ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್‌ಕುಮಾರ್ ಮಾತು

ಚಿತ್ರರಂಗದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅಜಾತಶತ್ರು. ದಶಕಗಳಿಂದಲೂ ಸಿನಿಮಾವನ್ನೇ ಉಸಿರಾಡಿಕೊಂಡು ಬಂದಿರುವ ಕುಟುಂಬದ ಪುನೀತ್ ಗೆ ಸಿನಿಮಾ ಮಂದಿಯೆಂದರೆ ಅತೀವ ಪ್ರೀತಿ. ವೃತ್ತಿ ಮಾತ್ಸರ್ಯ ದೂರದ ಮಾತು.

Recommended Video

ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada

ನಟ ಸಾಯಿಕುಮಾರ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಪುನೀತ್ ರಾಜ್‌ಕುಮಾರ್ ಮಾಧ್ಯಮದವರೊಟ್ಟಿಗೆ ಮಾತನಾಡಿದರು.

ಮುಂದೆ ಹಲವು ಸಿನಿಮಾಗಳಿವೆ. ಪ್ರಜ್ವಲ್ ನಟನೆಯ 'ಇನ್ಸ್‌ಪೆಕ್ಟರ್ ವಿಕ್ರಂ' ಬರುತ್ತಿದೆ. 'ರಾಮಾರ್ಜುನ' ಬರುತ್ತಿದೆ. ಅದರ ನಂತರ ಧ್ರುವ ನ 'ಪೊಗರು' ಬರುತ್ತಿದೆ. ಅದರ ನಂತರ ದರ್ಶನ್‌ರ 'ರಾಬರ್ಟ್' ಬರುತ್ತಿದೆ. ಅದರ ನಂತರ ನಮ್ಮ 'ಯುವರತ್ನ' ಸಿನಿಮಾ ಬರಲಿದೆ. ಅದರ ನಂತರ ಸುದೀಪ್ ಸಿನಿಮಾ ಬರುತ್ತೆ. ಶಿವಣ್ಣನ ಸಿನಿಮಾ ಬರುತ್ತೆ. ಎಲ್ಲರ ಸಿನಿಮಾಗಳಿಗೂ ಒಳ್ಳೆಯದಾಗಲಿ. ನಮ್ಮ ಕನ್ನಡ ಚಿತ್ರರಂಗ ಮತ್ತೆ ಹೊಳೆಯಲಿ' ಎಂದು ಆಶಿಸಿದ್ದಾರೆ ಪುನೀತ್ ರಾಜ್‌ಕುಮಾರ್.

ತೆಲುಗು-ತಮಿಳು ಸಿನಿಮಾಗಳು ಚೆನ್ನಾಗಿ ಓಡಿವೆ: ಪುನೀತ್

ತೆಲುಗು-ತಮಿಳು ಸಿನಿಮಾಗಳು ಚೆನ್ನಾಗಿ ಓಡಿವೆ: ಪುನೀತ್

'ಇತ್ತೀಚೆಗೆ ಬಿಡುಗಡೆ ಆದ ಕೆಲವು ತೆಲುಗು, ತಮಿಳು ಸಿನಿಮಾಗಳು ಚೆನ್ನಾಗಿ ಕಲೆಕ್ಷನ್ ಆಗಿವೆ. ನಮ್ಮ ಕನ್ನಡ ಸಿನಿಮಾಗಳು ಸಹ ಚೆನ್ನಾಗಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ' ಎಂದರು ಪುನೀತ್ ರಾಜ್‌ಕುಮಾರ್.

ಸ್ಯಾನಿಟಟೈಸೇಶನ್, ಮಾಸ್ಕ್ ಅವಶ್ಯಕ

ಸ್ಯಾನಿಟಟೈಸೇಶನ್, ಮಾಸ್ಕ್ ಅವಶ್ಯಕ

'ಈ ಮುಂಚೆ ಸರ್ಕಾರದ ಆದೇಶ ಪಾಲಿಸುವುದು ಮುಖ್ಯವಾಗಿತ್ತು. ಈಗ ಚಿತ್ರಮಂದಿರಗಳಿಗೆ 100% ಅವಕಾಶ ನೀಡಿದ್ದಾರೆ. ಆದರೂ ಹೆಚ್ಚು ಜನರು ಒಂದೆಡೆ ಸೇರಿದಾಗ ಸ್ಯಾನಿಟೈಸೇಷನ್, ಮಾಸ್ಕ್ ಬಳಕೆ ಕಡೆಗೆ ಹೆಚ್ಚು ಗಮನ ಕೊಡೋಣ' ಎಂದರು ಪುನೀತ್ ರಾಜ್‌ಕುಮಾರ್.

ಸರ್ಕಾರದ ಆದೇಶ ಸಂತೋಶ ತಂದಿದೆ

ಸರ್ಕಾರದ ಆದೇಶ ಸಂತೋಶ ತಂದಿದೆ

ಇಷ್ಟು ದಿನ ಚಿತ್ರಮಂದಿರಗಳು ಶೇ 50% ಪ್ರೇಕ್ಷಕರಿಗೆ ಮಾತ್ರವೇ ಬಾಗಿಲು ತೆರೆದಿದ್ದವು. ಈಗ 100% ಸೀಟುಗಳನ್ನು ಭರ್ತಿ ಮಾಡಬಹುದು ಎಂದು ಸರ್ಕಾರ ಆದೇಶ ನೀಡಿದೆ ಇದು ಬಹಳ ಸಂತೋಶ ತಂದಿದೆ. ಈ ಹಿಂದೆ 50% ಆಕ್ಯುಪೆನ್ಸಿ ಇದ್ದಾಗಲೂ ಅದನ್ನು ನಷ್ಟವೆಂದು ಪರಿಗಣಿಸದೇ ಜನರ ಒಳಿತಿಗಾಗಿ ಸರ್ಕಾರದ ಆದೇಶ ಪಾಲನೆ ಮಾಡಿದ್ದಾರೆ ಚಿತ್ರಮಂದಿರಗಳ ಮಾಲೀಕರು ಎಂದರು ಪುನೀತ್ ರಾಜ್‌ಕುಮಾರ್.

ಏಪ್ರಿಲ್ 1 ಕ್ಕೆ ಯುವರತ್ನ ಬಿಡುಗಡೆ

ಏಪ್ರಿಲ್ 1 ಕ್ಕೆ ಯುವರತ್ನ ಬಿಡುಗಡೆ

ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಸಿನಿಮಾವು ಏಪ್ರಿಲ್ 1 ನೇ ತಾರೀಖು ಬಿಡುಗಡೆ ಆಗಲಿದೆ. ಜನವರಿ ಅಂತ್ಯದಿಂದ ಆರಂಭಗೊಂಡು ಮಾರ್ಚ್‌ ವರೆಗೂ ಸತತವಾಗಿ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಆಗಲಿವೆ. ಪುನೀತ್ ಅವರು ಪ್ರಸ್ತುತ ಜೇಮ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actor Puneeth Rajkumar talks about Robert, Pogaru, Kotigobba 3, Inspector Vikram movies. He wished all movies to do well on box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X