»   » ಪುನೀತ್ ರಾಜ್ ಕುಮಾರ್ ಹೊಸಪೇಟೆಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದೇಕೆ.?

ಪುನೀತ್ ರಾಜ್ ಕುಮಾರ್ ಹೊಸಪೇಟೆಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದೇಕೆ.?

Posted By:
Subscribe to Filmibeat Kannada
ಪುನೀತ್ ರಾಜ್ ಕುಮಾರ್ ಹೊಸಪೇಟೆಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದೇಕೆ? | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್... ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಫ್ಯಾನ್ ಫಾಲೋವರ್ಸ್ ಹೊಂದಿರುವ ನಾಯಕ ನಟ. ಅಭಿಮಾನಿಗಳೆಂದರೆ ಪ್ರೀತಿ ತೋರುವ ಅಪ್ಪು ಅಭಿಮಾನಿಯ ಭೇಟಿಗಾಗಿ ಹೊಸಪೇಟೆಯ ವರೆಗೂ ಹೋಗಿದ್ದಾರೆ. ವರ್ಷಕ್ಕೊಮ್ಮೆ ಮನೆಯ ಬಳಿ ಬಂದು ತನ್ನ ನೆಚ್ಚಿನ ಸ್ಟಾರ್ ಗಾಗಿ ಕಾಯುವ ಅಭಿಮಾನಿಯ ಭೇಟಿ ನೀಡಿ ಮನೆಯವರಿಗೆಲ್ಲ ಸರ್ಪೈಸ್ ನೀಡಿದ್ದಾರೆ.

ಮೊನ್ನೆಯಷ್ಟೇ ಸಂತೋಷ್ ಆನಂದ್ ರಾಮ್ ಹಾಗೂ ಸುರಭಿ ನಿಶ್ಚಿತಾರ್ಥಕ್ಕಾಗಿ ಬಳ್ಳಾರಿಗೆ ತೆರಳಿದ್ದ ಅಪ್ಪು ಹೊಸಪೇಟೆಯಲ್ಲಿದ್ದ ತನ್ನ ನೆಚ್ಚಿನ ಫ್ಯಾನ್ ಮನೆಗೆ ಹೋಗಿದ್ದಾರೆ. ಸಾಕಷ್ಟು ಅಭಿಮಾನಿಗಳಿದ್ದರೂ ಅಪ್ಪು ಹೊಸಪೇಟೆಯ ಈ ಅಭಿಮಾನಿಯ ಮನೆಗೆ ಹೋಗಲು ಕಾರಣವೇನು? ಆ ಅಭಿಮಾನಿ ಯಾರು? ಮುಂದೆ ಓದಿ

ಹೊಸಪೇಟೆಯ ಅಭಿಮಾನಿ ಮನೆಗೆ ಪುನೀತ್ ಭೇಟಿ

ಪುನೀತ್ ಇತ್ತೀಚಿಗೆ ಭೇಟಿ ನೀಡಿದ ಅಭಿಮಾನಿಯ ಹೆಸರು ವಿಶ್ವ. ಸಾಕಷ್ಟು ವರ್ಷಗಳಿಂದ ಪುನೀತ್ ಅಭಿಮಾನಿಯಾಗಿರುವ ವಿಶ್ವ ಅಪ್ಪು ಅವ್ರನ್ನ ಮನೆಗೆ ಬರುವಂತೆ ಸಾಕಷ್ಟು ಹಿಂದೆಯೇ ಮನವಿ ಮಾಡಿದ್ರು. ಆ ಕೋರಿಕೆ ಇಂದು ಈಡೇರಿದೆ.

ಯೂಟ್ಯೂಬ್ ನಲ್ಲಿ ಪುನೀತ್ ರಾಜ್ ಕುಮಾರ್ ನಂಬರ್ 1

ಸಿನಿಮಾದಲ್ಲಿ ಅಪ್ಪು ಜೊತೆಯಲ್ಲಿ ಅಭಿನಯ

ಮೂರು ವರ್ಷದ ಹಿಂದೆ ಹೊಸಪೇಟೆಯ ವಿಶ್ವ ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಟಗರನ್ನ ಉಡುಗೊರೆಯಾಗಿ ನೀಡಿದ್ರು. ಅದಷ್ಟೇ ಅಲ್ಲದೆ ರಣವಿಕ್ರಮ ಸಿನಿಮಾದಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿದ್ರು. ವಿಶ್ವ ಹಾಗೂ ಇಡೀ ಕುಟುಂಬ ಡಾ ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳು.

ಕುತೂಹಲ ಮೂಡಿಸಿದೆ ಪುನೀತ್ ಹಾಗೂ ಭಟ್ಟರ ಸಮಾಗಮ

ನೆಚ್ಚಿನ ನಟನ ಆಗಮನಕ್ಕೆ ಸಂತಸ

ಬಳ್ಳಾರಿಯಿಂದ ಬೆಂಗಳೂರಿಗೆ ಬರುವ ಮುಂಚೆ ಅಪ್ಪು ವಿಶ್ವ ಅವರ ಮನೆಗೆ ಭೇಟಿ ನೀಡಿದ್ದಾರೆ. ಪುನೀತ್ ಬರುವುದನ್ನೇ ಕಾದಿದ್ದ ಅಭಿಮಾನಿ ಆರತಿ ಮಾಡಿ ಬರಮಾಡಿಕೊಂಡರು.

ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ 'ಅಣ್ಣಾವ್ರ ಮೊಮ್ಮಗ'

ಹಿರಿಯರನ್ನ ಪ್ರೀತಿಯಿಂದ ಮಾತನಾಡಿಸಿದ ಅಪ್ಪು

ಪುನೀತ್ ಬರ್ತಾರೆ ಅನ್ನೋದನ್ನ ತಿಳಿದ ವಿಶ್ವ ಅವರ ಅಕ್ಕಪಕ್ಕದ ಮನೆಯ ಮಕ್ಕಳು ಅಪ್ಪು ನೋಡಲು ಕಾತರರಾಗಿದ್ದರು. ಮನೆಗೆ ಬಂದ ಪುನೀತ್ ಮಕ್ಕಳ ಜೊತೆಯಲ್ಲಿ ಹಿರಿಯರನ್ನ ಪ್ರೀತಿಯಿಂದ ಮಾತನಾಡಿಸಿದ್ದಾರೆ.

English summary
Puneeth Rajkumar visits his fan vishwa's house at Hospet. ಹೊಸಪೇಟೆಯ ಅಭಿಮಾನಿ ವಿಶ್ವ ಮನೆಗೆ ಬೇಟಿ ನೀಡಿದ ಪುನೀತ್ ರಾಜ್ ಕುಮಾರ್
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada