Puneeth Rajkumar Ugadi Wishes : ಚಿತ್ರರಂಗದಲ್ಲಿ ಯುಗಾದಿ ಸಂಭ್ರಮ, ಅಪ್ಪು ವಿಡಿಯೋ ವೈರಲ್ !
ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಹಬ್ಬದ ಪ್ರಯುಕ್ತ ಸಿನಿಮಾ ತಾರೆಯರು ಶುಭಾಶಯಗಳನ್ನು ತಿಳಿಸುತ್ತಾ ಇದ್ದಾರೆ. ಇನ್ನು ಸಾಕಷ್ಟು ಚಿತ್ರಗಳ ಟ್ರೈಲರ್, ಟೀಸರ್, ಪೋಸ್ಟರ್‌ಗಳು ರಿಲೀಸ್ ಆಗಿವೆ. ಇದೆಲ್ಲದರ ನಡುವೆ ಹೆಚ್ಚು ಗಮನ ಸೆಳೆಯುತ್ತಿದೆ ನಟ ಪುನೀತ್ ರಾಜ್‌ಕುಮಾರ್ ಹೇಳಿದ ಶುಭಾಶಯ ವಿಡಿಯೋ.
ನಟ ಪುನೀತ್‌ರಾಜ್‌ಕುಮಾರ್ ಶುಭಾಶಯ ಹೇಳಲು ಈಗ ಇಲ್ಲ. ಆದರೆ ಈ ಹಿಂದೆ ಅವರು ಮಾಡಿದ ಹಳೆಯ ವಿಡಿಯೋಗಳೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಪುನೀತ್ ರಾಜ್‌ಕುಮಾರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಹಬ್ಬದ ದಿನ ಅಂದರೆ ಅದು ಸಿನಿಮಾ ಮಂದಿಯ ಪಾಲಿಗೆ ವಿಶೇಷ ದಿನವಾಗಿರುತ್ತದೆ. ಯಾಕೆಂದರೆ ಸಿನಿಮಾಗಳ ಹೊಸ ಟೀಸರ್, ಟ್ರೈಲರ್, ಪೋಸ್ಟರ್‌ಗಳನ್ನು ರಿಲೀಸ್ ಮಾಡಲಾಗುತ್ತದೆ. ಚಿತ್ರದ ಹೊಸ ಅಪ್ಡೇಟ್‌ಗಳು ಬರುತ್ತವೆ. ನಟ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಆದಿಪುರುಷ 'ಅವತಾರ ಪುರುಷ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಡ್ಯಾನ್ಸ್ ಝಲಕ್ ಇರುವ ಸಣ್ಣ ಬಿಟ್ ರಿಲೀಸ್ ಮಾಡಲಾಗಿದೆ.
Recommended Video

ನಟ ಗಣೇಶ್ ಅಭಿನಯದ ಹೊಸ ಚಿತ್ರ ಪ್ರಕಟಗೊಂಡಿದೆ. ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. 'ಬಾನದಾರಿಯಲ್ಲಿ' ಎನ್ನುವ ಟೈಟಲ್ ಚಿತ್ರಕ್ಕೆ ನಿಗದಿ ಮಾಡಲಾಗಿದೆ. ಈ ಚಿತ್ರಕ್ಕೆ ನಿರ್ದೇಶಕ ಪ್ರೀತಮ್ ಗುಬ್ಬಿ ನಿರ್ದೇಶನ ಇದೆ. ಸದ್ಯ ಚಿತ್ರದ ಟೈಟಲ್ ಮಾತ್ರ ಫಿಕ್ಸ್ ಆಗಿದ್ದು, ಇನ್ನು ಪಾತ್ರವರ್ಗವನ್ನು ಚಿತ್ರತಂಡ ಪ್ರಕಟ ಮಾಡಲಿದೆ.

ಇನ್ನು ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೊರ್ಸ್ ಚಿತ್ರದ ಶೂಟಿಂಗ್ ಮುಗಿದ ವಿಚಾರವನ್ನು ಚಿತ್ರತಂಡ ಪ್ರಕಟ ಮಾಡಿದೆ. ಫೋಟೋಗಳನ್ನು ಹಂಚಿಕೊಂಡಿದೆ ಚಿತ್ರತಂಡ.
ಹಬ್ಬದಂದು ವಿಶೇಷ ಶುಭಾಶಯ ತಿಳಿಸಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್. "ಕಳೆದ 5 ತಿಂಗಳು, ಅಪ್ಪು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೀವೆಲ್ಲರೂ ಹೇಗೆ ನಡೆದುಕೊಂಡಿದ್ದೀರಿ, ಅವರ ಹೆಸರಲ್ಲಿ ಗೌರವಾರ್ಥವಾಗಿ ಮಹತ್ತರವಾದ ಕೆಲಸಗಲನ್ನು ಮಾಡಿದ್ದೀರಿ. ಈ ಯುಗಾದಿ ಹಬ್ಬದಂದು ಭಗವಂತನ ಅನುಗ್ರಹ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.


Click it and Unblock the Notifications











