For Quick Alerts
  ALLOW NOTIFICATIONS  
  For Daily Alerts

  ಹೊಸಬರ 'ಕ್ಷಿಪ್ರ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬೆಂಬಲ

  |

  ಹೊಸಬರ ಸಿನಿಮಾಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ಪುನೀತ್ ರಾಜ್ ಕುಮಾರ್, ಇದೀಗ ಕ್ಷಿಪ್ರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಡಿಸೆಂಬರ್ 10 ರಂದು ಸಂಜೆ 6 ಗಂಟೆಗೆ ಕ್ಷಿಪ್ರ ಫಸ್ಟ್ ಲುಕ್ ಅನಾವರಣ ಮಾಡಲಿದ್ದಾರೆ ಕನ್ನಡದ ರಾಜರತ್ನ ಪುನೀತ್.

  ಕ್ಷಿಪ್ರ, ಮಹಿಳಾ ಪ್ರಧಾನ ಕಥೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದೆ. ಸತೀಶ್ ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿದಿದೆ.

  'ಪವರ್ ಆಫ್ ಯೂತ್ ಚಾಲೆಂಜ್' ಆರಂಭಿಸಿದ ಯುವರತ್ನ'ಪವರ್ ಆಫ್ ಯೂತ್ ಚಾಲೆಂಜ್' ಆರಂಭಿಸಿದ ಯುವರತ್ನ

  ದಕ್ಷ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ರಮ್ಯಪ್ರಿಯ ಮತ್ತು ಪ್ರೀತಿ ಮೀರಜ್‌ಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

  ಇವರ ಜೊತೆಗೆ ಮೋಹನ್ ಜನೇಜ, ನಾಗೇಂದ್ರ ಅರಸ್, ಕಾರ್ತಿಕ್ ವೈಭವ್, ಅಸರು, ಚೇತನ್ ಕೃಷ್ಣನ್, ಪ್ರಸನ್ನ ಮಾದವ್, ನಂದಗೋಪಾಲ್, ಯಶೋಧಾ, ಪಾವನಿ, ಪ್ರಿಯಾಂಕಾ ದಿನೇಶ್ ಸೇರಿದಂತೆ ಹಲವರು ನಟಿಸಿದ್ದಾರೆ.

  ವಿಕ್ಟರ್ ಲೋಕಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ವರದರಾಜ್, ಸಮರ್ಥ್, ಅಂಜಾನ್ ಸಾಹಿತ್ಯ ರಚಿಸಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣ, ಮಣಿಯನ್ ಸಂಕಲನ, ಕುಂಗ್ ಫು ಚಂದ್ರು ಸಾಹಸ, ಕಿಶೋರ್ ನವೀನ್ ನೃತ್ಯ ಸಂಯೋಜನೆ ಒಳಗೊಂಡಿದೆ. ದಿನೇಶ್ ಕೆ ರಾಮನ್ ನಿರ್ಮಾಣ ಮಾಡಿದ್ದಾರೆ.

  'ಯುವರತ್ನ' ಬಿಡುಗಡೆಗೆ ಬಗ್ಗೆ ಬಿಗ್ ನ್ಯೂಸ್, ಅಪ್ಪು ಫ್ಯಾನ್ಸ್ ರೆಡಿಯಾಗಿ?'ಯುವರತ್ನ' ಬಿಡುಗಡೆಗೆ ಬಗ್ಗೆ ಬಿಗ್ ನ್ಯೂಸ್, ಅಪ್ಪು ಫ್ಯಾನ್ಸ್ ರೆಡಿಯಾಗಿ?

  ಪ್ರಭಾಸ್ ಜೊತೆ ನಟಿಸಲು ಅವಕಾಶ ಮಾಡಿಕೊಟ್ಟ ಪ್ರಶಾಂತ್ ನೀಲ್ | Filmibeat Kannada

  ಇನ್ನು ಪುನೀತ್ ಸಿನಿಮಾಗಳ ಬಗ್ಗೆ ಹೇಳುವುದಾದರೇ, ಯುವರತ್ನ ಬಿಡುಗಡೆಗೆ ಸಜ್ಜಾಗಿದೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಜೇಮ್ಸ್ ಆರಂಭಿಸಿದ್ದಾರೆ. ಯುವರತ್ನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಎರಡನೇ ಹಾಡು ಸದ್ಯದಲ್ಲೇ ಬರಲಿದೆ.

  English summary
  Kannada actor Puneeth Rajkumar to Release Newcomers Kshipra Kannada Movie First Look on December 10.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X