Don't Miss!
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- News
ವಿಡಿಯೋ: ಟ್ರ್ಯಾಕ್ಟರ್ ಚಲಾಯಿಸಿ ಮದುವೆ ಸ್ಥಳಕ್ಕೆ ಬಂದ ಸಿಂಗಾರಗೊಂಡ ವಧು
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಾಸ್ಟರ್ ಪೀಸ್' ಸುಂದರಿ ಶಾನ್ವಿಗೆ ಸಾಥ್ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಸ್ಯಾಂಡಲ್ ವುಡ್ ನ ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಶ್ರೀವಾಸ್ತವ ಅಭಿನಯದ ಕಸ್ತೂರಿ ಮಹಲ್ ಸಿನಿಮಾದ ಟೀಸರ್ ಹೊಸ ವರ್ಷಕ್ಕೆ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿ ಕೇಳಿದ್ದೀರಿ. ಇದೀಗ ಟೀಸರ್ ರಿಲೀಸ್ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ.
ಶಾನ್ವಿ ನಟನೆಯ ಕಸ್ತೂರಿ ಮಹಲ್ ಚಿತ್ರಕ್ಕೆ ಕನ್ನಡದ ಸ್ಟಾರ್ ನಟರೊಬ್ಬರು ಸಾಥ್ ನೀಡಿದ್ದಾರೆ. ಅದು ಮತ್ಯಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹೌದು, ಶಾನ್ವಿ ನಟನೆಯ ಕಸ್ತೂರಿ ಮಹಲ್ ಸಿನಿಮಾದ ಟೀಸರ್ ಅನ್ನು ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡುತ್ತಿದ್ದಾರೆ. ಹೊಸ ವರ್ಷಕ್ಕೆ ಚಿತ್ರದ ಟೀಸರ್ ಅಭಿಮಾನಿಗಳ ಮುಂದೆ ಬರ್ತಿದ್ದು, ರಾತ್ರಿ 12.05ಕ್ಕೆ ಟೀಸರ್ ರಿಲೀಸ್ ಆಗುತ್ತಿದೆ.
ಹೊಸ
ವರ್ಷದ
ಪ್ರಯುಕ್ತ
'ಕಸ್ತೂರಿ
ಮಹಲ್'
ಚಿತ್ರ
ಟೀಸರ್
ಬಿಡುಗಡೆ
ಕಸ್ತೂರಿ ಮಹಲ್ ಹಿರಿಯ ನಿರ್ದೇಶಕ ದಿನೇಶ್ ಬಾಬು ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾ. ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾ ಎನ್ನುವುದು ವಿಶೇಷ. ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಮಾಡಿದ್ದ ಚಿತ್ರತಂಡ ಕೇವಲ 20 ದಿನಗಳಲ್ಲೇ ಚಿತ್ರೀಕರಣ ಮಾಡಿ ಮುಗಿಸಿ ಅಚ್ಚರಿ ಮೂಡಿಸಿತ್ತು. ಬಹುತೇಕ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಈ ಸಿನಿಮಾದಲ್ಲಿ ಶಾನ್ವಿ ಜೊತೆಗೆ ನಟ ಸ್ಕಂಧ ಅಶೋಕ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ರಂಗಾಯಣ ರಘು, ಶ್ರುತಿ ಪ್ರಕಾಶ್, ನೀನಾಸಂ ಅಶ್ವಥ್, ಅಕ್ಷರ್ ಸೇರಿದಂತೆ ಅನೇಕರಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲಲ್ ಮಾದರಿಯ ಕಸ್ತೂರಿ ಮಹಲ್ ಹೇಗಿರಲಿದೆ ಎನ್ನುವುದು ಸಿನಿಪ್ರೇಕ್ಷಕರ ಕುತೂಹಲ.
ಅಂದ್ಹಾಗೆ ಕಸ್ತೂರಿ ಮಹಲ್ ಸಿನಿಮಾಗೆ ಈ ಮೊದಲು ಕಸ್ತೂರಿ ನಿವಾಸ ಎಂದು ಟೈಟಲ್ ಇಡಲಾಗಿತ್ತು. ಡಾ.ರಾಜ್ ಕುಮಾರ್ ಅಭಿನಯದ ಸಿನಿಮಾದ ಟೈಟಲ್ ಅನ್ನು ಮರುಬಳಕೆ ಮಾಡಿಕೊಂಡಿದ್ದರ ವಿರುದ್ಧ ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸಿನಿಮಾಗೆ ಕಸ್ತೂರಿ ಮಹಲ್ ಎಂದು ಶೀರ್ಷಿಕೆ ಬದಲಾಯಿಸಲಾಯಿತು. ಇದೀಗ ಸಿನಿಮಾದ ಟೀಸರ್ ಅಪ್ಪು ಕೈಯಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.