For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಪುನೀತ್ ತಲೆಯಲ್ಲಿ ಹೀಗೊಂದು ಪ್ಲಾನ್.!

  |
  ಹೊಸ ಪ್ರಯತ್ನಕ್ಕೆ ಮುಂದಾದ ಅಪ್ಪು. | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಬರೀ ನಟ ಮಾತ್ರ ಅಲ್ಲ. ಪಿ.ಆರ್.ಕೆ.ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಪಕ ಕೂಡ ಆಗಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಸದಭಿರುಚಿಯ ಸಿನಿಮಾಗಳನ್ನು ಮತ್ತು ಉತ್ತಮ ಪ್ರತಿಭೆಗಳನ್ನು ಹೊರತರಲು ಪುನೀತ್ ರಾಜ್ ಕುಮಾರ್ ಸಜ್ಜಾಗಿದ್ದಾರೆ.

  ಈಗಾಗಲೇ ತಮ್ಮ ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ನಡಿ 'ಕವಲುದಾರಿ' ಮತ್ತು 'ಮಾಯಾಬಜಾರ್' ಚಿತ್ರಗಳನ್ನು ಪುನೀತ್ ರಾಜ್ ಕುಮಾರ್ ನಿರ್ಮಿಸಿದ್ದಾರೆ. ಇದೀಗ ಪುನೀತ್ ತಲೆಯಲ್ಲಿ ಹೊಸ ಪ್ಲಾನ್ ಮೂಡಿದೆ. ಅದೇನಪ್ಪಾ ಅಂದ್ರೆ, ಒಂದು ಮಕ್ಕಳ ಸಿನಿಮಾ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಅಪ್ಪು.

  ಸ್ಯಾಂಡಲ್ ವುಡ್ ನ ಉತ್ತಮ ಸಿನಿಮಾಗಳ ಪರ ಧ್ವನಿ ಎತ್ತಿದ ಸ್ಟಾರ್ ನಟರುಸ್ಯಾಂಡಲ್ ವುಡ್ ನ ಉತ್ತಮ ಸಿನಿಮಾಗಳ ಪರ ಧ್ವನಿ ಎತ್ತಿದ ಸ್ಟಾರ್ ನಟರು

  'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಒಂದಲ್ಲಾ ಎರಡಲ್ಲಾ' ಚಿತ್ರಗಳನ್ನು ನೋಡಿ ಮನಸಾರೆ ಇಷ್ಟಪಟ್ಟಿದ್ದ ಪುನೀತ್ ರಾಜ್ ಕುಮಾರ್, ತಮ್ಮ ಬ್ಯಾನರ್ ನಲ್ಲೂ ಉತ್ತಮ ಮಕ್ಕಳ ಚಿತ್ರಗಳನ್ನ ನಿರ್ಮಿಸಲು ಮನಸ್ಸು ಮಾಡಿದ್ದಾರೆ.

  ಸ್ಟಾರ್ ನಟರು ಕಡಿಮೆ ಚಿತ್ರ ಮಾಡೋದರಿಂದ ಲಾಭಕ್ಕಿಂತ ನಷ್ಟ ಹೆಚ್ಚು!ಸ್ಟಾರ್ ನಟರು ಕಡಿಮೆ ಚಿತ್ರ ಮಾಡೋದರಿಂದ ಲಾಭಕ್ಕಿಂತ ನಷ್ಟ ಹೆಚ್ಚು!

  ಹಾಗ್ನೋಡಿದ್ರೆ, ಅಪ್ಪು ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದವರು. 'ಭಾಗ್ಯವಂತ', 'ಬೆಟ್ಟದ ಹೂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಅಪ್ಪು ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇದೀಗ ತಮ್ಮದೇ ಬ್ಯಾನರ್ ನಡಿ ಬಾಲ ಪ್ರತಿಭೆಗಳಿಗೆ ಚಾನ್ಸ್ ನೀಡಲು ಪುನೀತ್ ಮುಂದಾಗಿದ್ದಾರೆ.

  ಒಂದೊಳ್ಳೆ ಕಥೆ ಸಿಕ್ಕರೆ, ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ಮಕ್ಕಳ ಚಿತ್ರ ಸೆಟ್ಟೇರುವುದು ಪಕ್ಕಾ.

  English summary
  Puneeth Rajkumar is looking for good scripts to produce Children movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X