ತಮ್ಮ ಕಚೇರಿಯ ನೌಕರನ ಮದುವೆಗೆ ಕುಮುಟಾಕ್ಕೆ ಬಂದ ಪುನೀತ್ ರಾಜ್‌ಕುಮಾರ್
ಸ್ಯಾಂಡಲ್‌ವುಡ್ ನಟ ಪವರ್‌ಸ್ಟಾರ್ ಪುನೀತ್ ರಾಜಕುಮಾರ ಆಪ್ತರೊಬ್ಬರ ವಿವಾಹದಲ್ಲಿ ಭಾಗಿಯಾಗಲು ಉತ್ತರ ಕನ್ನಡ ಜಿಲ್ಲೆಯ ಕುಮಟಾಕ್ಕೆ ಇಂದು (ಜನವರಿ 06) ಭೇಟಿ ನೀಡಿದರು.
Recommended Video
ಪುನೀತ್ ಅವರ ಕಚೇರಿಯ ಲೆಕ್ಕಪತ್ರ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಗುರುರಾಜ್ ಎಂಬುವವರ ಮದುವೆ ಪಟ್ಟಣದ ದೇವರಹಕ್ಕಲ ಸಭಾಭವನದಲ್ಲಿ ಇಂದು ನಡೆಯಿತು. ಈ ಮದುವೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಬಂದಿದ್ದರು ಪುನೀತ್.

ಪವರ್‌ಸ್ಟಾರ್ ಆಗಮನದ ಸುದ್ದಿ ತಿಳಿದು ಅಭಿಮಾನಿಗಳು ಸಭಾಭವನದ ಹೊರಗೆ ಕಿಕ್ಕಿರಿದು ತುಂಬಿದ್ದರು. ಪುನೀತ್ ರಾಜಕುಮಾರ ಆಗಮಿಸುತ್ತಿದ್ದಂತೆ ಘೋಷಣೆಗಳನ್ನ ಕೂಗಿ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು. ಮದುವೆಯಲ್ಲಿ ಭಾಗವಹಿಸಿ ಅಪ್ಪು ವಾಪಸ್ ತೆರಳುವವರೆಗೂ ಅಭಿಮಾನಿಗಳು ಕಾದು ಕುಳಿತಿದ್ದು ಪುನೀತ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ತಮ್ಮ ಊರಿನಲ್ಲಿ ನೆಚ್ಚಿನ ನಟನನ್ನ ಕಂಡು ಪವರ್‌ಸ್ಟಾರ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಆ ನಂತರ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಪುನೀತ್ ರಾಜಕುಮಾರ್ ಅವರು ಭೇಟಿ ನೀಡಿ ಮಹಾಬಲೇಶ್ವರ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಅರ್ಚಕರಾದ ವೇ. ಪ್ರಶಾಂತ್ ಭಟ್ ಹಿರೇಗಂಗೆ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯದ ಆಡಳಿತಾಧಿಕಾರಿಗಳು ಅಪ್ಪುಗೆ ಸನ್ಮಾನಿಸಿ ಗೌರವಿಸಿದರು.


Click it and Unblock the Notifications











