Just In
Don't Miss!
- Education
HAL Recruitment 2021: 27 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ...ಜ.30ರೊಳಗೆ ಅರ್ಜಿ ಹಾಕಿ
- Automobiles
ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್
- News
ಬಜಾಜ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 14ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಸ್ಥಿರ ಪ್ರದರ್ಶನ ತೋರುತ್ತಿರುವ ಈಸ್ಟ್ ಬೆಂಗಾಲ್ಗೆ ಕೇರಳ ಎದುರಾಳಿ
- Lifestyle
ವ್ಯಾಯಾಮ ಬಿಟ್ಟ ಬಳಿಕ ದೇಹಕ್ಕೆ ಏನಾಗುತ್ತೆ ನೋಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೋಕರ್ಣದಲ್ಲಿ ಪುನೀತ್ ರಾಜ್ ಕುಮಾರ್: ಮಹಾಬಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಪ್ಪು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಗೋಕರ್ಣದಲ್ಲಿದ್ದಾರೆ. ಆಪ್ತರ ಮದುವೆಗೆಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾಗೆ ತೆರಳಿದ್ದ ಪುನೀತ್, ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಬಳಿಕ ಗೋಕರ್ಣಕ್ಕೆ ಭೇಟಿ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಕಚೇರಿಯಲ್ಲಿ ಕೆಲಸ ಮಾಡುವ ಗುರುರಾಜ್ ಎನ್ನುವವರ ಮದುವೆ ಕುಮಟಾದಲ್ಲಿ ನೆರವೇರಿದ್ದು, ಅಪ್ಪು ಬೆಂಗಳೂರಿನಿಂದ ಆಗಮಿಸಿದ್ದರು. ಕುಮಟಾದಲ್ಲಿ ಪವರ್ ಸ್ಟಾರ್ ನೋಡಲು ಅಭಿಮಾನಿಗಳ ದಂಡೆ ಸೇರಿತ್ತು. ಪುನೀತ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಘೋಷಣೆಗಳನ್ನು ಕೂಗಿತ್ತ, ಚಪ್ಪಾಳೆ ತಟ್ಟುವ ಮೂಲಕ ಸಂತಸ ಪಟ್ಟರು.
ತಮ್ಮ ಕಚೇರಿಯ ನೌಕರನ ಮದುವೆಗೆ ಕುಮುಟಾಕ್ಕೆ ಬಂದ ಪುನೀತ್ ರಾಜ್ಕುಮಾರ್
ಪುನೀತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಅಲ್ಲಿಂದ ಪವರ್ ಸ್ಟಾರ್ ಪುಣ್ಯ ಕ್ಷೇತ್ರ ಗೋಕರ್ಣಕ್ಕೆ ತೆರಳಿದ್ದಾರೆ. ಗೋಕರ್ಣದ ಮಹಾಬಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಪೂಜೆ ಸಲ್ಲಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದೇವಸ್ಥಾನದ ಅರ್ಚಕರಾದ ಪ್ರಶಾಂತ್ ಭಟ್ ಮತ್ತು ಹಿರೇಗಂಗೆ ಪೂಜಾ ಕಾರ್ಯ ನೆರವೇರಿಸಿದರು. ಪೂಜೆ ಬಳಿಕ ದೇವಸ್ಥಾನದ ಆಡಳಿತ ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಗೆ ಸನ್ಮಾನಿಸಿ ಗೌರವಿಸಿದರು. ಬಳಿಕ ಪುನೀತ್ ಕೆಲವು ಸಮಯ ವಿಶಾಲವಾದ ಸುಂದರ ಬೀಚ್ ನಲ್ಲಿ ಕಾಲಕಳೆದಿದ್ದಾರೆ. ಸಾಮಾನ್ಯರಂತೆ ಬೀಚ್ ನಲ್ಲಿ ಕುಳಿತಿರುವ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪವರ್ ಸ್ಟಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜೇಮ್ಸ್ ಚಿತ್ರೀಕರಣ ಬಹುತೇಕ ಮುಗಿಯುತ್ತ ಬಂದಿದೆ. ಜೊತೆಗೆ ಬಹುನಿರೀಕ್ಷೆಯ ಯುವರತ್ನ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಯುವರತ್ನ ಸಿನಿಮಾ ಏಪ್ರಿಲ್ 1ರಂದು ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.