ಕೊರೊನಾ ಲಸಿಕೆ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕೊರೊನಾ ಲಸಿಕೆ ಕೂಡ ಹಾಕಲಾಗುತ್ತಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಸಿಕೊಳ್ಳುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಕೊರೊನಾ ಲಸಿಕೆ ಪಡೆಸಿದ್ದಾರೆ.

Recommended Video

Puneeth Rajkumar, ಕೋವಿಡ್ ಲಸಿಕೆ ಪಡೆದ ನಂತರ ಪವರ್ ಸ್ಟಾರ್ ಹೇಳಿದ್ದೇನು? | Filmibeat Kannada

ಕೋವಿಡ್-19 ಮೊದಲ ಡೋಸ್ ಲಸಿಕೆ ಪಡೆದ ಬಗ್ಗೆ ನಟ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. 'ಇಂದು ಮೊದಲ ಡೋಸ್ ಲಸಿಕೆ ಪಡೆದೆ. ನೀವು 45 ವರ್ಷದ ಮೇಲ್ಪಟ್ಟವರಾಗಿದ್ದರೆ ಲಸಿಕೆ ಹಾಕಿಸಿಕೊಳ್ಳಿ' ಎಂದು ಬರೆದುಕೊಂಡಿದ್ದಾರೆ.

ಅಪ್ಪು ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ನಿಮಗೆ 45 ವರ್ಷ ಆಯಿತಾ ಎಂದು ಅಚ್ಚರಿಯ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು 25 ವರ್ಷದವರ ಹಾಗೆ ಕಾಣುತ್ತಿದ್ದೀರಾ ಎನ್ನುತ್ತಿದ್ದಾರೆ. ಇತ್ತೀಚಿಗಷ್ಟೆ ನಟ ಮತ್ತು ರಾಜಕಾರಣಿ ಜಗ್ಗೇಶ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು.

Puneeth Rajkumar got first dose of Covid-19 vaccination

ಜಗ್ಗೇಶ್ ಮತ್ತು ಪತ್ನಿ ಪರಿಮಳ ಜಗ್ಗೇಶ್ ಇಬ್ಬರು ಲಸಿಕೆ ಪಡೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಮೊದಲು ನಟ ಅನಂತ್ ನಾಗ್ ಕೂಡ ಲಸಿಕೆ ಪಡೆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಚಿತ್ರದ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಸಿನಿ ಮಂದಿ ಶೂಟಿಂಗ್, ಪ್ರಚಾರ ಅಂತ ಬ್ಯುಸಿಯಾಗಿದ್ದಾರೆ. ಪವರ್ ಸ್ಟಾರ್ ಇತ್ತೀಚಿಗಷ್ಟೆ ಯುವರತ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಯುವರತ್ನ ಸಿನಿಮಾ ಪ್ರಚಾರದ ವೇಳೆ ಅಪ್ಪು ಇಡೀ ಕರ್ನಾಟಕ ಸುತ್ತಾಡಿದ್ದಾರೆ.

ಇನ್ನು ಬಾಲಿವುಡ್‌ನಲ್ಲಿ ಸಾಕಷ್ಟು ಮಂದಿ ಕಲಾವಿದರಿಗೆ ಕೊರೊನಾ ಸೋಂಕು ತಗುಲಿದೆ. ನಟ ಅಕ್ಷಯ ಕುಮಾರ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಸೇರಿದಂತೆ ಅನೇಕರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ನಟಿ ಅಲಿಯಾ ಭಟ್, ರಣಬೀರ್ ಕಪೂರ್, ಆಮೀರ್ ಖಾನ್, ಮಾಧವನ್ ಸೇರಿದಂತೆ ಅನೇಕ ಕಲಾವಿದರು ಕೊರೊನಾಂದಿಂದ ಗುಣಮುಖರಾಗಿದ್ದಾರೆ.

More from Filmibeat

English summary
Power star Puneeth Rajkumar got first dose of Covid-19 vaccination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X