For Quick Alerts
  ALLOW NOTIFICATIONS  
  For Daily Alerts

  ನಿರ್ಬಂಧ ಸಡಿಲಿಸಿದ ಸರ್ಕಾರ: ಭಾವುಕರಾಗಿ ಧನ್ಯವಾದ ಹೇಳಿದ ಪುನೀತ್

  |

  ಚಿತ್ರಮಂದಿರದ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತೆರವು ಮಾಡಿ ಆದೇಶ ಹೊರಡಿಸಿದೆ.

  ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಷ್ಟೆ ಸಿನಿಮಾ ನೋಡಬೇಕೆಂದು ರಾಜ್ಯ ಸರ್ಕಾರವು ನಿನ್ನೆ ಆದೇಶ ಹೊರಡಿಸಿತ್ತು. ಪುನೀತ್ ಅಭಿನಯದ 'ಯುವರತ್ನ' ಸಿನಿಮಾ ಗುರುವಾರವಷ್ಟೆ ಬಿಡುಗಡೆ ಆಗಿತ್ತು. ಈ ಮಧ್ಯೆ ಸರ್ಕಾರದ ಈ ಆದೇಶ ಸಿನಿಮಾಕ್ಕೆ ದೊಡ್ಡ ಪೆಟ್ಟಾಗಲಿತ್ತು.

  ಸರ್ಕಾರದ ನಿರ್ಧಾರದ ಬಗ್ಗೆ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರರಂಗದ ಹಲವರು ಪುನೀತ್ ಅವರ ಬೆನ್ನಿಗೆ ನಿಂತಿದ್ದರು. ಇಂದು ಸಂಜೆ ವೇಳೆಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪುನೀತ್ ಹಾಗೂ ತಂಡ ಚಿತ್ರಮಂದಿರದ ಮೇಲಿನ ನಿರ್ಬಂಧ ಸಡಿಸುವಂತೆ ಮನವಿ ಮಾಡಿತ್ತು. ಅಂತೆಯೇ ರಾಜ್ಯ ಸರ್ಕಾರವು ನಿರ್ಬಂಧ ಸಡಿಲಿಸಿದೆ.

  ಚಿತ್ರಮಂದಿರದ ಮೇಲಿನ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಿಸಿರುವ ರಾಜ್ಯ ಸರ್ಕಾರಕ್ಕೆ, ಸಿಎಂ ಯಡಿಯೂರಪ್ಪ ಅವರಿಗೆ ಪುನೀತ್ ರಾಜ್‌ಕುಮಾರ್ ಅವರು ಫೇಸ್‌ಬುಕ್‌ ಮೂಲಕ ಧನ್ಯವಾದ ಹೇಳಿದ್ದಾರೆ.

  ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಪುನೀತ್ ರಾಜ್‌ಕುಮಾರ್, 'ನಮ್ಮ ಮನವಿಗೆ ಸ್ಪಂದಿಸಿದ ಸಿಎಂ ಅವರಿಗೆ ಧನ್ಯವಾದ. ನಾವೆಲ್ಲ ನಿನ್ನೆಯಿಂದ ಎಷ್ಟು ಆತಂಕಗೊಂಡಿದ್ದೆವೊ ಅಷ್ಟೇ ಆತಂಕವನ್ನು ಅಭಿಮಾನಿಗಳು ಸಹ ಅನುಭವಿಸಿದರು. ಅವರು ನಮ್ಮೊಂದಿಗೆ ಇದ್ದರು. ಅವರಿಗೆ ಕೋಟಿ-ಕೋಟಿ ಧನ್ಯವಾದಗಳು ಎಂದರು ಪುನೀತ್ ರಾಜ್‌ಕುಮಾರ್.

  ನಿರ್ಬಂಧವನ್ನು ವಿರೋಧಿಸಿದ ಸಿನಿಮಾ ರಂಗದ ನಟರನ್ನೂ ನೆನಪಿಸಿಕೊಂಡು ಪುನೀತ್, ಶಿವರಾಜ್ ಕುಮಾರ್, ಸುದೀಪ್, ಯಶ್, ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ, ಜಗ್ಗೇಶ್ ಇನ್ನೂ ಹಲವರು ಕುಟುಂಬದಂತೆ ನಮ್ಮ ಜೊತೆಗೆ ನಿಂತರು ಅವರಿಗೂ ಧದನ್ಯವಾದಗಳು ಎಂದರು.

  Puneeth Rajkumar ಗೆ ಅನ್ಯಾಯ ಮಾಡಿದ ರಾಜ್ಯ ಸರ್ಕಾರ | Filmibeat Kannada

  'ಯುವರತ್ನ' ಸಿನಿಮಾದ ನಿರ್ದೇಶಕ ಸಂತೋಶ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರ್ ಇನ್ನೂ ಹಲವರು ಸರ್ಕಾರದ ನಿರ್ಣಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

  English summary
  Puneeth Rajkumar thanked CM Yeddiyurappa for taking back orders about theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X