ಸಿದ್ಧಾರ್ಥ್ ಮಿಸ್ಸಿಂಗ್ ಹಿನ್ನಲೆ ಎಸ್ ಎಂ ಕೃಷ್ಣ ನಿವಾಸಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ
Recommended Video
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ ಮತ್ತು ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ್ ನಿನ್ನೆ ಸಂಜೆ ನಾಪತ್ತೆಯಾಗಿದ್ದಾರೆ. ಸಿದ್ಧಾರ್ಥ್ ಮಿಸ್ಸಿಂಗ್ ಸುದ್ದಿ ತಿಳಿಯುತ್ತಿದ್ದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಸ್ ಎಂ ಕೃಷ್ಣ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಎಸ್ ಎಂ ಕೃಷ್ಣ ಮತ್ತು ಅವರ ಕುಟುಂಬದ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿ ಪುನೀತ್ ರಾಜ್ ಕುಮಾರ್ ನಿವಾಸದ ಸಮೀಪದಲ್ಲೆ ಎಸ್ ಎಂ ಕೃಷ್ಣ ಅವರ ಮನೆ ಕೂಡ ಇದೆ. ಅಲ್ಲದೆ ಪುನೀತ್ ರಾಜ್ ಕುಮಾರ್ ಕುಟುಂಬ ಮತ್ತು ಎಸ್ ಎಂ ಕೃಷ್ಣ ಅವರ ಕುಟುಂಬದವರ ನಡುವೆ ಆತ್ಮೀಯವಾದ ಸಂಬಂಧ ಕೂಡ ಇದೆ.
ಸಿದ್ಧಾರ್ಥ ನಾಪತ್ತೆ: ಎಸ್.ಎಂ.ಕೃಷ್ಣ ಮನೆಗೆ ಗಣ್ಯರ ಭೇಟಿ
ಇದೆ ಸ್ನೇಹದಿಂದ ಪುನೀತ್ ಸುದ್ದಿ ತಿಳಿಯುತ್ತಿದ್ದಂತೆ ಎಸ್ ಎಂ ಕೃಷ್ಣ ನಿವಾಸಕ್ಕೆ ತೆರಳಿದ್ದಾರೆ. ಇನ್ನು ರಾಜಕೀಯ ಮುಖಂಡರು ಕೂಡ ಎಸ್ ಎಂ ಕೆ ನಿವಾಸಕ್ಕೆ ತೆರಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಡಿ ಕೆ ಶಿವಕುಮಾರ್ ಮುಂತಾದ ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ಸಿದ್ಧಾರ್ಥ್ ನಿನ್ನೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು, ನೇತ್ರಾವತಿ ಸೇತುವೆ ಬಳಿ ಇನೋವಾ ಕಾರು ಚಲಿಸುತ್ತಿದ್ದ ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರನ್ನು ಯೂ ಟರ್ನ್ ಮಾಡಿ ಬರುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಸೇತುವೆ ಬಳಿಯಿಂದ ಕಣ್ಮರೆಯಾಗಿದ್ದಾರೆ ಎಂದು ಸಿದ್ದಾರ್ಥ್ ಅವರ ಕಾರಿನ ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ. ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಅತ್ಯುತ್ತಮ ಮುಳುಗು ತಜ್ಞರನ್ನು ಕರೆಸಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.


Click it and Unblock the Notifications











