ಪವರ್ ಫುಲ್ ಹನುಮನ ದರ್ಶನ ಪಡೆದ ಪುನೀತ್ ರಾಜ್ ಕುಮಾರ್ ದಂಪತಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಕಾಳಿ ನದಿ ಕುರಿತ ಸಾಕ್ಷ್ಯ ಚಿತ್ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಪವರ್ ಸ್ಟಾರ್ ಸಾಕ್ಷ್ಯ ಚಿತ್ರದಲ್ಲೂ ನಿರತರಾಗಿರುವುದು ಅಚ್ಚರಿ ಮೂಡಿಸಿದೆ. ಸಾಕ್ಷ್ಯ ಚಿತ್ರ ಚಿತ್ರೀಕರಣ ನಿಮಿತ್ತ ಪುನೀತ್, ಉತ್ತರ ಕನ್ನಡ, ದಾಂಡೇಲಿ, ಧಾರವಾಡ ಸುತ್ತಾಡುತ್ತಿದ್ದಾರೆ. ಶೂಟಿಂಗ್ ಜೊತೆಗೆ ಪವರ್ ಸ್ಟಾರ್ ಐತಿಹಾಸಿಕ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ.

ಇತ್ತೀಚಿಗೆ ಪುನೀತ್ ಧಾರವಾಡದ ಐತಿಹಾಸಿಕ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಅಶ್ವಿನಿ ಜೊತೆ ಅಪ್ಪು ದೇವಸ್ಥಾನಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಪುನೀತ್ ದಾಂಡೇಲಿಗೆ ಭೇಟಿ ನೀಡಿದ್ದರು, ವಾಪಸ್ ಹೋಗುವಾಗ ನುಗ್ಗಿಕೇರಿಗೆ ಭೇಟಿ ನೀಡಿದ್ದಾರೆ.

ಈ ವೇಳೆ ದೇವಸ್ಥಾನದ ವತಿಯಿಂದ ಪುನೀತ್ ರಾಜ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಂದಹಾಗೆ ಪವರ್ ಸ್ಟಾರ್ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಸಹ ಪವರ್ ಫುಲ್ ನುಗ್ಗಿಕೇರಿ ಹನುಮನ ದರ್ಶನ ಪಡೆದಿದ್ದರು. ಯುವರತ್ನ ಸಿನಿಮಾದ ಚಿತ್ರೀಕರಣ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದ್ದರು.

Puneeth Rajkumar visits Nuggikeri Anjaneya Temple in Dharwad

ಇತ್ತೀಚಿಗೆ ಜೋಯಿಡಾ ವನ್ಯ ಜೀವಿ ತಾಣಕ್ಕೆ ಭೇಟಿ ನೀಡಿ ಪುನೀತ್ ರಾಜ್ ಕುಮಾರ್ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದರು. ಇದೇ ವೇಳೆ ಜೋಯಿಡಾದ ವಿಶೇಷ ಜೇನು ಸವಿದು ಸಂತೃಪ್ತರಾಗಿದ್ದಾರೆ. ಅಲ್ಲಿಯ ಹನಿ ಬೀ ಪಾರ್ಕ್ ನಲ್ಲಿ ಜೋನು ಕೃಷಿ ನೋಡಿ ಸಂತಸಪಟ್ಟಿದ್ದಾರೆ. ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್ ನ ಟೀ ಶರ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ವನ್ಯಜೀವಿ ತಾಣದಲ್ಲಿ ಪಕ್ಷಿ ವೀಕ್ಷಣೆ ಮಾಡಿ ಖುಷಿ ಪಟ್ಟಿದ್ದಾರೆ.

Recommended Video

ದಿಯಾ ಹೀರೊ ಪೃಥ್ವಿ ಅಂಬರ್ ಗೆ ಹುಡುಕಿಕೊಂಡು ಬಂದ ಆಫರ್ | Filmibeat Kannada

More from Filmibeat

English summary
Power star Puneeth Rajkumar visits Nuggikeri Anjaneya Temple in Dharwad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X