ಯೂಟ್ಯೂಬ್ ನಲ್ಲಿ ಹೊಸ ಸಾಧನೆ ಮಾಡಿದ ಪುನೀತ್ ರಾಜ್ ಕುಮಾರ್ 'PRK' ಆಡಿಯೋ ಸಂಸ್ಥೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೊತೆಗೆ ಸಿನಿಮಾರಂಗದ ಬೇರೆ ಬೇರೆ ವಿಭಾಗಗಳಲ್ಲೂ ಬ್ಯುಸಿಯಾಗಿದ್ದಾರೆ. ನಿರ್ಮಾಣ, ಆಡಿಯೋ ಸಂಸ್ಥೆಯನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ. ಪುನೀತ್ ಒಡೆತನದ ನಿರ್ಮಾಣ ಸಂಸ್ಥೆ 'ಪಿ ಆರ್ ಕೆ' ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಇದೀಗ ಪಿ ಆರ್ ಕೆ ಆಡಿಯೋ ಸಂಸ್ಥೆ ಯೂಟ್ಯೂಬ್ ನಲ್ಲಿ ಹೊಸ ಸಾಧನೆ ಮಾಡಿದೆ.
ಪಿ ಆರ್ ಕೆ ಆಡಿಯೋ ಸಂಸ್ಥೆ ಪ್ರಾರಂಭವಾಗಿ ಸುಮಾರು 3 ವರ್ಷಗಳಿದೆ. ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಹಾಡುಗಳ ಹಕ್ಕುಗಳನ್ನು ಪಿ ಆರ್ ಕೆ ಖರೀದಿ ಮಾಡಿದೆ. ಪಿ ಆರ್ ಕೆ ಸಂಸ್ಥೆ ಮೊದಲ ಮೊದಲ ಆಡಿಯೋ ಹಕ್ಕು ಪಡೆದಿರುವ ಸಿನಿಮಾ ಅಂಜನಿಪುತ್ರ. ಪವರ್ ಸ್ಟಾರ್ ಅಭಿನಯದ ಈ ಸಿನಿಮಾದ ಆಡಿಯೋ ಹಕ್ಕನ್ನು ಪಿ ಆರ್ ಕೆ ಪಡೆಯುವ ಮೂಲಕ ಆಡಿಯೋ ಲೋಕಕ್ಕೆ ಕಾಲಿಟ್ಟರು.
ಇದೀಗ ಮೂರು ವರ್ಷಗಳ ಬಳಿಕ ಯೂಟ್ಯೂಬ್ ನಲ್ಲಿ 1 ಮಿಲಿಯನ್ ಸಬ್ ಸ್ಕ್ರೈಬರ್ ಹೊಂದಿದ್ದಾರೆ. ಈ ಸಂತಸವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇದೇ ಖುಷಿಗೆ ಪಿ ಆರ್ ಕೆ ಆಡಿಯೋಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.

ಎಲ್ಲರ ಬೆಂಬಲ ಮತ್ತು ಸಹಾಯಕ್ಕೆ ಪವರ್ ಸ್ಟಾರ್ ಧನ್ಯವಾದ ತಿಳಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 15 ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾತಂಡ ಇದೀಗ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದೆ. ಇನ್ನು ಅಪ್ಪು ಬಹುನಿರೀಕ್ಷೆಯ ಯುವರತ್ನ ಸಿನಿಮಾದ ರಿಲೀಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications










