'ಬೆಟ್ಟದ ಹೂವು' ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ 'ಬೆಟ್ಟದ ಹೂವು' ಸಿನಿಮಾ ಬಹುದೊಡ್ಡ ಯಶಸ್ಸು ಮತ್ತು ಹಿರಿಮೆ. ಯಾಕಂದ್ರೆ, ಈ ಚಿತ್ರದ ಅಭಿನಯಕ್ಕಾಗಿ ಪುನೀತ್ ಗೆ ಬಾಲ ಕಲಾವಿದನಾಗಿರಬೇಕಾದರೇ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತ್ತು.

ಇಂದಿಗೂ ಈ ಸಿನಿಮಾ ಟಿವಿಯಲ್ಲಿ ಪ್ರಸಾರ ಮಾಡಿದ್ರೆ, ಮನೆ ಮಂದಿಯಲ್ಲಾ ತಮ್ಮ ಮಕ್ಕಳ ಜೊತೆ ಕೂತು ಸಿನಿಮಾ ನೋಡ್ತಾರೆ. ಹೊರೆಗೆ ಆಡುವ ಮಕ್ಕಳನ್ನ ಕರೆಸಿ ಚಿತ್ರ ತೋರಿಸ್ತಾರೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನಸ್ಸು ಮುಟ್ಟಿದ್ದ ಸೂಪರ್ ಹಿಟ್ ಸಿನಿಮಾ ಇದು.

ಈ ಸಿನಿಮಾ 1985ರಲ್ಲಿ ಬಿಡುಗಡೆಯಾಗಿತ್ತು. ಇಂದಿಗೆ ಸುಮಾರು 33 ವರ್ಷ ಆಗಿದೆ. ಅಂದು ಬಾಲ ಕಲಾವಿದನಾಗಿದ್ದ ಪುನೀತ್ ಇಂದು ಕರ್ನಾಟಕದ ಪವರ್ ಸ್ಟಾರ್ ಆಗಿದ್ದಾರೆ. ಮೂರು ದಶಕದ ಹಿಂದೆ ನಡೆದಿದ್ದ ಚಿತ್ರೀಕರಣ ಜಾಗಕ್ಕೆ ಪುನೀತ್ ಈಗ ಭೇಟಿ ನೀಡಿದ್ದಾರೆ. ಅಲ್ಲಿನ ನೆನಪುಗಳನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

Puneeth rajkumar visit to bettada hoovu movie shooting spot

'ನಟಸಾರ್ವಭೌಮ' ಚಿತ್ರದ ಚಿತ್ರೀಕರಣದಲ್ಲಿರುವ ಪುನೀತ್ ಮಾರ್ಗಮಧ್ಯೆ 'ಬೆಟ್ಟದ ಹೂವು' ಸಿನಿಮಾ ಶೂಟಿಂಗ್ ಆಗಿದ್ದ ಸ್ಥಳವನ್ನ ನೋಡಿ ಕಾರಿನಿಂದ ಇಳಿದು, ಅಲ್ಲಿನ ಜನರ ಜೊತೆ ಮಾತನಾಡಿದ್ದಾರೆ. ಹಳೆಯ ಸ್ಕೂಲ್, ಮನೆ, ಹಾಗೂ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ಗಳಿದ್ದ ಸ್ಥಳವನ್ನ ನೋಡಿ ಖುಷಿಯಾಗಿದ್ದಾರೆ.

ಅಂದ್ಹಾಗೆ, ಈ ಜಾಗ ಚಿಕ್ಕಮಗಳೂರಲ್ಲಿ ಅತ್ತಿಗುಂಡಿ ಮೂಲಕ ಪಾಸಾದಾಗ ಬರುತ್ತಂತೆ. ಅದನ್ನ ಸ್ವತಃ ಪುನೀತ್ ವಿಡಿಯೋದಲ್ಲಿ ತೋರಿಸಿದ್ದಾರೆ.

ಲಕ್ಷ್ಮಿ ನಾರಾಯಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಮಾಸ್ಟರ್ ಲೋಹಿತ್ (ಪುನೀತ್ ರಾಜ್ ಕುಮಾರ್), ಹಿರಿಯ ನಟಿ ಪದ್ಮಾ ವಾಸಂತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ರಾಜನ್ ನಾಗೇಂದ್ರ ಸಂಗೀತ ನೀಡಿದ್ದರು. ಚಿ ಉದಯ್ ಶಂಕರ್ ಚಿತ್ರಕಥೆ ಬರೆದಿದ್ದರು.

More from Filmibeat

English summary
Kannada actor puneeth rajkumar has visit to bettada hoovu movie shooting spot near chikkamagaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X