'ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ'-ಪುನೀತ್ ರಾಜ್ ಕುಮಾರ್ ಟ್ವೀಟ್
ತ್ರಿಭಾಷಾ ಸೂತ್ರವನ್ನು ವಿರೋಧಿಸಿ ದ್ವಿಭಾಷಾ ಸೂತ್ರವನ್ನ ಬೆಂಬಲಿಸುವಂತೆ ಕಳೆದ ಎರಡ್ಮೂರು ದಿನದಿಂದ ಟ್ವಿಟ್ಟರ್‌ನಲ್ಲಿ ಅಭಿಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಕನ್ನಡ ಚಲನಚಿತ್ರ ನಟ-ನಿರ್ದೇಶಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
Recommended Video
ದ್ವಿಭಾಷಾನೀತಿ ಅಭಿಯಾನ ಹಿನ್ನೆಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಣ್ಣಾವ್ರ ಫೋಟೋ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ. 'ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ" ತಾಯಿ ಮಗುವಿಗೆ ಕಲಿಸುವ ಮೊದಲ ಭಾಷೆ ಮಾತೃಭಾಷೆ, ಮಗುವಿನ ಯೋಚನ ಭಾಷೆ -ಮಾತೃ ಭಾಷೆ ಯಾಗಿರುತ್ತದೆ ..ಆ ಭಾಷೆ ಕಲಿತಾಗಲೇ ಜಗತ್ತಿನ ಎಲ್ಲ ವಿಚಾರಗಳಿಗೆ ಸ್ಪಂದಿಸುವ ಶಕ್ತಿ ಹಾಗು ನಂಬಿಕೆ ಹುಟ್ಟುತ್ತದೆ ..! ಭಾಷೆ ಒಂದು ಭಾವನೆ ನಮ್ಮ ಭಾವನೆ ಕನ್ನಡ ಕಲಿತು ಕಲಿಸೋಣ' ಎಂದಿದ್ದಾರೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಅಧ್ಯತೆ, ಕನ್ನಡವೇ ಶ್ರೇಷ್ಠ ಎಂದು ಹೇಳಿರುವ ಪುನೀತ್ ರಾಜ್ ಕುಮಾರ್ ದ್ವಿಭಾಷಾನೀತಿಯ ಅಥವಾ ಹಿಂದಿ ಹೇರಿಕೆಯ ವಿಚಾರವಾಗಿ ತಮ್ಮ ಟ್ವೀಟ್‌ನಲ್ಲಿ ಚರ್ಚಿಸಿಲ್ಲ. ಇನ್ನು ಸಂತೋಷ್ ಆನಂದ್ ರಾಮ್ ಸಹ ದ್ವಿಭಾಷಾನೀತಿ ಬೆಂಬಲಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮುಂದೆ ಓದಿ...

ಕನ್ನಡ ನನ್ನ ತಾಯಿ, ನನ್ನ ಸ್ಥಾಯಿ
''ಕರ್ನಾಟಕ-ಕನ್ನಡ- ಕನ್ನಡಿಗರು- ಕನ್ನಡತನ-ಕನ್ನಡಸಂಸ್ಕೃತಿ..ಪಂಚ ಬೂತಗಳಂತೆ ಅದನ್ನು ಯಾರೇ ಒಡೆದು ನೋಡುವ ಕೆಲಸ ಮಾಡಿದಲ್ಲಿ ಅವರ ವಿರುದ್ಧ ನಾವು ಧ್ವನಿಯಾಗಬೇಕು! ಕನ್ನಡ ನನ್ನ ತಾಯಿ, ನನ್ನ ಸ್ಥಾಯಿ' ಎಂದು ಸಂತೋಷ್ ಆನಂದ್ ರಾಮ್ ದ್ವಿಭಾಷಾನೀತಿ ಬೆಂಬಲಿಸಿದ್ದಾರೆ.

ನಾವು ಏಕೆ ಕನ್ನಡ ಬಳಸಬೇಕು?
''ನಮಗಿರುವುದು ಒಂದೇ ನಾಡು ಕನ್ನಡ ನಾಡು! ಭಾಷೆ ಕನ್ನಡ..ನಮ್ಮ ಮಕ್ಕಳು ಏಕೆ ಕನ್ನಡ ಕಲಿಯ ಬೇಕು?? ಕನ್ನಡ 8 ಜ್ಞಾನಪೀಠ ದೊರಿಕಿದ ಮಹಾನ್ ಪದ್ಯ- ಗಮಕಗಳಿರುವ ಪುರಾತನ ಭಾಷೆ ..ಮಕ್ಕಳಿಗೆ ತಮ್ಮ ಬೇರು ಎನೆಂದು ತಿಳಿಯುತ್ತದೆ..! ನಾವು ಏಕೆ ಕನ್ನಡ ಬಳಸಬೇಕು ?? ಇದಕ್ಕೆ ಉತ್ತರ...ನಾವು ಏಕೆ ನಮ್ಮ ತಾಯಿಯನ್ನ ಗೌರವಿಸಬೇಕು ?? ಚೆನ್ನಾಗಿ ಪೋಷಿಸಬೇಕು??'' - ಸಂತೋಷ್ ಆನಂದ್ ರಾಮ್

ದೇಶವನ್ನ ಕನ್ನಡದಲ್ಲೇ ಬಣ್ಣಿಸುತ್ತೇನೆ
''ನಾನು ನನ್ನ ದೇಶವನ್ನ ಕನ್ನಡದಲ್ಲೇ ಬಣ್ಣಿಸುತ್ತೇನೆ..ಕನ್ನಡಿಗನಾಗಿ ನಮ್ಮ ದೇಶವನ್ನ ಪ್ರೀತಿಸುತ್ತೇನೆ...ಕನ್ನಡದಲ್ಲೇ ಓದಿ ಈ ದೇಶದ ಚರಿತ್ರೆಯನ್ನು ತಿಳಿದುಕೊಂಡಿದ್ದೇನೆ... ನನ್ನ ಭಾಷೆ ನನ್ನ ಭಾವನೆ... ನನ್ನ ದೇಶ ನನ್ನ ಹೆಮ್ಮೆ....' ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಟ್ವೀಟ್ ಮಾಡಿದ್ದಾರೆ.

ಸಿಂಪಲ್ ಸುನಿ ಮತ್ತು ಇತರರು ಬೆಂಬಲ
ಇದಕ್ಕೂ ಮುಂಚೆ ಸಿಂಪಲ್ ಸುನಿ, ನಿಖಿಲ್ ಕುಮಾರ್, ವಸಿಷ್ಠ ಸಿಂಗ, ಆ ದಿನಗಳು ಖ್ಯಾತಿಯ ಚೇತನ್, ದೀಪಾ ಸನ್ನಿದಿ ದ್ವಿಭಾಷಾ ನೀತಿ ಬೆಂಬಲಿಸಿದ್ದಾರೆ.


Click it and Unblock the Notifications










