»   »  ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!

ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಪರಭಾಷೆ ನಟರಿಗೆ ಹೆಚ್ಚು ಇಷ್ಟ. ಅವರ ಡ್ಯಾನ್ಸ್, ಹಾಡು, ಸಿನಿಮಾವನ್ನ ಹೊರತು ಪಡಿಸಿ ಅಪ್ಪು ಕಂಡ್ರೆ ಅಭಿಮಾನ.

ಇತ್ತೀಚೆಗಷ್ಟೇ ತೆಲುಗು ನಟ ಅಲ್ಲು ಸಿರೀಶ್, ಪವರ್ ಸ್ಟಾರ್ ಪುನೀತ್ ಅವರನ್ನ 'ಟಗರು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಆದ್ರೀಗ, ಎರಡನೇ ಸಲ ಪುನೀತ್ ರಾಜ್ ಕುಮಾರ್ ಅವರೇ, ಅಲ್ಲು ಅರ್ಜುನ್ ಅವರ ಸಹೋದರರನ್ನ ಭೇಟಿ ಮಾಡಿದ್ದಾರೆ.

ಇದು ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಹಾಗಿದ್ರೆ, ಈ ಭೇಟಿಯ ಹಿಂದೆ ಸಿಹಿ ಸುದ್ದಿ ಏನಾದರೂ ಇದೆಯಾ? ಇವರಿಬ್ಬರು ಎರಡನೇ ಬಾರಿ ಮೀಟ್ ಮಾಡಿದ್ದು ಎಲ್ಲಿ? ಎಂದು ತಿಳಿಯಲು ಮುಂದೆ ಓದಿ......

ಅಲ್ಲು ಸಿರೀಶ್ ಸೆಟ್ ಗೆ ಪುನೀತ್ ಭೇಟಿ

ತೆಲುಗು ಅಲ್ಲು ಸಿರೀಶ್ ಅಭಿನಯಿಸುತ್ತಿರುವ 'ಒಕ ಕ್ಷಣಂ' ಚಿತ್ರದ ಶೂಟಿಂಗ್ ಸೆಟ್ ಗೆ ಪವರ್ ಸ್ಟಾರ್ ಪುನೀತ್ ಭೇಟಿ ನೀಡಿದ್ದಾರೆ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಟಗರು' ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್ ಸಹೋದರನ ಆಸೆ ಏನು?

ಕುತೂಹಲ ಮೂಡಿಸಿದ ಈ ಭೇಟಿ

'ಟಗರು' ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಲ್ಲು ಸಿರೀಶ್, ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ. ಅದು ಪುನೀತ್ ರಾಜ್ ಕುಮಾರ್ ಅಥವಾ ಶಿವರಾಜ್ ಕುಮಾರ್ ಅವರ ಜೊತೆ ಡೆಬ್ಯೂ ಮಾಡಬೇಕು ಎಂದು ಹೇಳಿಕೊಂಡಿದ್ದರು. ಹೀಗಾಗಿ, ಈ ಭೇಟಿ ಸಹಜವಾಗಿ ಕುತೂಹಲ ಮೂಡಿಸಿದೆ.

ಸಿಹಿ ಸುದ್ದಿ ಇರಬಹುದಾ?

ಅಲ್ಲು ಸಿರೀಶ್ ಅಭಿನಯಿಸುತ್ತಿರುವ 'ಒಕ ಕ್ಷಣಂ' ಚಿತ್ರದಲ್ಲಿ ಪುನೀತ್ ಏನಾದರೂ ವಿಶೇಷ ಪಾತ್ರ ಮಾಡಿರಬಹುದಾ? ಎಂಬ ಪ್ರಶ್ನೆ ಈಗ ಉದ್ಬವಿಸಿದೆ. ಆದ್ರೆ, ಇದಕ್ಕೆ ಚಿತ್ರತಂಡವೇ ಉತ್ತರಿಸಬೇಕು.

ಕನ್ನಡ ನಟಿಯರ ಜೊತೆ ಸಿರೀಶ್

ಇನ್ನು ಭಾನುವಾರ ಕನ್ನಡ ನಟಿಯರು ಅಯೋಜಿಸಿದ್ದ ಬಟ್ಟೆ ಮಾರಾಟ ಸ್ಥಳಕ್ಕೆ ನಟ ಅಲ್ಲು ಸಿರೀಶ್ ಕೂಡ ಹೋಗಿದ್ದರು. ಈ ವೇಳೆ ಶ್ರುತಿ ಹರಿಹರನ್, ಸಂಯುಕ್ತ ಹೊರನಾಡು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಶೂಟಿಂಗ್ ಮುಗಿಸಿದ ಅಲ್ಲು ಸಿರೀಶ್

ಸಿರೀಶ್ ಅವರು ಚಿತ್ರದ ಚಿತ್ರೀಕರಣ ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡ ಶೂಟಿಂಗ್ ನಲ್ಲಿ ಭಾಗವಹಿಸಿತ್ತು. ಈಗ ಬೆಂಗಳೂರು ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿದೆ ಎನ್ನಲಾಗಿದೆ.

English summary
Sandalwood Power star Puneeth Rajkumar Visit to Allu Sirish Movie shooting set at Banglore. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಲ್ಲು ಸಿರೀಶ್ ಅಭಿನಯಿಸುತ್ತಿರುವ ಹೊಸ ಚಿತ್ರದ ಚಿತ್ರೀಕರಣಕ್ಕೆ ಭೇಟಿ ನೀಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada