ಮಂಡ್ಯ ಚುನಾವಣಾ ಪ್ರಚಾರದ ಬಗ್ಗೆ ನಿರ್ಧಾರ ತಿಳಿಸಿದ ಪವರ್ ಸ್ಟಾರ್
Recommended Video

ನಟ ಪುನೀತ್ ರಾಜ್ ಕುಮಾರ್ ಮಂಡ್ಯ ಚುನಾವಣೆಯ ಬಗ್ಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ''ನನಗೂ, ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ'' ಎನ್ನುವ ಮೂಲಕ ಅಪ್ಪು ಚುನಾವಣೆಗೆ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದಾರೆ.
ಮಂಡ್ಯದಲ್ಲಿ ನಟಿ ಸುಮಲತಾ ಪರ ಪ್ರಚಾರಕ್ಕೆ ನಟ ದರ್ಶನ್ ಹಾಗೂ ಯಶ್ ಜೊತೆಯಾಗಿದ್ದರೆ. ಪುನೀತ್ ಕೂಡ ಈ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂತಹ ಎಲ್ಲ ಉಹಾಪೋಹಗಳಿಗೆ ಪವರ್ ಸ್ಟಾರ್ ತೆರೆ ಎಳೆದಿದ್ದಾರೆ.

''ಗೌರವಾನ್ವಿತ ದೇವೇಗೌಡರ ಕುಟುಂಬ ಹಾಗೂ ಅಂಬರೀಶ್ ಅವರ ಕುಟುಂಬ ನಮ್ಮ ಕುಟುಂಬದ ಹಾಗೆ, ಇಬ್ಬರು ನಮ್ಮ ಹಿತೈಷಿಗಳೇ, ಇಬ್ಬರಿಗೂ ಒಳ್ಳೆದಾಗಲಿ. ಆ ಭಗವಂತ ನಿಮಗೆ ಜನ ಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತ ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರನ್ನು ವಿನಂತಿಸಿಕೊಳ್ಳುತ್ತೇನೆ.'' ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಈ ಮೂಲಕ ಪುನೀತ್ ರಾಜ್ ಕುಮಾರ್ ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ಮಾಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











