ನಟ ಅಶ್ವಥ್ ಮನೆಗೆ ಬಂದ ಪುನೀತ್: ಅಪ್ಪು ಬಗ್ಗೆ ಅಶ್ವಥ್ ಪುತ್ರ ಹೇಳಿದ್ದೇನು?
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮೈಸೂರಿನಲ್ಲಿ ಈ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಬಿಡುವು ಮಾಡಿಕೊಂಡ ಅಪ್ಪ ಹಿರಿಯ ನಟ ಕೆ.ಎಸ್ ಅಶ್ವಥ್ ಅವರ ಮನೆಗೆ ಭೇಟಿ ನೀಡಿದ್ದಾರೆ.
ಮೈಸೂರಿನಲ್ಲಿರುವ ಅಶ್ವಥ್ ಅವರ ಮನೆಗೆ ಬಂದ ಪುನೀತ್ ಅವರನ್ನ ಶಂಕರ್ ಅಶ್ವಥ್ ಅವರು ಬರಮಾಡಿಕೊಂಡಿದ್ದಾರೆ. ಮನೆಯವರನ್ನ ಪುನೀತ್ ಅವರಿಗೆ ಪರಿಚಯ ಮಾಡಿಸಿಕೊಟ್ಟು ಜೊತೆಯಲ್ಲಿ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಫೇಸ್ ಬುಕ್ ಬಲ್ಲಿ ಬರೆದುಕೊಂಡಿರುವ ಶಂಕರ್ ಅಶ್ವಥ್ ಅವರು ''ಇದು ನಾ ಕಂಡ ಸತ್ಯ - ತಂದೆ ಮಹಾರಾಜ ಮಗ ರಾಜಕುಮಾರ, ಡಾ.ರಾಜ್ ರಲ್ಲಿ ಇದ್ದ ಅತಿ ದೊಡ್ಡ ಶಕ್ತಿ ಎಂದರೆ ವಿನಯ ತಾಳ್ಮೆ ಸಹನೆ ಸೈರಣೆ ವಿಶಾಲತೆ ಬಹುಶಃ ಅದು ಅವರ ಹುಟ್ಟಿನಿಂದಲೇ ಬಂದಿರಬಹುದು ಎಂದು ನಾನು ಹೇಳುತ್ತಿರುವುದಲ್ಲಾ ಇದು ನನ್ನ ತಂದೆ ನನಗೆ ಹೇಳಿದ್ದು. ಒಬ್ಬ ಮಹಾರಾಜನಿಗೆ ಇರಬೇಕಾದ ಗುಣಗಳು. ಅದೇ ಅಂಶ ಅವರ ವಂಶದ ಕುಡಿಯಲ್ಲೂ ಕಾಣಬಹುದು'' ಎಂದಿದ್ದಾರೆ.

''ನನ್ನ ತಂದೆ ಅಪ್ಪು ಸಾರ್ ಜೊತೆಯಲ್ಲಿ ಮೊದಲನೆಯ ಬಾರಿಗೆ ನಟಿಸುವ ಸಂದರ್ಭದಲ್ಲಿ"ಈ ಮಗುವಿಗೆ ಅಣ್ಣಾ ಅವರ ಎಲ್ಲಾ ಅಂಶಗಳು ಇದೆ ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ" ಎಂದು ಹೇಳಿದ್ದರು ಅದು ಇಂದು ಅಪ್ಪು ಸಾರ್ ನಿರೂಪಿಸಿದರು'' ಎಂದು ಮೆಚ್ಚಿಕೊಂಡಿದ್ದಾರೆ.
ಅಂದ್ಹಾಗೆ, ಶಂಕರ್ ಅಶ್ವಥ್ ಅವರು ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಕುಮಾರ ಸಿನಿಮಾದ ಬಳಿಕ ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಸಯೀಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











