»   » ಇನ್ಮುಂದೆ ಯಾವ ನಿರ್ಮಾಪಕರ ಕೈಗೂ ಪುನೀತ್ ರಾಜ್ ಕುಮಾರ್ ಸಿಗಲ್ಲ.! ಯಾಕೆ.?

ಇನ್ಮುಂದೆ ಯಾವ ನಿರ್ಮಾಪಕರ ಕೈಗೂ ಪುನೀತ್ ರಾಜ್ ಕುಮಾರ್ ಸಿಗಲ್ಲ.! ಯಾಕೆ.?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಗಾಂಧಿನಗರದ ಹೈವೋಲ್ಟೇಜ್ ಕರೆಂಟ್ ಇದ್ದ ಹಾಗೆ. 'ಅಣ್ಣಾ ಬಾಂಡ್' ಬೆಳ್ಳಿತೆರೆ ಮೇಲೆ ಬಂದ್ರೆ ಬಾಕ್ ಆಫೀಸ್ ಬ್ಲಾಸ್ಟ್ ಆದ ಹಾಗೆ ಲೆಕ್ಕ.

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ಮುಂದೆ ಯಾವ ನಿರ್ಮಾಪಕರ ಕೈಗೂ ಸಿಗಲ್ಲ. ಯಾವುದೇ ಪ್ರೊಡ್ಯೂಸರ್ ಗಳಿಗೆ ಕಾಲ್ ಶೀಟ್ ನೀಡಲ್ಲ.

ಇದೇನಪ್ಪಾ ಎಂದು ಬಾಯಿ ಮೇಲೆ ಬೆರಳಿಡುವ ಮುನ್ನ ಪೂರ್ತಿ ಮ್ಯಾಟರ್ ಓದ್ಕೊಂಡ್ ಬನ್ನಿ....

ತಮ್ಮ ಬ್ಯಾನರ್ ನಲ್ಲಿ ಮಾತ್ರ ನಟನೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ 'ಪಿ.ಆರ್.ಕೆ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ಮೂಡಿ ಬರುವ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಲು ಅಪ್ಪು ನಿರ್ಧಾರ ಮಾಡಿದ್ದಾರಂತೆ.

ಪವರ್ ಸ್ಟಾರ್ ಪುನೀತ್ ನಿರ್ಮಾಣದ ಸಿನಿಮಾದಲ್ಲಿ ಅನಂತ್ ನಾಗ್ ನಟನೆ

ತಮ್ಮ ಚಿತ್ರಗಳಿಗೆ ತಮ್ಮದೇ ಬಂಡವಾಳ

ತಾವು ನಟಿಸುವ ಸಿನಿಮಾಗಳಿಗೆ 'ಪಿ.ಆರ್.ಕೆ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ತಾವೇ ಬಂಡವಾಳ ಹಾಕಲು ಪುನೀತ್ ರಾಜ್ ಕುಮಾರ್ ಮನಸ್ಸು ಮಾಡಿದ್ದಾರಂತೆ.

ಪುನೀತ್ 'ಮನೆ'ಯಿಂದ ಹೊರಬಿತ್ತು 'ಬಿಗ್' ಸಿನಿಮಾ ಸುದ್ದಿ

ಕಮ್ಮಿಟ್ ಮೆಂಟ್ ಮುಗಿದ ಕೂಡಲೆ....

ಸದ್ಯ ಹರ್ಷ ಆಕ್ಷನ್ ಕಟ್ ಹೇಳುತ್ತಿರುವ, ಎಮ್.ಎನ್.ಕುಮಾರ್ ನಿರ್ಮಾಣ ಮಾಡುತ್ತಿರುವ 'ಅಂಜನಿಪುತ್ರ' ಸಿನಿಮಾದ ಶೂಟಿಂಗ್ ನಲ್ಲಿ ಪುನೀತ್ ರಾಜ್ ಕುಮಾರ್ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕ ರಾಕ್ ಲೈನ್ ವೆಂಕಟೇಶ್ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ಗೆ ಅಪ್ಪು ಕಾಲ್ ಶೀಟ್ ನೀಡಿದ್ದಾರೆ. ಈ ಮೂರು ಚಿತ್ರಗಳು ಮುಗಿದ ಬಳಿಕ ತಮ್ಮ ಸ್ವಂತ ಬ್ಯಾನರ್ ನಲ್ಲಿ ಮೂಡಿಬರುವ ಚಿತ್ರಗಳಲ್ಲಿ ಮಾತ್ರ ಅಪ್ಪು ಕಾಣಿಸಿಕೊಳ್ಳುತ್ತಾರೆ.

ಶಶಾಂಕ್ ನಿರ್ದೇಶನದಲ್ಲಿ ರಾಜರತ್ನ ಪುನೀತ್ ರಾಜ್ ಕುಮಾರ್ ಸಿನಿಮಾ

ಪತ್ನಿಗೆ ಉಸ್ತುವಾರಿ

ನಟನೆಯಲ್ಲಿ ಹೆಚ್ಚು ಆಸಕ್ತಿ ತೋರುವ ಪುನೀತ್ ರಾಜ್ ಕುಮಾರ್, 'ಪಿ.ಆರ್.ಕೆ ಪ್ರೊಡಕ್ಷನ್ಸ್' ಹಾಗೂ ಚಿತ್ರಗಳ ನಿರ್ಮಾಣದ ಉಸ್ತುವಾರಿಯನ್ನ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ವಹಿಸಿದ್ದಾರಂತೆ.

ಸೀರಿಯಲ್, ಚಿತ್ರ ನಿರ್ಮಾಣ

'ಪಿ.ಆರ್.ಕೆ ಪ್ರೊಡಕ್ಷನ್ಸ್' ಮೂಲಕ ಈಗಾಗಲೇ ಧಾರಾವಾಹಿಯೊಂದು ಪ್ರಸಾರ ಆಗುತ್ತಿದೆ. ಹೇಮಂತ್.ಎಂ.ರಾವ್ ನಿರ್ದೇಶನದ 'ಕವಲು ದಾರಿ' ಸಿನಿಮಾ ನಿರ್ಮಾಣ ಅಗುತ್ತಿರುವುದು ಕೂಡ ಇದೇ ಬ್ಯಾನರ್ ನಲ್ಲಿ. ಇನ್ನೂ ಶಶಾಂಕ್ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾ ಇದೇ ಬ್ಯಾನರ್ ಮೂಲಕ ಸೆಟ್ಟೇರಲಿದೆ.

English summary
Power Star Puneeth Rajkumar has decided to work only in movies made under PRK Productions, which he owns

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada