ವಿಚಾರಣೆಗಾಗಿ ಐಟಿ ಕಛೇರಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್
ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆದು ಮೂರು ದಿನಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ ವಿಚಾರಣೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಐಟಿ ಕಛೇರಿಗೆ ಆಗಮಿಸಿದ್ದಾರೆ.
ನೋಟೀಸ್ ಜಾರಿ ಆಗಿದ್ದರಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇರುವ ಆದಾಯ ತೆರಿಗೆ ಇಲಾಖೆಗೆ ಇಂದು ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದರು.
ಪುನೀತ್ ರವರ ಆದಾಯ ಮೂಲಗಳ ಬಗ್ಗೆ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಸೂಕ್ತ ದಾಖಲೆಗಳನ್ನು ಅಪ್ಪು ಒದಗಿಸಬೇಕಿದೆ.

ಜನವರಿ 3 ರಂದು ಬೆಳ್ಳಂಬೆಳಗ್ಗೆ ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡ ನಟರು ಮತ್ತು ನಿರ್ಮಾಪಕರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಪುನೀತ್ ರವರ ಸದಾಶಿವನಗರದ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು 45 ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿದ್ದರು.
''ಅಕೌಂಟ್ ವಿಚಾರವಾಗಿ ಐಟಿ ರೇಡ್ ನಡೆದಿದೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟಿದ್ದೇವೆ. ವಿಚಾರಣೆಗೆ ಸಹಕಾರ ನೀಡುತ್ತೇವೆ'' ಅಂತ ಐಟಿ ರೇಡ್ ಮುಗಿದ ಬಳಿಕ ಪುನೀತ್ ರಾಜ್ ಕುಮಾರ್ ತಿಳಿಸಿದ್ದರು.
ವಿಚಾರಣೆಗೆ ಇಂದು ಹಾಜರ್ ಆಗುವಂತೆ ನೋಟೀಸ್ ಬಂದಿದ್ದರಿಂದ, ಪುನೀತ್ ರಾಜ್ ಕುಮಾರ್ ಐಟಿ ಕಛೇರಿಗೆ ತೆರಳಿದ್ದಾರೆ.


Click it and Unblock the Notifications











