'ಕಾಂತಾರ' ಸಿನಿಮಾದಲ್ಲಿ ನಟಿಸಬೇಕಿತ್ತು ಪುನೀತ್ ರಾಜ್‌ಕುಮಾರ್!

ನಟ ಪುನೀತ್ ರಾಜ್‌ಕುಮಾರ್ ಅಗಲಿ ವರ್ಷವಾಗಲು ಕೆಲವು ದಿನಗಳಷ್ಟೆ ಬಾಕಿ ಉಳಿದಿವೆ, ಆದರೆ ಅವರ ನೆನಪು ಅಭಿಮಾನಿಗಳ ಎದೆಯಿಂದ ಒಂದಿನಿತೂ ಮಾಸಿಲ್ಲ.

ಚಿತ್ರರಂಗದ ಬಗ್ಗೆ, ಸಿನಿಮಾಗಳ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಪುನೀತ್ ರಾಜ್‌ಕುಮಾರ್ ಅವರಿಗಾಗಿ ಹಲವು ನಿರ್ದೇಶಕರು ಹಲವು ಭಿನ್ನ-ಭಿನ್ನ ಕತೆಗಳನ್ನು ರೆಡಿ ಮಾಡಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್ ಸಹ ತಮ್ಮ ಮಾಮೂಲಿ ಕಮರ್ಷಿಯಲ್ ಹಾದಿ ಬಿಟ್ಟು ಬೇರೆ ಮಾದರಿಯ ಸಿನಿಮಾಗಳ ಕಡೆಗೆ ಹೊರಳು ಹಾದಿಯಲ್ಲಿದ್ದರು, ಅದೇ ಸಂದರ್ಭದಲ್ಲಿ ಜವರಾಯ ಅವರನ್ನು ಕರೆದುಬಿಟ್ಟ.

ಪುನೀತ್ ರಾಜ್‌ಕುಮಾರ್ ಅವರಿಗಾಗಿ ಎಂದ ಬರೆದ ಅದೆಷ್ಟೋ ಚಿತ್ರಕತೆಗಳು ಈಗಲೂ ನಿರ್ದೇಶಕರುಗಳ ಲ್ಯಾಪ್‌ಟಾಪ್‌ಗಳಲ್ಲಿ ಭದ್ರವಾಗಿ ಕೂತಿವೆ, ಕೆಲವು ಬೇರೆ ನಟರೊಟ್ಟಿಗೆ ಸಿನಿಮಾ ಸಹ ಆಗಿವೆ. ಅಂಥಹಾ ಸಿನಿಮಾಗಳಲ್ಲಿ 'ಕಾಂತಾರ' ಸಹ ಒಂದು.

Puneeth Rajkumar Supposed To Act In Lead Role Of Kantara Movie

ಹೌದು, ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿರುವ 'ಕಾಂತಾರ' ಸಿನಿಮಾದಲ್ಲಿ ನಟ ಪುನೀತ್ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅಪ್ಪು ಅವರು ಸಿನಿಮಾದಿಂದ ಹಿಂದೆ ಸರಿಯಬೇಕಾಯ್ತು. ಈ ವಿಷಯವನ್ನು ಹೊಂಬಾಳೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ತಿಳಿಸಿದ್ದಾರೆ.

ಕಾರ್ತಿಕ್ ಗೌಡ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ಪ್ರಶ್ನೋತ್ತರ ಸೆಷನ್ ನಡೆಸಿದಾಗ ಈ ವಿಷಯ ಹೇಳಿದ್ದಾರೆ. ''ಪುನೀತ್ ಅವರು, 'ಕಾಂತಾರ' ಸಿನಿಮಾದ ಒಂದು ಕ್ಲಿಪ್ ಆದರೂ ನೋಡಿದ್ರಾ?' ಎಂದು ಅಭಿಮಾನಿಯೊಬ್ಬ ಕಾರ್ತಿಕ್‌ಗೆ ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಕಾರ್ತಿಕ್, ''ಹೆಚ್ಚಿನ ಜನರಿಗೆ ತಿಳಿಯದ ವಿಷಯವೆಂದರೆ 'ಕಾಂತಾರ' ಸಿನಿಮಾದ ಮುಖ್ಯ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ನಾವು ಒಂದು ನಿರ್ದಿಷ್ಟ ಸಮಯದಲ್ಲಿಯೇ ಸಿನಿಮಾವನ್ನು ಚಿತ್ರೀಕರಣ ಮಾಡಬೇಕಿದ್ದ ಕಾರಣ ಆ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಡೇಟ್ಸ್ ಹೊಂದಾಣಿಕೆ ಆಗಲಿಲ್ಲ. ಆಗ ಅವರೇ ರಿಷಬ್ ಶೆಟ್ಟಿಯವರೇ ನಾಯಕ ನಟನ ಪಾತ್ರದಲ್ಲಿ ನಟಿಸಲಿ ಎಂದು ಹೆಸರು ಸೂಚಿಸಿದರು'' ಎಂದಿದ್ದಾರೆ.

ಪುನೀತ್ ಸಲಹೆಯಂತೆ ರಿಷಬ್ ಶೆಟ್ಟಿಯವರೇ ಸಿನಿಮಾದ ನಾಯಕ ಆಗಿದ್ದಾರೆ. ಒಂದು ವೇಳೆ ಅಪ್ಪು ಅವರೇ ಸಿನಿಮಾದ ನಾಯಕ ಆಗಿದ್ದಿದ್ದರೆ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೊಜೆಕ್ಟ್ ಮಾಡುವ ಯೋಚನೆ ಹೊಂಬಾಳೆಗೆ ಇತ್ತು ಎನಿಸುತ್ತದೆ.

ಹೊಂಬಾಳೆ ಪ್ರೊಡಕ್ಷನ್‌ನ ಮೊದಲ ಸಿನಿಮಾ 'ನಿನ್ನಿಂದಲೆ'ನಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದರು. ಅದೇ ಸಿನಿಮಾ ಮೂಲಕ ಹೊಂಬಾಳೆ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿತ್ತು. ಆ ಬಳಿಕ ಅಪ್ಪು ಅಭಿನಯದ 'ರಾಜಕುಮಾರ', 'ಯುವರತ್ನ' ಸಿನಿಮಾಗಳ ನಿರ್ಮಾಣವನ್ನು ಹೊಂಬಾಳೆಯೇ ಮಾಡಿತು. ಅಪ್ಪು ಕಾಲವಾಗುವ ಮುನ್ನ ಸಹ ಹೊಂಬಾಳೆ ನಿರ್ಮಾಣದ 'ದ್ವಿತ್ವ' ಸಿನಿಮಾದಲ್ಲಿ ನಟಿಸಲು ತಯಾರಿ ಆರಂಭಿಸಿದ್ದರು. ಆದರೆ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ಅಪ್ಪು ನಿಧನ ಹೊಂದಿದರು.

ಇನ್ನು 'ಕಾಂತಾರ' ಸಿನಿಮಾವನ್ನು ಸಹ ಹೊಂಬಾಳೆ ನಿರ್ಮಾಣ ಸಂಸ್ಥೆಯೇ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶಕರೂ ಅವರೇ ಸಿನಿಮಾದ ಟೀಸರ್ ಹಾಗೂ ಹಾಡು ಈಗಾಗಲೇ ಸೂಪರ್ ಹಿಟ್ ಆಗಿವೆ. ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ತೆರೆಗೆ ಬರಲಿದೆ.

More from Filmibeat

English summary
Puneeth Rajkumar supposed to act in lead role of Kantara movie said executive producer of Hombale Karthik Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X