»   » ದರ್ಶನ್, ಸುದೀಪ್, ಯಶ್ ಬಳಿ ಪುನೀತ್ ಗೆ ಇಷ್ಟವಾಗಿದ್ದೇನು!

ದರ್ಶನ್, ಸುದೀಪ್, ಯಶ್ ಬಳಿ ಪುನೀತ್ ಗೆ ಇಷ್ಟವಾಗಿದ್ದೇನು!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅಂದ್ರೆನೇ ಎಲ್ಲರಿಗೂ ಇಷ್ಟ. ಅಪ್ಪು ಡ್ಯಾನ್ಸ್, ಅಪ್ಪು ಫೈಟ್, ಅಪ್ಪು ಆಕ್ಟಿಂಗ್ ಹೀಗೆ ಅಪ್ಪುವಿನ ಪ್ರತಿಯೊಂದು ಅನೇಕರಿಗೆ ಸ್ಪೂರ್ತಿ.

ಆದ್ರೆ, ಪುನೀತ್ ಗೆ ಬೇರೆ ನಟರಲ್ಲಿ ಏನು ಇಷ್ಟ ಎಂಬುದು ಯಾರಿಗೂ ಗೊತ್ತಿಲ್ಲ. ಅದರಲ್ಲೂ ಕನ್ನಡದ ಟಾಪ್ ನಟರಲ್ಲಿ ಅಪ್ಪುಗೆ ಇಷ್ಟವಾದದ್ದು ಏನು ಅಂತ ಇತ್ತಿಚೆಗಷ್ಟೇ ಪವರ್ ಸ್ಟಾರ್ ಹೇಳಿಕೊಂಡಿದ್ದಾರೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಹೌದು, ಆರ್.ಜೆ Rapid ರಶ್ಮಿ ಜೊತೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದ ಪುನೀತ್, ರಶ್ಮಿ ಕೇಳಿದ ಪ್ರಶ್ನೆಗಳಿಗೆ ಫಟಾಫಟ್ ಅಂತ ಉತ್ತರಿಸಿದ್ದಾರೆ. ಮುಂದೆ ಓದಿ.....

ದರ್ಶನ್ ಬಳಿ ಏನು ಇಷ್ಟ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಏನೂ ಕದಿಯುತ್ತೀರಾ ಎಂದು ರಶ್ಮಿ ಕೇಳಿದ ಪ್ರಶ್ನೆಗೆ, ಪುನೀತ್ ಕೊಟ್ಟ ಉತ್ತರ 'ಹೈಟ್'. ದರ್ಶನ್ ಅವರ ಹೈಟ್ ಅಂದ್ರೆ ಅಪ್ಪುಗೆ ಇಷ್ಟವಂತೆ.

ಸುದೀಪ್ ಅವರ ಬಳಿ ಏನು ಇಷ್ಟ!

ಕಿಚ್ಚ ಸುದೀಪ್ ಅವರ ಬಳಿ ಏನು ಕದಿಯುತ್ತೀರಾ ಎಂದಾಗ, ಪವರ್ ಸ್ಟಾರ್ ಕೊಟ್ಟ ಉತ್ತರ 'ವಾಯ್ಸ್'. ಅಂದ್ರೆ, ಅಪ್ಪುಗೆ ಸುದೀಪ್ ಅವರ ವಾಯ್ಸ್ ಅಂದ್ರೆ ಇಷ್ಟವಂತೆ.

ಶಿವಣ್ಣನ ಬಳಿ ಏನು ಇಷ್ಟ!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಳಿ ಏನೂ ಕದಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುನೀತ್, 'ಎನರ್ಜಿ' ಎಂದಿದ್ದಾರೆ.

ಯಶ್ ಬಳಿ ಅಪ್ಪುಗೆ ಇಷ್ಟವಾದದ್ದು.....

ರಾಕಿಂಗ್ ಸ್ಟಾರ್ ಯಶ್ ಅವರ ಬಳಿ ಏನು ಕದಿಯುತ್ತೀರಾ ಎಂಬ ಪ್ರಶ್ನೆಗೆ ಅಪ್ಪು ಹೇಳಿದ್ದು, 'ಕೆ.ಜಿ.ಏಫ್' ಚಿತ್ರಕ್ಕಾಗಿ ಯಶ್ ಬಿಟ್ಟಿರುವ ಗಡ್ಡವಂತೆ.

Rapid ರಶ್ಮಿ ಜೊತೆ ಪುನೀತ್ ಮಾತನಾಡಿರುವ ವಿಡಿಯೋ ಇಲ್ಲಿದೆ

English summary
Kannada Actor Puneeth Rajkumar Talk About Darshan, Sudeep, Yash, Shivarajkumar in Rapid Rashmi's Programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada