»   » ಹಲ್ಲೆಗೊಳಗಾಗಿರುವ ವಿದ್ವತ್ ಆರೋಗ್ಯ ವಿಚಾರಿಸಿದ ನಟ ಪುನೀತ್

ಹಲ್ಲೆಗೊಳಗಾಗಿರುವ ವಿದ್ವತ್ ಆರೋಗ್ಯ ವಿಚಾರಿಸಿದ ನಟ ಪುನೀತ್

Posted By:
Subscribe to Filmibeat Kannada

ಕನ್ನಡ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ.

ಶಾಂತಿನಗರ ಶಾಸಕ ಎನ್.ಎಸ್ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಫಾಡ್ ಅವರಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಕಳೆದ ಎರಡು ದಿನಗಳಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಇಂದು ಆಸ್ಪತ್ರೆಗೆ ಭೇಟಿ ನೀಡಿ ಸ್ನೇಹಿತನ ಪರಸ್ಥಿತಿ ವಿಚಾರಿಸಿದರು ಪುನೀತ್.

ವಿದ್ವತ್ ಅವರ ಆರೋಗ್ಯವನ್ನ ವಿಚಾರಿಸುವಾಗ ಪುನೀತ್ ರಾಜ್ ಕುಮಾರ್ ಭಾವುಕರಾಗಿದ್ದರು ಎನ್ನಲಾಗಿದೆ. ಬಳಿಕ ಮಾತನಾಡಿದ ಪುನೀತ್ ''ವಿದ್ವತ್ ನಮ್ಮ ಕುಟುಂಬಕ್ಕೆ ಆಪ್ತರು. ವಿದ್ವತ್ ಅವರನ್ನ ಚಿಕ್ಕ ವಯಸ್ಸಿನಿಂದಲೇ ನಾನು ನೋಡಿದ್ದೇ. ಅವರ ಈ ಸ್ಥಿತಿಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು'' ಎಂದಿದ್ದಾರೆ.

ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡ ಮೊಹಮ್ಮದ್ ನಲಪಾಡ್

Puneeth rajkumar visit to mallya hospital

ಹಲ್ಲೆಗೊಳಗಾಗಿರುವ ವಿದ್ವತ್ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಗುರು ರಾಜ್ ಕುಮಾರ್ ಸ್ನೇಹಿತ. ಗಲಾಟೆ ಆದ ಸಂದರ್ಭದಲ್ಲಿ ಗುರು ರಾಜ್ ಕುಮಾರ್ ಕೂಡ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.

ಮಗನ ಅಟ್ಟಹಾಸಕ್ಕೆ ಅಪ್ಪನ ಕ್ಷಮಾಪಣೆ ಪತ್ರ

English summary
Kannada actor Puneeth rajkumar visit to mallya hospital and inquired Vidwat health.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada