ಸ್ಯಾಂಡಲ್ ವುಡ್ ನ ಉತ್ತಮ ಸಿನಿಮಾಗಳ ಪರ ಧ್ವನಿ ಎತ್ತಿದ ಸ್ಟಾರ್ ನಟರು

ಕನ್ನಡದಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತೆ. ವಾರಕ್ಕೆ ಸುಮಾರು 10 ಸಿನಿಮಾಗಳು ರಿಲೀಸ್ ಆದರು ಪ್ರೇಕ್ಷಕರ ಮನ ಗೆಲ್ಲುವ ಸಿನಿಮಾಗಳ ಸಂಖ್ಯೆ ತೀರಾ ವಿರಳ. ಇತ್ತ ಚಿತ್ರಮಂದಿರಕ್ಕೆ ಜನ ಬರಲ್ಲ ಎನ್ನುವುದು ಚಿತ್ರತಂಡದ ಅಳಲು. ಉತ್ತಮ ಸಿನಿಮಾಗಳನ್ನು ಪ್ರೇಕ್ಷಕರು ಯಾವತ್ತು ಕೈಬಿಡಲ್ಲ. ಆದರೆ ಉತ್ತಮ ಸಿನಿಮಾಗಳಿಗೆ ಚಿತ್ರಮಂದಿರಗಳೆ ಸಿಗದಿರುವುದು ಕನ್ನಡ ಚಿತ್ರರಂಗದ ದುರಂತವೆ ಸರಿ.

ಈ ವರ್ಷ 2020ರಲ್ಲಿ ಜನವರಿಯಿಂದ ಇದುವರೆಗೂ ರಿಲೀಸ್ ಆದ ಕನ್ನಡ ಸಿನಿಮಾಗಳಲ್ಲಿ ನಾಲ್ಕೈದು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಪರಭಾಷ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳು ಚಿತ್ರಮಂದಿರದಿಂದ ಎತ್ತಂಗಡಿ ಆಗುತ್ತಿವೆ. ಇತ್ತೀಚಿಗೆ ರಿಲೀಸ್ ಆದ ದಿಯಾ, ಲವ್ ಮಾಕ್ಟೈಲ್, ಮಾಲ್ಗುಡಿ ಡೇಸ್ ಚಿತ್ರಗಳಿಗೂ ಇದೆ ಪರಿಸ್ಥಿತಿ ಎದುರಾಗಿದೆ.

ಉತ್ತಮ ಸಿನಿಮಾಗಳ ದುಸ್ಥಿತಿ ಕಂಡು ಸ್ಟಾರ್ ನಟರು ಸಿನಿಮಾಗಳ ಪರ ನಿಂತಿದ್ದಾರೆ. ಒಂದೊಳ್ಳೆ ಸಿನಿಮಾಗೆ ಸೋಲಾಗಬಾರದೆಂದು ಸ್ವತಹ ಅವರೆ ಚಿತ್ರದ ಪರ ಧ್ವನಿ ಎತ್ತುತ್ತಿದ್ದಾರೆ. ಇದರಿಂದ ಈಗ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಒಳ್ಳೆಯ ಬೆಳವಣಿಗೆ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ದಿಯಾ' ಸಿನಿಮಾದ ಬೆನ್ನಿಗೆ ನಿಂತ ಸ್ಟಾರ್ ನಟರು

'ದಿಯಾ' ಸಿನಿಮಾದ ಬೆನ್ನಿಗೆ ನಿಂತ ಸ್ಟಾರ್ ನಟರು

ಇತ್ತೀಚಿಗೆ ರಿಲೀಸ್ ಆದ 'ದಿಯಾ' ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೇ ಚಿತ್ರವನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿತ್ತು. ಒಂದೊಳ್ಳೆ ಸಿನಿಮಾಗೆ ಆಗುತ್ತಿರುವ ಅನ್ಯಾನ ಕಂಡು ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಯಶ್, ಪ್ರಶಾಂತ್ ನೀಲ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರು ಸಾಥ್ ನೀಡಿದ್ದಾರೆ. ಚಿತ್ರಮಂದಿರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿ ಫಿದಾ ಆದ ರಕ್ಷಿತ್ ಶೆಟ್ಟಿ ದಿಯಾ ಸಿನಿಮಾಗೆ ಹೆಚ್ಚು ಪ್ರಮೋಷನ್ ಮಾಡುತ್ತಿದ್ದಾರೆ.

ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಿಕೊಂಡ 'ಲವ್ ಮಾಕ್ಟೈಲ್'

ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಿಕೊಂಡ 'ಲವ್ ಮಾಕ್ಟೈಲ್'

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಲವ್ ಮಾಕ್ಟೈಲ್ ಸಿನಿಮಾಗೂ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾವನ್ನು ಚಿತ್ರಮಂದಿರದಿಂದ ಕಿತ್ತುಹಾಕಲಾಗಿತ್ತು. ಚಿತ್ರಕ್ಕೆ ಆಗುತ್ತಿರುವ ಅನ್ಯಾಯ ನೋಡಿ ಕಿಚ್ಚ ಸುದೀಪ್ ಕೂಡ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಕೂಡ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಸ್ಟಾರ್ಸ್ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ನಂತರ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಲಾಗಿದೆ.

'ಮಾಲ್ಗುಡಿ ಡೇಸ್' ಗೆ ಶಿವಣ್ಣ-ಪುನೀತ್ ಸಾಥ್

'ಮಾಲ್ಗುಡಿ ಡೇಸ್' ಗೆ ಶಿವಣ್ಣ-ಪುನೀತ್ ಸಾಥ್

ವಿಜಯ್ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದಲ್ಲಿ ವಿಜಯ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿಫ್ರೆಂಟ್ ಲುಕ್ ಮೂಲಕ ಪ್ರೇಕ್ಷಕರ ಮನಗೆದ್ದ ಸಿನಿಮಾ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಉತ್ತಮ ಸಿನಿಮಾಗೆ ಆಗುತ್ತಿರುವ ಅನ್ಯಾಯ ನೋಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ನಟರು 'ಮಾಲ್ಗುಡಿ ಡೇಸ್' ಸಿನಿಮಾಗೆ ಸಾಥ್ ನೀಡಿದ್ದಾರೆ. ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

'ನಾನು ಮತ್ತು ಗುಂಡ', 'ಜಂಟಲ್ ಮೆನ್'

'ನಾನು ಮತ್ತು ಗುಂಡ', 'ಜಂಟಲ್ ಮೆನ್'

ಇತ್ತೀಚಿಗೆ ರಿಲೀಸ್ ಆದ ಸಿನಿಮಾಗಳಲ್ಲಿ ನಾನು ಮತ್ತು ಗುಂಡ ಹಾಗೂ ಜಂಟಲ್ ಮನ್ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನು ಮತ್ತು ಗುಂಡ ಸಿನಿಮಾ ಅದ್ಭುತ ಸಿನಿಮಾವಾದರು ಚಿತ್ರಮಂದಿರದಿಂದ ಎತ್ತಂಗಡಿಯಾಗಿದೆ. ಇತ್ತೀಚಿಗೆ ರಿಲೀಸ್ ಆ ಜಂಟಲ್ ಮನ್ ಸಿನಿಮಾದ್ದು ಇದೆ ಪರಿಸ್ಥಿತಿ. ಈ ಎರಡು ಸಿನಿಮಾಗಳು ಸಹ ಸ್ಟಾರ್ ನಟರು ಬೆಂಬಲ ಸೂಚಿಸಿದ್ದು, ಸಿನಿಮಾ ವೀಕ್ಷಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Kannada stars like Puneeth Rajkumar,Sudeep, Rakshith Shetty and others Actors support for Good Kannada films. Rakshith Shetty support Dia Kannada film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X