»   » ಪುನೀತ್ ಚಕ್ರವ್ಯೂಹ ಭೇದಿಸಲಿರುವ ಬುಲ್ ಬುಲ್ ರಾಣಿ

ಪುನೀತ್ ಚಕ್ರವ್ಯೂಹ ಭೇದಿಸಲಿರುವ ಬುಲ್ ಬುಲ್ ರಾಣಿ

Posted By:
Subscribe to Filmibeat Kannada

ಕಾಲಿವುಡ್ ನ "ಎಂಗೆಯುಮ್ ಎಪ್ಪೋದುಮ್" ಚಿತ್ರದ ಖ್ಯಾತಿಯ ಸರವಣನ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ 'ಚಕ್ರವ್ಯೂಹ' ಮಾಡುತ್ತಿದ್ದಾರೆ ಅಂತಾ ಫಿಲ್ಮಿ ಬೀಟಲ್ಲಿ ನಿಮಗೆ ನಾವೇ ಹೇಳಿದ್ವಿ ತಾನೇ. ಈಗಾಗಲೇ ಶೂಟಿಂಗ್ ಹಂತದಲ್ಲಿರುವ ಚಿತ್ರಕ್ಕೆ ಪುನೀತ್ ಗೆ ನಾಯಕಿಯಾಗಿ ಪಂಜಾಬಿ ಬೆಡಗಿ ಸೋನಂ ಬರುತ್ತಾರೆ ಅಂತಾ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು ಅಲ್ವಾ.

ಆದ್ರೆ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ಸೋನಂ ಜಾಗಕ್ಕೆ ನಮ್ಮ ಬುಲ್ ಬುಲ್ ರಾಣಿ ರಚಿತಾ ರಾಮ್ ಪುನೀತ್ ಚಕ್ರವ್ಯೂಹ ಭೇದಿಸೋಕೆ ಹೊರಟಿದ್ದಾರೆ. ಅಲ್ಲದೇ ಆಫೀಶೀಯಲ್ ಆಗಿ ಚಿತ್ರತಂಡ ರಚಿತಾ ರಾಮ್ ಪುನೀತ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ ಅಂತಾ ಘೋಷಣೆ ಕೂಡಾ ಮಾಡಿದೆ. ['ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್]

Puneeth Rajkumar to romance with Rachita Ram in Kannada movie Chakravyuha

ಈ ಮೊದಲು "ರಣವಿಕ್ರಮ" ದಲ್ಲಿ ಪುನೀತ್ ಗೆ ನಾಯಕಿಯಾಗಬೇಕಿದ್ದ ರಚಿತಾ ಕಾರಣಾಂತರಗಳಿಂದ ಈ ಚಿತ್ರದಿಂದ ಹಿಂದೆ ಸರಿದಿದ್ದರು. ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿರುವ ನಮ್ಮ ಲಕ್ಕಿ ರಾಣಿ ಇದೀಗ ಪುನೀತ್ ಜೊತೆ ಚಕ್ರವ್ಯೂಹದಲ್ಲಿ ರೋಮ್ಯಾನ್ಸ್ ಮಾಡಲಿದ್ದಾರೆ.[ಫೇಸ್ ಬುಕ್ ನಲ್ಲಿ ಕಿಚ್ಚ ಸುದೀಪ್ ಪರ ಯಶ್ ಸಮರ.!]

"ಬುಲ್ ಬುಲ್", ರನ್ನ ಚಿತ್ರದ ಭರ್ಜರಿ ಯಶಸ್ಸಿನಂತೆ ಇಲ್ಲೂ ರಚಿತಾ ರಾಮ್ ಕಮಾಲ್ ಮಾಡಲಿದ್ದಾರಾ ಅನ್ನೊದನ್ನ ಕಾದು ನೋಡಬೇಕಿದೆ. "ಚಕ್ರವ್ಯೂಹದ" ಇನ್ನಷ್ಟು ಅಪ್ ಡೇಟ್ಸ್ ಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

English summary
Power Star Puneeth Rajkumar to romance with Rachita Ram in upcomng Kannada movie Chakravyuha. The movie is directed by Sharavanan of "Engeyum Eppodum" Tamil movie fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada