಸಲ್ಲಿ ಸದಾ ಹಸಿರಾಗಿ ಇರುತ್ತಾರೆ. ಸಿನಿಮಾರಂಗದಲ್ಲೂ ಕೂಡ ಅಪ್ಪು ನೆನಪು ಅಜರಾಮರ. ಸಿನಿಮಾ ಮಂದಿ ಕೂಡ ಅಪ್ಪು ಅವರನ್ನು ಅಷ್ಟು ಸುಲಭವಾಗಿ ಮರೆತಿಲ್ಲ, ಮರೆಯುವುದು ಇಲ್ಲ. ಯಾವುದೋ ಒಂದು ವಿಚಾರದಲ್ಲಿ ಅಪ್ಪು ಬಂದೇ ಬರ್ತಾರೆ ಆ ಮಟ್ಟಿಗಿನ ವರ್ಚಸ್ಸು ಮೂಡಿಸಿದ ವ್ಯಕ್ತಿತ್ವ ಪುನೀತ್ ರಾಜಕುಮಾರ್ ಅವರದ್ದು. ಇದೀಗ ವಿಕ್ರಾಂತ್ ರೋಣನಿಗೂ ಕೂಡ ಪರೋಕ್ಷವಾಗಿ ಪುನೀತ್ ರಾಜಕುಮಾರ್ ಸಾಥ್ ಕೊಟ್ಟಿದ್ದಾರೆ ಅಂತಲೇ ಹೇಳಬಹುದು. ಸುದೀಪ್ ಮತ್ತು ಪುನೀತ್ ರಾಜಕುಮಾರ್ ಒಟ್ಟಿಗೆ ಇರುವ ಕಟೌಟ್ ಒಂದು ತಯಾರಾಗುತ್ತದೆ. ಈ ಕಟೌಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸ್ನೇಹದ ಸಂದೇಶ ಸಾರುವ ಕಟೌಟ್!

ಸ್ನೇಹದ ಸಂದೇಶ ಸಾರುವ ಕಟೌಟ್!

ಬೆಂಗಳೂರಿನ ಶೇಷಾದ್ರಿ ರಸ್ತೆಯ ಆನಂದ್ ಆರ್ಟ್ಸ್​ನಲ್ಲಿ ಸಿನೆಮಾದ ಕಟೌಟ್​ಗಳು ಸಿದ್ಧಗೊಳ್ಳುತ್ತಿವೆ. ಇದೇ ಮೊದಲ ಬಾರಿಗೆ ಥಿಯೇಟರ್‌ಗಳ ಅಂಗಳದಲ್ಲಿ ಸುದೀಪ್ ಜೊತೆಗಿನ ಅಪ್ಪು ಅವರ ಕಟೌಟ್​ಗಳನ್ನೂ ಸಹ ಹಾಕಲಾಗುತ್ತಿದೆ. ಇಬ್ಬರು ನಟರ ಸ್ನೇಹ ಸಂಬಂಧವನ್ನು ತಿಳಿಸುವ ಉದ್ದೇಶ ಇದರ ಹಿಂದಿದ್ದು 32 ಅಡಿ‌ ಉದ್ದದ ಕಟೌಟ್ ಇದಾಗಿದೆ.

ಕಟೌಟ್ ಪ್ರಚಾರದ ಗಿಮಿಕ್?

ಕಟೌಟ್ ಪ್ರಚಾರದ ಗಿಮಿಕ್?

ಸುದೀಪ್ ಮತ್ತು ಪುನೀತ್ ಅವರ ಸ್ನೇಹವನ್ನು ಸಾರುವಂತಹ ಕಟೌಟ್ ಆದಾಗಿಲಿದೆ. ಆದರೆ ಈ ರೀತಿಯ ಯಾವುದೋ ಒಂದು ವಿಭಿನ್ನ ವಿಚಾರ ಬಂದಾಗ ಅದಕ್ಕೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಅಂತೆಯೇ ಕಟೌಟ್ ವಿಚಾರದಲ್ಲೂ ಕೂಡಾ ಸಾಕಷ್ಟು ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕಟೌಟ್ ಮಾಡುತ್ತಿರುವುದು 'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರಕ್ಕಾಗಿ. ಇದೊಂದು ಸಿನಿಮಾ ಪ್ರಚಾರದ ತಂತ್ರ ಎನ್ನುವ ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿದೆ. ಅದು ಏನೇ ಇದ್ದರೂ ಇದೊಂದು ಸುಂದರ ಕಟೌಟ್ ಎನ್ನುವುದನ್ನು ಒಪ್ಪಲೇ ಬೇಕು. ಗಿಮಿಕ್ ಎನ್ನುವುದು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವಷ್ಟೇ.

ಕಟೌಟ್ ಮೆಚ್ಚಿದ ಅಪ್ಪು ಫ್ಯಾನ್ಸ್!

ಕಟೌಟ್ ಮೆಚ್ಚಿದ ಅಪ್ಪು ಫ್ಯಾನ್ಸ್!

ಮತ್ತೊಂದು ಕಡೆ ಈ ಕಟೌಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸುದೀಪ್ ಮತ್ತು ಪುನೀತ್ ಇಬ್ಬರು ಜೊತೆಗೆ ಇರುವ ಈ ಮುದ್ದಾದ ಫೋಟೋ ಈ ಹಿಂದೆಯೇ ಸಾಕಷ್ಟು ವೈರಲ್ ಆಗಿತ್ತು. ಇದೀಗ ಇದೇ ಕಟೌಟ್ ತಯಾರಿಸಲು ಅಭಿಮಾನಿಗಳು ಮುಂದೆ ಬಂದಿದ್ದಾರೆ. ಇದು ಚಿತ್ರತಂಡದ ಯೋಜನೆಯಲ್ಲ ಬದಲಿಗೆ ಸುದೀಪ್ ಅಭಿಮಾನಿಗಳು ಈ ರೀತಿಯಾದ ಒಂದು ವಿಭಿನ್ನ ಕಟೌಟ್ ಮಾಡಿ ಚಿತ್ರಮಂದಿರಗಳ ಮುಂದೆ ನಿಲ್ಲಿಸುವ ಪ್ಲಾನ್ ಮಾಡಿದ್ದಾರೆ. ಈ ಕಟೌಟ್‌ಗೆ ಅಪ್ಪು ಅಭಿಮಾನಿಗಳಿಂದಲೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

More from Filmibeat

English summary
Puneeth Rajkumar, Sudeep Cutout Is Promotion Gimmick Of Vikrant Rona Says Netizens, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X