'ಅಮರ್'ನನ್ನು ವೆಲ್ ಕಮ್ ಮಾಡಿದ ಪವರ್ ಸ್ಟಾರ್, ರಾಕ್ ಲೈನ್
Recommended Video

'ಅಮರ್' ಸಿನಿಮಾದ ಟೀಸರ್ ಮೂಲಕ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಪ್ರಭಾವ ಶುರುವಾಗಿದೆ. ಈ ಚಿತ್ರದ ಟೀಸರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಅನೇಕ ನಟರು ಟೀಸರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ''ಲುಕ್ಕಿಂಗ್ ಗ್ರೇಟ್ ಅಭಿಷೇಕ್, ಆಲ್ ದಿ ಬೆಸ್ಟ್, ಗಾಡ್ ಬ್ಲೆಸ್ ಯೂ'' ಎಂದು ಅಭಿಷೇಕ್ ಗೆ ಶುಭಾಶಯ ತಿಳಿಸಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಅವರ ಬ್ಯಾನರ್ ರಾಕ್ ಲೈನ್ ಎಂಟರ್ ಟೈನ್ಮೆಂಟ್ ಟ್ವಿಟ್ಟರ್ ಖಾತೆಯಲ್ಲಿ 'ಅಮರ್' ಸಿನಿಮಾಗೆ ವಿಶ್ ಮಾಡಲಾಗಿದೆ. ''ಅಮರ್' ಆಗಿ ಅಮೋಘವಾಗಿ ಕಾಣುತ್ತಿರುವ ಯಂಗ್ ರೆಬೆಲ್ ಸ್ಟಾರ್, ಕರುನಾಡಿನ ಹುಡುಗ ಅಭಿಷೇಕ್ ಗೆ ಅದ್ಧೂರಿ ಸ್ವಾಗತ, 'ಅಮರ್' ತಂಡಕ್ಕೆ ಶುಭವಾಗಲಿ'' ಎಂದು ಶುಭ ಹಾರೈಸಿದ್ದಾರೆ.
ನಟ ದರ್ಶನ್, ಸುದೀಪ್, ಯಶ್, ಗಣೇಶ್, ಸತೀಶ್ ನೀನಾಸಂ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಅಮರ್' ಸಿನಿಮಾದ ಟೀಸರ್ ಸದ್ಯ 6 ಗಂಟೆಗಳಲ್ಲಿ 6 ಲಕ್ಷ ಹಿಟ್ಸ್ ಪಡೆದುಕೊಂಡಿದೆ.
ಟೀಸರ್ ನಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಿದ್ದಾರೆ. ಅಪ್ಪನ ಪಾಪುಲರ್ ಡೈಲಾಗ್ ಆಗಿರುವ 'ನೋ ವೇ ಚಾನ್ಸೆ ಇಲ್ಲ..' ಎಂದು ಹೇಳುತ್ತ ಚಿತ್ರರಂಗಕ್ಕೆ 'ಅಮರ್' ಎಂಟ್ರಿ ಕೊಟ್ಟಿದ್ದಾರೆ. ಟೀಸರ್ ನೋಡಿದರೆ ಇದೊಂದು ಪವರ್ ಪ್ಯಾಕ್ ಸಿನಿಮಾ ಎಂಬುದು ತಿಳಿಯುತ್ತದೆ.


Click it and Unblock the Notifications











