For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಚಿತ್ರಕ್ಕೆ ಪುನೀತ್ ಬಂಡವಾಳ.!

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದೀಗ ಬರೀ ನಟ ಮಾತ್ರ ಅಲ್ಲ. ಆಡಿಯೋ ಸಂಸ್ಥೆಯ ಮಾಲೀಕ ಹಾಗೂ ನಿರ್ಮಾಪಕನಾಗಿ ಅಣ್ಣಾವ್ರ ಮಗ ಅಪ್ಪು ಸ್ಯಾಂಡಲ್ ವುಡ್ ನಲ್ಲಿ ಹೊಸ ಇನ್ನಿಂಗ್ಸ್ ಆರಂಭ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ.

  ಪುನೀತ್ ರಾಜ್ ಕುಮಾರ್ ಒಡೆತನದ ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನ್ಸರ್ ಅಡಿ 'ಕವಲುದಾರಿ' ಸೇರಿದಂತೆ ಒಟ್ಟು ಮೂರು ಚಿತ್ರಗಳಿಗೆ ಅಪ್ಪು ಬಂಡವಾಳ ಹಾಕಿದ್ದಾರೆ. ಇದೀಗ ಮತ್ತೊಂದು ಚಿತ್ರವನ್ನ ನಿರ್ಮಾಣ ಮಾಡಲು ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಮುಖ್ಯಭೂಮಿಕೆಯಲ್ಲಿ ಅಭಿನಯದ ಚೊಚ್ಚಲ ಚಿತ್ರವನ್ನ ನಿರ್ಮಾಣ ಮಾಡಲು ಪುನೀತ್ ರಾಜ್ ಕುಮಾರ್ ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಅರ್ಧಕ್ಕೆ ನಿಂತು ಹೋಗಿದ್ದ ಚಿತ್ರ

  ಅರ್ಧಕ್ಕೆ ನಿಂತು ಹೋಗಿದ್ದ ಚಿತ್ರ

  ರಾಗಿಣಿ ಚಂದ್ರನ್ ಅಭಿನಯದ ಮಹಿಳಾ ಪ್ರಧಾನ ಚಲನಚಿತ್ರ 'ವಿಜಯದಶಮಿ' ಈಗಾಗಲೇ ಸೆಟ್ಟೇರಿ, ಅರ್ಧಕ್ಕೆ ನಿಂತು ಹೋಗಿತ್ತು. ರಘು ಸಮರ್ಥ ನಿರ್ದೇಶನದ ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಇದೀಗ ಆಪತ್ಬಾಂಧವ ಆಗಿದ್ದಾರೆ.

  ಪವರ್ ಸ್ಟಾರ್ ಪ್ರೊಡಕ್ಷನ್ಸ್ ನ ಮೂರನೇ ಸಿನಿಮಾ ಲಾಂಚ್

  ಹೊಸಬರ ಬೆನ್ನಿಗೆ ನಿಲ್ಲುತ್ತಿರುವ ಅಪ್ಪು

  ಹೊಸಬರ ಬೆನ್ನಿಗೆ ನಿಲ್ಲುತ್ತಿರುವ ಅಪ್ಪು

  ಪಿ.ಆರ್.ಕೆ.ಪ್ರೊಡಕ್ಷನ್ಸ್ ಮೂಲಕ ಯುವ ಪ್ರತಿಭಾನ್ವಿತರಿಗೆ ಪುನೀತ್ ರಾಜ್ ಕುಮಾರ್ ಅವಕಾಶ ನೀಡುತ್ತಿದ್ದಾರೆ. 'ವಿಜಯದಶಮಿ' ಚಿತ್ರದಲ್ಲಿ ಹೊಸತನ ಇರುವ ಕಾರಣ, ಚಿತ್ರಕಥೆಯನ್ನು ಮೆಚ್ಚಿ ಬಂಡವಾಳ ಹಾಕಲು ಪುನೀತ್ ಮನಸ್ಸು ಮಾಡಿದ್ದಾರೆ.

  ಪುನೀತ್ ನಿರ್ಮಾಣದಲ್ಲಿ ಮತ್ತೊಂದು ಹೊಸ ಸಿನಿಮಾ : ಹೀರೋ ಯಾರ್ ಗೊತ್ತಾ?

  ರೀ-ಲಾಂಚ್ ಮಾಡಲಿರುವ ಅಪ್ಪು

  ರೀ-ಲಾಂಚ್ ಮಾಡಲಿರುವ ಅಪ್ಪು

  'ವಿಜಯದಶಮಿ' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಮರು ಜೀವ ನೀಡುತ್ತಿದ್ದಾರೆ. ಹೀಗಾಗಿ, 'ವಿಜಯದಶಮಿ' ಬದಲು ಬೇರೊಂದು ಶೀರ್ಷಿಕೆ ಫಿಕ್ಸ್ ಮಾಡಿ ರೀ-ಲಾಂಚ್ ಮಾಡುವ ಪ್ಲಾನ್ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್.

  ಪುನೀತ್ ನಿರ್ಮಾಣದ ಚಿತ್ರಗಳು

  ಪುನೀತ್ ನಿರ್ಮಾಣದ ಚಿತ್ರಗಳು

  ಹೇಮಂತ್ ನಿರ್ದೇಶನದ 'ಕವಲುದಾರಿ', ರಾಜ್.ಬಿ.ಶೆಟ್ಟಿ ನಟನೆಯ 'ಮಾಯಾಬಜಾರ್', ಪನ್ನಗಭರಣ ನಿರ್ದೇಶನದ ಡ್ಯಾನಿಶ್ ಸೇಠ್ ನಟನೆಯ ಚಿತ್ರಗಳನ್ನು ಪುನೀತ್ ಈಗಾಗಲೇ ನಿರ್ಮಾಣ ಮಾಡುತ್ತಿದ್ದಾರೆ. ಈಗ ಇದೇ ಸಾಲಿಗೆ, ರಾಗಿಣಿ ಚಂದ್ರನ್ ಅಭಿನಯದ ಚಿತ್ರ ಸೇರಿದೆ.

  English summary
  Power Star Puneeth Rajkumar to produce Prajwal Devaraj wife Ragini Chandran starrer Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X