ಕೊಡಗಿಗೆ ಆಸ್ಪತ್ರೆ ಅಭಿಯಾನಕ್ಕೆ ನಟ ಪುನೀತ್ ಸಾಥ್
ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವ ಅಭಿಯಾನ ಕೆಲವು ದಿನಗಳ ಹಿಂದೆಯಿಂದ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಈ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ನಟ, ನಟಿಯರು ಕೂಡ ಬೆಂಬಲ ಸೂಚಿಸಿದ್ದಾರೆ.
ಸದ್ಯ, ನಟ ಪುನೀತ್ ರಾಜ್ ಕುಮಾರ್ ಕೂಡ ಕೊಡಗು ಜನರ ಪರ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಈ ಅಭಿಮಾನಕ್ಕೆ ತಾವು ಕೈ ಜೋಡಿಸಿದ್ದಾರೆ.
''ವೀರರ ನಾಡು ಕೊಡಗು ನಮ್ಮ ನಿಮ್ಮೆಲ್ಲರ ಹೆಮ್ಮೆ, ಕೊಡಗಿನ ಪ್ರಕೃತಿಗೆ ಮನಸೋತು ಪ್ರಪಂಚಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ ಕೊಡಗಿನಲ್ಲಿ ಒಂದು ಉತ್ತಮ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆಯಾಗಬೇಕೆಂದು ನನ್ನ ಮನವಿ.ಕೊಡಗಿನ ಜನತೆಗೆ ಹಾಗು ಪ್ರವಾಸಿಗರಿಗೆ ಒಂದು ಮೂಲ ಸೌಕರ್ಯ ಒದಗಿಸಿದಂತಾಗುತ್ತದೆ.'' ಎಂದು ಪುನೀತ್ ಮನವಿ ಮಾಡಿದ್ದಾರೆ.

ಕನ್ನಡ ನಟರಾದ ಶಿವರಾಜ್ ಕುಮಾರ್, ಸುದೀಪ್, ನಟಿ ರಶ್ಮಿಕಾ ಮಂದಣ್ಣ, ಹರ್ಷಿಕಾ ಪುಣಚ್ಛ ಹೀಗೆ ಸಾಕಷ್ಟು ತಾರೆಯರು ಕೊಡಗಿಗೆ ಕೊಡುಗುಗಾಗಿ ಆಸ್ಪತ್ರೆ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ.
ಕೊಡಗುನಲ್ಲಿ ಒಳ್ಳೆಯ ಸುಸಜ್ಜಿತ ಆಸ್ಪತ್ರೆ ಇಲ್ಲ, ಇದರಿಂದ ಅಲ್ಲಿನ ಜನತೆಗೆ ತುಂಬ ತೊಂದರೆ ಆಗುತ್ತಿದೆ. ಎಷ್ಟೊ ಜನ ಇದರಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆ ಭಾಗದ ಜನರು ಆಸ್ಪತ್ರೆಗೆಗಾಗಿ ಮನವಿ ಮಾಡುತ್ತಿದ್ದಾರೆ.


Click it and Unblock the Notifications











