ಚಿರಂಜೀವಿ, ಅಕ್ಷಯ್ ಕುಮಾರ್, ಆರ್ಯ ಜೊತೆಗೆ ಪುನೀತ್ ರಾಜ್‌ಕುಮಾರ್
ತೆಲುಗಿನ ಖ್ಯಾತ ನಟ ಚಿರಂಜೀವಿ, ಬಾಲಿವುವಡ್‌ನ ಅಕ್ಷಯ್ ಕುಮಾರ್, ತಮಿಳಿನ ಆರ್ಯ ಇನ್ನೂ ವಿವಿಧ ಭಾಷೆಯ ನಟರೊಟ್ಟಿಗೆ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.
ಕೋವಿಡ್ ವಿರುದ್ಧ ರಾಷ್ಟ್ರದಾದ್ಯಂತ ಲಸಿಕೆ ಅಭಿಯಾನ ಜಾರಿಯಲ್ಲಿದ್ದು, ಲಸಿಕೆ ತೆಗೆದುಕೊಳ್ಳಲು ಜನರನ್ನು ಪ್ರೇರೇಪಿಸಲು, ಜಾಗೃತಿ ಮೂಡಿಸಲು ಜಾಹೀರಾತು ಮಾಡಲಾಗಿದ್ದು, ಕನ್ನಡದಲ್ಲಿ ಪುನೀತ್ ಅಭಿಯಾನದ ರಾಯಭಾರಿ ಆಗಿದ್ದಾರೆ.
ಎಫ್‌ಐಸಿಸಿಐ, ಐಬಿಎಫ್, ಐಎಎ ವತಿಯಿಂದ ಈ ಜಾಗೃತಿ ಅಭಿಯಾನ ನಡೆಯುತ್ತಿದ್ದು ಹಲವು ಭಾಷೆಗಳಲ್ಲಿಯೂ ಅಭಿಯಾನದ ನಡೆಯಲಿದೆ. ಕನ್ನಡಕ್ಕೆ ಪುನೀತ್ ರಾಜ್‌ಕುಮಾರ್, ತಮಿಳಿನಲ್ಲಿ ಆರ್ಯ, ತೆಲುಗಿನಲ್ಲಿ ಚಿರಂಜೀವಿ, ಹಿಂದಿ, ಮರಾಠಿ, ಪಂಜಾಬಿಯಲ್ಲಿ ಅಕ್ಷಯ್ ಕುಮಾರ್ ಜಾಗೃತಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಸಿಕೆ ಹಾಕಿಕೊಳ್ಳಲು ಈಗಲೂ ಹಲವಾರು ಮಂದಿ ಹಿಂಜರಿಕೆ ತೋರುತ್ತಿರುವ ಕಾರಣ ಈ ಜಾಹೀರಾತನ್ನು ಚಿತ್ರೀಕರಿಸಿ ಪ್ರಸಾರ ಮಾಡಲಾಗುತ್ತಿದೆ. ಲಸಿಕೆ ಮಾತ್ರವೇ ಅಲ್ಲದೆ ಕೋವಿಡ್ ಕುರಿತ ಜಾಗೃತಿ ಮೂಡಿಸಲು ಸಹ ಈ ನಟರು ಸಹಾಯ ಮಾಡಲಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್ ಈಗಾಗಲೇ ಕೆಲವು ಸರ್ಕಾರಿ ಪ್ರಾಯೋಜಿತ ಜನಪರ ಕಾರ್ಯಕ್ರಮಗಳಿಗೆ ರಾಯಭಾರಿ ಆಗಿದ್ದಾರೆ. ಕೋವಿಡ್ ಸಂಕಷ್ಟಕ್ಕೆ ರಾಜ್ಯ ಸರ್ಕಾರಕ್ಕೆ ಹಣ ದೇಣಿಗೆ ನೀಡಿದ್ದಾರೆ ಜೊತೆಗೆ ಇತರೆ ಸೇವೆಗಳನ್ನು ಮಾಡಿದ್ದಾರೆ. ಅದನ್ನೆಲ್ಲ ಪರಿಗಣನೆಗೆ ಪಡೆದು ಪುನೀತ್ ಅವರನ್ನು ರಾಯಭಾರಿ ಅನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
Recommended Video
ನಟ ಪುನೀತ್ ರಾಜ್‌ಕುಮಾರ್ ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದಾರೆ ಮತ್ತು ಸಾರ್ವಜನಿಕರು ಕೂಡಲೇ ಲಸಿಕೆ ಪಡೆಯುವಂತೆ ಕರೆ ನೀಡಿದ್ದಾರೆ.


Click it and Unblock the Notifications











