'ವಿಶೇಷ' ಅಭಿಮಾನಿಯೊಂದಿಗೆ ಪುನೀತ್ ರಾಜ್‌ಕುಮಾರ್ ಮಾತುಕತೆ: ಭಾವುಕ ಸನ್ನಿವೇಶ

ಪುನೀತ್ ರಾಜ್‌ಕುಮಾರ್ ಅವರಿಗೆ ಕೋಟ್ಯಂತರ ಅಭಿಮಾನಿಗಳು, ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುವ ಪುನೀತ್, ಇಂದು ಒಬ್ಬ ವಿಶೇಷ ಅಭಿಮಾನಿಯೊಂದಿಗೆ ಮಾತನಾಡಿದ್ದಾರೆ. ಅವರ ಮಾತುಕತೆ ಭಾವುಕ ಮನಸ್ಸಿನವರಿಗೆ ಕಣ್ಣೀರು ತರಿಸದೇ ಇರದು.

Recommended Video

ವಿದೇಶದಿಂದ ಅಪ್ಪು ಜೊತೆ ಮಾತುಕತೆ ನಡೆಸಿದ ವಿಶೇಷ ಅಭಿಮಾನಿ | Puneeth Rajkumar

ಪುನೀತ್ ರಾಜ್‌ಕುಮಾರ್ ಅವರಿಗೆ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ ಪುನೀತ್ ಇಂದು ವಿಡಿಯೋ ಕಾಲ್‌ ಮೂಲಕ ಮಾತನಾಡಿರುವ ಅಭಿಮಾನಿ ಹಲವು ಕಾರಣಕ್ಕೆ 'ವಿಶೇಷ'.

ಪಿಲಿಡೆಲ್ಫಿಯಾದಲ್ಲಿ ನೆಲೆಸಿರುವ ನಾಗಾರ್ಜುನ ಎಂಬ 15 ವರ್ಷದ ಬಾಲಕ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಈತ ಹುಟ್ಟುತ್ತಲೇ ವಿಶಿಷ್ಟ ಚೇತನ.

ನಾಗಾರ್ಜುನ ಜೀವನ ಪ್ರೀತಿಗೆ ಸಾಟಿಯಿಲ್ಲ

ನಾಗಾರ್ಜುನ ಜೀವನ ಪ್ರೀತಿಗೆ ಸಾಟಿಯಿಲ್ಲ

ವಿಶಿಷ್ಟ ಚೇತನ ಆಗಿದ್ದರೂ ಆತನ ಜೀವನ ಪ್ರೀತಿ ಸಾಮಾನ್ಯರನ್ನೂ ನಾಚಿಸುವಂತಹದ್ದು. ಅಮೆರಿಕದ ಪಿಲಿಡೆಲ್ಫಿಯಾದಲ್ಲಿ ನೆಲೆಸಿರುವ ಕನ್ನಡಿಗರ ಮಗನಾದ ನಾಗಾರ್ಜುನನ ದಿನ ಪ್ರಾರಂಭ ಆಗುವುದೇ ಪುನೀತ್ ರಾಜ್‌ಕುಮಾರ್ ಅವರ ಹಾಡು, ಸಿನಿಮಾ ದೃಶ್ಯಗಳ ವಿಡಿಯೋ ದಿಂದಂತೆ.

ಪುನೀತ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತುಕತೆ

ಪುನೀತ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತುಕತೆ

ಪುನೀತ್ ಅವರೊಂದಿಗೆ ಲೈವ್ ನಲ್ಲಿ ಮಾತನಾಡಿದ ನಾಗಾರ್ಜುನ, ಬಹಳ ಖುಷಿಯಾಗಿಬಿಟ್ಟಿದ್ದ. 'ನಿಮ್ಮ ಹಾಡು, ಡಾನ್ಸು, ಫೈಟು, ನಿಮ್ಮ ಮಸಲ್ಸ್(ದೇಹದಾರ್ಡ್ಯ) ಎಲ್ಲವೂ ನನಗೆ ಇಷ್ಟವೆಂದು ಭುಜಕುಣಿಸಿ ಹೇಳಿದ ನಾಗಾರ್ಜುನ.

ನಾಗಾರ್ಜುನ ಪ್ರೀತಿಯಿಂದ ಪುನೀತ್ ಭಾವುಕ

ನಾಗಾರ್ಜುನ ಪ್ರೀತಿಯಿಂದ ಪುನೀತ್ ಭಾವುಕ

ನಾಗಾರ್ಜುನನ ಪ್ರೀತಿ ತುಂಬಿದ ಮಾತುಗಳಿಗೆ ಏನೆಂದು ಮರು ಉತ್ತರ ಕೊಡುವುದೆಂದು ಪುನೀತ್‌ ಗೆ ತೋಚಲಿಲ್ಲವೆನಿಸುತ್ತದೆ. ಪುನೀತ್ ಅವರೂ ಭಾವುಕರಾಗಿದ್ದು, ವಿಡಿಯೋದಲ್ಲಿ ಗೊತ್ತಾಗುತ್ತದೆ.

ಅಪ್ಪನನ್ನು ತಬ್ಬಿಕೊಂಡ ನಾಗಾರ್ಜುನ

ಅಪ್ಪನನ್ನು ತಬ್ಬಿಕೊಂಡ ನಾಗಾರ್ಜುನ

'ಬೊಂಬೆ ಹೇಳುತೈತೆ' ಹಾಡು ನಾಗಾರ್ಜುನ ಗೆ ಬಹಳ ಇಷ್ಟವಂತೆ. ಪುನೀತ್ ಅವರೊಟ್ಟಿಗೆ ಮಾತನಾಡಿದ್ದು, ನನಗೆ ಬಹಳ ಖುಷಿಯಾಯಿತು. ನನ್ನ ಅಪ್ಪ-ಅಮ್ಮ-ತಂಗಿಗೂ ಖುಷಿಯಾಯಿತು. ಎಂದು ಅಪ್ಪ-ಅಮ್ಮನನ್ನು ಅಪ್ಪಿಕೊಂಡು ಕಷ್ಟಪಟ್ಟು ತೊದಲು ನುಡಿಯಲ್ಲಿಯೇ ಹೇಳಿದ ನಾಗಾರ್ಜುನ.

ನನ್ನನ್ನು ಅಪ್ಪು ಎಂದು ಕರೆಯಿರಿ

ನನ್ನನ್ನು ಅಪ್ಪು ಎಂದು ಕರೆಯಿರಿ

ನಾಗಾರ್ಜುನ ಗೆ ತನ್ನನ್ನು ಅಪ್ಪು ಎಂದು ಕರೆಯುವಂತೆ ಪುನೀತ್ ಅವರಲ್ಲಿ ಮನವಿ ಮಾಡಿಕೊಂಡ. ಅದರಂತೆ ಪುನೀತ್ ಸಹ ಹಾಗೆಯೇ ಕರೆದರು. ಪುನೀತ್ ಬಾಯಲ್ಲಿ ತನ್ನ ಅಡ್ಡ ಹೆಸರು ಕರೆಸಿಕೊಂಡ ನಾಗಾರ್ಜುನ ಖುಷಿಗೆ ಪಾರವೇ ಇರಲಿಲ್ಲ. ಅದನ್ನು ವಿಡಿಯೋ ದಲ್ಲಿ ನೋಡಿಯೇ ಖುಷಿ ಪಡಬೇಕು.

More from Filmibeat

English summary
Actor Puneeth Rajkumar today talks with his special fan who is USA. Nagarjuna his a special child, and big fan of Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X