ಜೇಮ್ಸ್‌ ನಲ್ಲಿ ಪುನೀತ್‌ರಾಜ್‌ಕುಮಾರ್‌ ಅವರದ್ದೇ ಧ್ವನಿ

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ನೆನಪು ಮಾತ್ರ. ಅಪ್ಪು ಇಲ್ಲದೇ ಇರುವುದು ಕನ್ನಡ ಸಿನಿಮಾರಂಗದ ದೊಡ್ಡ ನಷ್ಟ. ಪುನೀತ್‌ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಕರುನಾಡಿನ ಪ್ರತಿ ಮನೆಯಲ್ಲಿ ಸೂತಕದ ಛಾಯೆ ಸೃಷ್ಟಿಯಾಗಿದೆ. ಇನ್ನು ಮುಂದೆ ಪುನೀತ್ ರಾಜಕುಮಾರ್ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ, ಅವರ ಅಭಿನಯವನ್ನು ಬೆಳ್ಳಿ ಪರದೆ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದನ್ನು ನೆನಸಿಕೊಳ್ಳಲು ಸಾಧಗಯವಾಗುತ್ತಿಲ್ಲ. ಇನ್ನೂ ಪುನೀತ್‌ ಅಭಿನಯದ ಕೊನೆಯ ಸಿನಿಮಾ ಜೇಮ್ಸ್‌ ಗತಿ ಏನು ಅನ್ನುವ ಆತಂಕ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಈಗ ಚಿತ್ರತಂಡ ಎಲ್ಲ ಆತಂಕವನ್ನ ದೂರ ಮಾಡುವ ಭರವಸೆ ನೀಡಿದೆ.

ಅಪ್ಪು ಚಿತ್ರೀಕರಣದ ವೇಳೆಯ ಸಂಭಾಷಣೆಯೇ ಚಿತ್ರದಲ್ಲಿ ಬಳಕೆ!

ಜೇಮ್ಸ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ. ಈ ಚಿತ್ರ ರಿಲೀಸ್‌ ಮಾಡಲು ಚಿತ್ರತಂಡ ಮುಂದಾಗಿದೆ. ಜೇಮ್ಸ್‌ ತೆರೆಗೆ ಬರಬೇಕು ಅನ್ನುವುದು ಪ್ರತಿಯೊಬ್ಬ ಕನ್ನಡಿಗನ ಆಸೆ. ಅದನ್ನು ಚಿತ್ರತಂಡ ಈಡೇರಿಸುತ್ತಿದೆ. ಅದರೆ, ಚಿತ್ರದ ಡಬ್ಬಿಂಗ್‌ ವಿಚಾರಕ್ಕೆ ಬಂದರೆ, ಪುನೀತ್‌ ಪಾತ್ರದ ಡಬ್ಬಿಂಗ್‌ ಮುಗಿದಿಲ್ಲ. ಡಬ್ಬಿಂಗ್ ಬಾಕಿ ಇರುವ ಕಾರಣಕ್ಕೆ ಅಪ್ಪುಗೆ ಯಾರು ಧ್ವನಿ ನೀಡುತ್ತಾರೆ ಎನ್ನುವಂತಹ ಪ್ರಶ್ನೆ ಎದುರಾಗಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಪ್ಪುಗೆ ಬೇರೆ ಯಾರೂ ಧ್ವನಿ ನೀಡ ಬೇಕಿಲ್ಲ. ಅದರ ಅವಶ್ಯಕತೆ ಇಲ್ಲ ಅಂತಿದೆ ಚಿತ್ರತಂಡ. ಪುನೀತ್‌ ಅವರ ನೈಜ ಧ್ವನಿಯನ್ನೇ ಸಿನಿಮಾಗೆ ಬಳಸಿ ಕೊಳ್ಳಲು ಚಿತ್ರತಂಡ ಮುಂದಾಗಿದೆ.

ಶೂಟಿಂಗ್ ಸಂದರ್ಭದಲ್ಲಿ ಅಪ್ಪು ನಡೆಸಿರುವ ಸಂಭಾಷಣೆಯನ್ನು ಹಾಗೆ ಉಳಿಸಿಕೊಳ್ಳಲಿದೆ ಚಿತ್ರತಂಡ. ಚಿತ್ರೀಕರಣ ವೇಳೆ ರೆಕಾರ್ಡ್‌ ಆಗಿರುವ ಅದೇ ಸಂಭಾಷಣೆಯನ್ನು ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಈ ಕುರಿತಾಗಿ ಸಿನಿಮಾ ತಂಡ ಬಾಂಬೆ ಮೂಲದ ಕಂಪನಿಗಳ ಜೊತೆಗೆ ಚರ್ಚೆ ನಡೆಸುತ್ತಿದೆ. ಅದೇ ಧ್ವನಿಯನ್ನು ಎನ್‌ಹ್ಯಾನ್ಸ್‌ ಮಾಡುವ ಮೂಲಕ ಬಳಸಿಕೊಳ್ಳಲು ಮುಂದಾಗಿದೆ. ಶತಾಯ ಗತಾಯ ಪ್ರಯತ್ನ ಮಾಡಿ, ತಂತ್ರಜ್ಞಾನ ಬಳಸಿ ಅಪ್ಪು ಧ್ವನಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎನ್ನುವ ಪ್ರಯತ್ನಕ್ಕೆ ಜೇಮ್ಸ ಚಿತ್ರತಂಡ ಮುಂದಾಗಿದೆ. ಅಪ್ಪು ಅಭಿನಯದ ಕಟ್ಟ ಕಡೆಯ ಚಿತ್ರದಲ್ಲಿ ಅವರ ಧ್ವನಿ ಇಲ್ಲ ಎಂದಾದರೆ ಅದನ್ನು ನೋಡಿ ಅರಗಿಸಿಕೊಳ್ಳಲು ಕಷ್ಟಕರವಾಗಬಹುದು.

Puneeth Rajkumar Voice Will Be Their In Film Jems

ಈ ವಿಚಾರದಲ್ಲಿ ತಾಂತ್ರಿಕವಾಗಿ ಏನೆಲ್ಲ ಸಾಧ್ಯತೆ ಇದೆಯೋ ಅದನ್ನೆಲ್ಲಾ ಮಾಡಲು ಸಿನಿಮಾ ತಂಡ ಮುಂದಾಗಿದೆ. ಯಾಕಂದ್ರೆ ಇಲ್ಲಿ ಅಪ್ಪು ಪಾತ್ರ, ಅಪ್ಪು ಸಿನಿಮಾ ಎಷ್ಟು ಮುಖ್ಯವೋ ಅವರ ಈ ಚಿತ್ರದಲ್ಲಿ ಅವ್ರ ಪಾತ್ರಕ್ಕೆ ಅವರ ಧ್ವನಿ ಇರುವುದು ಅಷ್ಟೇ ಮುಖ್ಯ. ಇದು ಕೇಲವ ಚಿತ್ರತಂಡಕ್ಕೆ ಮಾತ್ರ ಸೀಮಿತ ಆಗಿರೋ ವಿಚಾರ ಅಲ್ಲ. ಬದಲಿಗೆ ಇಡೀ ಚಿತ್ರರಂಗ ಮತ್ತು ಕರುನಾಡಿಗೇನೆ ಮುಖ್ಯವಾದ ವಿಚಾರ.

ಜೇಮ್ಸ್ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿಲ್ಲ. ಚಿತ್ರ ರಿಲೀಸ್ ಆಗುತ್ತೋ ಇಲ್ಲವೋ ಎನ್ನುವ ಆತಂಕ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆ ಆತಂಕಕ್ಕೆ ಉತ್ತರಿಸಿರುವ ಚಿತ್ರತಂಡ ಸಿನಿಮಾವನ್ನು ಮಾಡುತ್ತೇವೆ ಎಂದು ಹೇಳಿದೆ. ಸಿನಿಮಾವನ್ನು 2022ರ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಮಾರ್ಚ್ 17ರಂದು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಹಾಗಾಗಿ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಈಗಾಗಲೇ ಚಿತ್ರತಂಡ ಆರಂಭಿಸಿದೆ. ಜೊತೆಗೆ ಡಬ್ಬಿಂಗ್ ವಿಚಾರ ಬಂದಾಗ ಅಪ್ಪುಗೆ ಇನ್ಯಾರೋ ಧ್ವನಿ ಕೊಡಬೇಕಾಗುತ್ತೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ಸುದ್ದಿಯನ್ನು ಸುಳ್ಳು ಮಾಡಿದೆ. ಇದು ಒಂದು ರೀತಿ ಕರುನಾಡಿನ ಪ್ರತಿಯೊಬ್ಬರಿಗೂ ಸಮಾಧಾನಕರ ಸುದ್ದಿ ಅಂತ ಹೇಳಬಹುದು.

Puneeth Rajkumar Voice Will Be Their In Film Jems

ಅಪ್ಪು ಧ್ವನಿ ಇಲ್ಲದೆ ಅವರನ್ನ ತೆರೆಮೇಲೆ ನೋಡುವುದು ಕೂಡ ಕಷ್ಟ. ಪುನೀತ್‌ ರಾಜ್‌ಕುಮಾರ್‌ ಅಂದರೆ ಪರಿಪೂರ್ಣ ವ್ಯಕ್ತಿತ್ವ. ಅವರನ್ನ ಪರಿಪೂರ್ಣವಾಗಿ ತೆರೆಮೇಲೆ ನೋಡಲು ಪ್ರತಿಯೊಬ್ಬ ಕಾಯುತ್ತಾರೆ. ಹಾಗಾಗಿ ಅವರ ರೂಪಕ್ಕೆ ಇನ್ಯಾರದ್ದೋ ಧ್ವನಿಯನ್ನು ಸೇರಿಸುವುದು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವ ವಿಚಾರ. ಅದರಲ್ಲೂ ಈ ಚಿತ್ರದಲ್ಲಿ ಅಪ್ಪು ಏನೇ ಮಾತನಾಡಿದ್ದರೂ, ಅಭಿನಯಿಸಿದ್ದರು ಅದುವೇ ಕೊನೆ. ಇನ್ನು ಯಾವತ್ತೂ ಕೂಡ ಅಪ್ಪು ಸಿನಿಮಾದಲ್ಲಿ ಅಭಿನಯಿಸುವುದಿಲ್ಲ. ಯಾವುದೇ ಸಿನಿಮಾದಲ್ಲಿ ಡಬ್‌ ಮಾಡುವುದಿಲ್ಲ, ಚಿತ್ರದ ಹಾಡಿಗೆ ಧ್ವನಿಯಾಗುವುದು ಇಲ್ಲ. ಹಾಗಾಗಿಯೇ ಅಪ್ಪು ಅವರ ಸಂಭಾಷಣೆಯನ್ನು ಹಾಗೆಯೇ ತೆರೆಯ ಮೇಲೆ ತರಲು ಚಿತ್ರತಂಡ ಪಣತೊಟ್ಟಿದೆ.

More from Filmibeat

English summary
Puneeth Rajkumar Voice Will Be Their In Film Jems
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X