ಮಂತ್ರಾಲಯದಲ್ಲಿ ಪುನೀತ್: ರಾಯರ ದರ್ಶನ ಮಾಡಿ ಭಾವುಕರಾದ ಅಪ್ಪು

ಪವರ್ ಸ್ಟಾರ್ ಪುನೀತ್ ರಾಜ್ ಮಂತ್ರಾಲಯ ಪ್ರವಾಸಕ್ಕೆ ತೆರಳಿದ್ದಾರೆ. ನಿನ್ನೆ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನಲೆಯಲ್ಲಿ ಮಂತ್ರಾಲಯದ ಮಠಕ್ಕೆ ಆಗಮಿಸಿದ್ದ ಪುನೀತ್ ರಾಜ್ ಕುಮಾರ್ ರಾಯರ ದರ್ಶನ ಪಡೆದು ಧನ್ಯರಾದರು.

Recommended Video

Puneeth Rajkumar Visited Raghavendra Mutt In Mantralaya | Filmibeat Kannada

ಮಂತ್ರಾಲಯದ ಶ್ರೀಮಠದಲ್ಲಿ ನಡೆಯುವ ಉತ್ಸವವನ್ನು ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಎಂದು ಕರೆಯುತ್ತಾರೆ. ಏಳು ದಿನಗಳ ಕಾಲ ನಡೆಯುವ ಈ ವೈಭವೋತ್ಸವದ ಕೊನೆಯ ದಿನ ವರ್ಧಂತಿ ಉತ್ಸವ ಆಚರಿಸಲಾಗುತ್ತೆ.

ಈ ಉತ್ಸವಕ್ಕೆ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಈ ಸಮಾರಂಭದಲ್ಲಿ ಪವರ್ ಸ್ಟಾರ್ ಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಇನ್ನು ಸಮಾರಂಭದಲ್ಲಿ ಮಾತನಾಡಿದ ಅಪ್ಪು ಹಳೆಯ ನೆನಪನ್ನು ಹಂಚಿಕೊಂಡಿರು. ಇದೆ ಸಮಯದಲ್ಲಿ ಪುನೀತ್ ರಾಯರ ಹಾಡನ್ನು ಹಾಡಿ ರಾಯರ ನೆನೆದರು.

Puneeth Rajkumar Visited To Raghavendra Swamy Mutt Mantralaya

ಹಳೆಯ ನೆನಪನ್ನು ಹಂಚಿಕೊಳ್ಳುತ್ತಿದ್ದ ಅಪ್ಪು ಭಾವುಕರಾಗಿ ಒಂದು ಕ್ಷಣ ಸೈಲೆಂಟ್ ಆದರು. ರಾಯರ ನೆನೆಯುತ್ತ ಹಾಡನ್ನು ಭಕ್ತಿಯಿಂದ ಹಾಡಿದರು. ಡಾ. ರಾಜ್ ಕುಮಾರ್ ಅವರಿಗೆ ಮಂತ್ರಾಲಯ ಎಂದರೆ ತುಂಬ ಇಷ್ಟ. ರಾಯರ ಸನ್ನಿಧಿಯೊಂದಿಗೆ ಡಾ.ರಾಜ್ ಗೆ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ಫುನೀತ್ ಮಾತನಾಡಿದರು.

ಇನ್ನು 'ಭಾಗ್ಯವಂತರು' ಚಿತ್ರದ ಚಿತ್ರೀಕರಣ ಸಮಯವನ್ನು ನೆನಪಿಸಿಕೊಂಡರು. ಮಂತ್ರಾಲಯಕ್ಕೆ ಹೆಚ್ಚು ಭಾರಿ ಬರದಿದ್ದರು ಇಲ್ಲಿನ ನೆನಪುಗಳು ಹಾಗೆ ಇದೆ ಎಂದರು. ಪುನೀತ್ ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಟಾಕಿ ಭಾಗ ಮುಗಿಸಿರುವ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕೆಂದು ಚಿತ್ರತಂಡ ಇಂದು ಯುರೋಪ್ ಗೆ ಹೊರಟಿದೆ.

More from Filmibeat

English summary
Power star Puneeth Rajkumar visited to Mantralaya. He sings a song about Raghavendra swamy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X